ಇದು ತುಂಬಾ ಬೇಸರದ ಸಂಗತಿ ಎಂದ ನಟಿ ಸುಧಾರಾಣಿ
ಸ್ಪಂದನಾ ಪುತ್ರ ಶೌರ್ಯನಿಗೆ ಭಗವಂತ ವಿಶೇಷ ಶಕ್ತಿ ಕೊಡಲಿ
ಸ್ಪಂದನಾ ಆತ್ಮೀಯ, ವಿಶ್ವಾಸದಿಂದ ಎಲ್ಲರನ್ನೂ ಕಾಣುತ್ತಿದ್ದರು
ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಬಿ.ಕೆ ಶಿವರಾಂ ಅವರ ನಿವಾಸದಲ್ಲಿ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಮೃತದೇಹದ ಅಂತಿಮ ದರ್ಶನವನ್ನು ಕುಟುಂಬಸ್ಥರು, ಗಣ್ಯರು, ತಾರೆಯರು, ಸಾರ್ವಜನಿಕರು ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ನಟಿ ಸುಧಾರಾಣಿ, ಗಾಯಕ ವಿಜಯ್ ಪ್ರಕಾಶ್ ಕೂಡ ಅಂತಿಮ ದರ್ಶನ ಪಡೆದ ಬಳಿಕ ರಾಘವೇಂದ್ರ ರಾಜ್ಕುಮಾರ್ಗೆ ಧೈರ್ಯ ಹೇಳಿದರು.
ನಂತರ ಮಾಧ್ಯಮದ ಮುಂದೆ ಮಾತನಾಡಿದ ನಟಿ ಸುಧಾರಾಣಿ, ಏನು ಹೇಳೋದು, ಇದು ತುಂಬಾ ಬೇಸರದ ಸಂಗತಿ. ವಿಜಯ್ ರಾಘವೇಂದ್ರ, ಸ್ಪಂದನಾ ತುಂಬಾ ಸಾಫ್ಟ್ ಆಗಿರುವಂತವರು. ಒಳ್ಳೆಯ ಸಂಸ್ಕೃತಿ ಇರೋ ದಂಪತಿ. ಅವರ ಕುಟುಂಬದ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲಪಾ. ಇದು ತುಂಬಾ ಅನ್ಯಾಯ. ಇಡೀ ವಿಜಯ್ ರಾಘವೇಂದ್ರ ಕುಟುಂಬಕ್ಕೆ ಈ ನೋವು, ಸಂಕಟ ಭರಿಸೋ ಶಕ್ತಿ ಆ ದೇವರು ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇದು ತುಂಬಾ ಬೇಜಾರ್ ಆಗಿರೋ ಸಂಗತಿ. ವಿಜಯ್ ರಾಘವೇಂದ್ರ, ಸ್ಪಂದನಾ ಸಾಫ್ಟ್ ಆಗಿರುವಂತವರು. ಒಳ್ಳೆಯ ಸಂಸ್ಕೃತಿ ಇರೋ ದಂಪತಿ ಎಂದು ಭಾವುಕರಾಗಿ ನುಡಿದ ನಟಿ ಸುಧಾರಾಣಿ.
#vijayaraghavendra #spandana #spandanavijayraghavendra #sudharani pic.twitter.com/VtP0vncDc5— NewsFirst Kannada (@NewsFirstKan) August 9, 2023
ಸ್ಪಂದನಾ ಮೃದು ಸ್ವಭಾವದ ಹುಡುಗಿ. ಮಾತುಗಳು ತುಂಬಾ ಕಡಿಮೆ ಮಾತನಾಡ್ತಿದ್ದಳು. ಎಲ್ಲೇ ಕಾಣಿಸಿದರೂ ಆತ್ಮೀಯತೆ, ವಿಶ್ವಾಸ ಇರುತ್ತಿತ್ತು. ಒಂದು ತಿಂಗಳು ಹಿಂದೆ ಇಬ್ಬರು ಭೇಟಿಯಾಗಿದ್ದೇವು. ಇದೇ ಕೊನೆ ಭೇಟಿ ಆಗುತ್ತೆಂದು ಅಂದುಕೊಂಡಿರಲಿಲ್ಲ. ನಂಬಲು ಆಗದಂತ ಘಟನೆ ನಡೆದು ಹೋಗಿದೆ ಎಂದು ಭಾವುಕರಾದರು.
ಇನ್ನು ಗಾಯಕ ವಿಜಯ್ ಪ್ರಕಾಶ್ ಅವರು ಮಾತನಾಡಿ, ಮಲಗಿರುವವರನ್ನ ಭೇಟಿ ಮಾಡೋದು ಬಹಳ ಕಷ್ಟಕರ. ಆತ್ಮೀಯತೆಯಿಂದ, ವಿಶ್ವಾಸದಿಂದ ಮಾತನಾಡಿದಂತವರು. ಭಗವಂತ ಅವರ ಕುಟುಂಬಕ್ಕೆ, ಅದರಲ್ಲಿ ವಿಶೇಷವಾಗಿ ಅವರ ಮಗುವಿಗೆ ಭಗವಂತ ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ