newsfirstkannada.com

×

ವಿಜಯ ರಾಘವೇಂದ್ರ ಅವರ ಈ ಪಾತ್ರ ಸ್ಪಂದನಾ ಅವರಿಗೆ ಬಲು ಇಷ್ಟವಂತೆ.. ಆ ಸಿನಿಮಾ ಯಾವುದು?

Share :

Published August 31, 2023 at 5:19pm

Update August 31, 2023 at 5:23pm

    ಕದ್ದ ಚಿತ್ರದಲ್ಲಿ ನಟ ವಿಜಯ್​ ರಾಘವೇಂದ್ರ

    ವಿಜಯ್​ ಕ್ಷತ್ರೀಯನಾಗಿ ಬದಲಾದ ಚಿನ್ನಾರಿ ಮುತ್ತಾ

    ಸ್ಪಂದನಾ ನೀಡುತ್ತಿದ್ದ ಧೈರ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ ವಿಜಿ

ನಟ ವಿಜಯ​ ರಾಘವೇಂದ್ರ ‘ಕದ್ದ ಚಿತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕುರಿತಾಗಿ ನ್ಯೂಸ್​ ಫಸ್ಟ್ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಹೃದಯಾಘಾತಕ್ಕೆ ಸಾವನ್ನಪ್ಪಿದ್ದ ಪತ್ನಿ ಸ್ಪಂದನಾರ ಕುರಿತಾಗಿಯೂ ಮನಬಿಚ್ಚಿ ಮಾತನಾಡಿದ್ದಾರೆ. ಸ್ಪಂದನಾ ಅವರು ಬಲು ಇಷ್ಟಪಟ್ಟ ಸಿನಿಮಾದ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಸ್ಪಂದನಾರಿಗೆ ಕಲ್ಲರಲಿ ಹೂವಾಗಿ ಸಿನಿಮಾ ಬಲು ಇಷ್ಟವಂತೆ. ವಿಜಯ ರಾಘವೇಂದ್ರ ಅವರು ಸ್ಪಂದನಾರನ್ನು ಮದವೆಯಾಗುವ ಮುನ್ನ ಈ ಸಿನಿಮಾ ವೀಕ್ಷಿಸಿದ್ದರು. ಆ ಬಳಿಕ ವಿಜಿಗೆ ಫೋನ್​ ಮಾಡಿದ್ದರು ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ವಿಜಯ ರಾಘವೇಂದ್ರ ಅವರು, ಸ್ಪಂದನಾ ಅವರಿಗೆ ‘ಮಾಲ್ಗುಡಿ ಡೇಸ್​’ ಸಿನಿಮಾ ಇಷ್ಟವಾಗಿತ್ತು. ‘ಸೀತಾರಾಮ್​​ ಬೆನಾಯ್ ಕೇಸ್​​ ನಂ 18’ ಇಷ್ಟವಾಗಿತ್ತು. ಕದ್ದ ಚಿತ್ರದ ಬಗ್ಗೆ ಆಸೆಯಿತ್ತು. ತಲೆ ಕೆಡಿಸಿಕೊಳ್ಳಬೇಡ ಜನ ಕೈ ಹಿಡಿತಾರೆ ಕರ್ಕೊಂಡು ಹೋಗುತ್ತಾರೆ. ನಾವೇನು ಕಷ್ಟಪಟ್ಟಿದಿವೋ ನಮ್ಮದೇನು ಶ್ರಮ ಇದೆಯೊ, ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ. ಏನು ಹೆದರಿಕೊಳ್ಳುವುದು ಬೇಕಾಗಿಲ್ಲ. ಕೆಲಸ ಮಾಡೋದು ಗೊತ್ತಾಗಿದೆ. ನಮ್ಮದೊಂದು ಚಿತ್ರತಂಡ ಆಗಿದೆ. ಸುಮ್ಮೆ ಪ್ರಯತ್ನಗಳನ್ನು ಮಾಡಿಕೊಂಡು ಹೋಗೋಣ ಎಂದು ಪತ್ನಿ ಸ್ಪಂದನಾ ನೀಡುತ್ತಿದ್ದ ಧೈರ್ಯದ ಬಗ್ಗೆ ವಿಜಿ ಹೇಳಿದ್ದಾರೆ.

ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಅವರು ಹೃದಯಾಘಾತಕ್ಕೆ ನಿಧನರಾದರು. ವಿದೇಶ ಪ್ರವಾಸದ ವೇಳೆ ಅಸುನೀಗಿದರು. ವಿಜಿ ‘ಕದ್ದ ಚಿತ್ರ’ ಸಿನಿಮಾದಲ್ಲಿ ನಟಿಸುತ್ತಿರುವುದು ಸ್ಪಂದನಾ ಅವರಿಗೆ ಭಾರೀ ಇಷ್ಟವಿತ್ತು. ಸಿನಿಮಾ ಬಗ್ಗೆ ಪ್ರೋತ್ಸಾಹ ಕೂಡ ನೀಡುತ್ತಿದ್ದರು ಎಂದು ಹಲವು ಭಾರಿ ವಿಜಯ್​ ರಾಘವೇಂದ್ರ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯ ರಾಘವೇಂದ್ರ ಅವರ ಈ ಪಾತ್ರ ಸ್ಪಂದನಾ ಅವರಿಗೆ ಬಲು ಇಷ್ಟವಂತೆ.. ಆ ಸಿನಿಮಾ ಯಾವುದು?

https://newsfirstlive.com/wp-content/uploads/2023/08/Spandana-Vijay-Raghavendra.jpg

Load More