newsfirstkannada.com

6,4,4,4,4,4,4,4; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಆರ್​​ಸಿಬಿ ಸ್ಟಾರ್​ ಪ್ಲೇಯರ್​

Share :

Published August 30, 2024 at 7:43pm

    ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಮಹತ್ವದ ಪಂದ್ಯ

    ಹುಬ್ಬಳ್ಳಿ ಟೈಗರ್ಸ್​​ ವಿರುದ್ಧ ಗೆದ್ದು ಬೀಗಿದ ಗುಲ್ಬರ್ಗ ಮಿಸ್ಟೆಕ್ಸ್‌ ತಂಡ

    ಆರ್​​ಸಿಬಿ ತಂಡದ ಆಟಗಾರನ ಬ್ಯಾಟಿಂಗ್​ಗೆ ಬೆಚ್ಚಿಬಿದ್ದ ಹುಬ್ಬಳ್ಳಿ!

ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​​ ವಿರುದ್ಧ ಗುಲ್ಬರ್ಗ ಮಿಸ್ಟೆಕ್ಸ್‌ ಗೆದ್ದು ಬೀಗಿದೆ. ಸಂಘಟಿತ ಹೋರಾಟದ ಫಲವಾಗಿ ಬರೋಬ್ಬರಿ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಗುಲ್ಬರ್ಗ ಮಿಸ್ಟೆಕ್ಸ್‌ ಟೂರ್ನಿಯಲ್ಲಿ 5ನೇ ಜಯ ದಾಖಲಿಸಿದೆ.

ಹುಬ್ಬಳ್ಳಿ ನೀಡಿದ ಗುರಿಯನ್ನು ಹಿಂಬಾಲಿಸಿದ ಗುಲ್ಬರ್ಗ ಮಿಸ್ಟೆಕ್ಸ್‌ ತಂಡದ ಆರಂಭ ಕಳಪೆಯಾಗಿತ್ತು. ಓಪನಿಂಗ್​ ಬ್ಯಾಟರ್ಸ್​ ಆದ ಲವನಿತ್‌ ಸಿಸೋಡಿಯಾ, ಕೆ.ವಿ ಅನೀಶ್‌, ಬಿಆರ್ ಶರತ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಸೌರಭ್ ಮುತ್ತೂರು ಸಹ ನಿರಾಸೆ ಅನುಭವಿಸಿದರು.

ಬಳಿಕ ಬಂದ ಆರ್​​ಸಿಬಿ ಸ್ಟಾರ್​ ಆಟಗಾರ ವಿಜಯ್‌ ಕುಮಾರ್ ವೈಶಾಖ್ ಮಹತ್ವದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ರು. ತಾನು ಎದುರಿಸಿದ 33 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 51 ರನ್‌ ಸಿಡಿಸಿದರು. ಇವರ ಸಹಾಯದಿಂದ ಗುಲ್ಬರ್ಗ ಇನ್ನು 5 ಎಸೆತ ಬಾಕಿ ಇರುವಂತೆಯೇ ಅಗತ್ಯ ರನ್ ಕಲೆ ಹಾಕಿತು.

ಇದನ್ನೂ ಓದಿ: ಗಿಲ್ ವಿರುದ್ಧ ಹರಿಹಾಯ್ದ ಕೊಹ್ಲಿ.. ಆಕ್ರೋಶ ಕಂಡು ಫ್ಯಾನ್ಸ್ ತಬ್ಬಿಬ್ಬು.. ಅಸಲಿಗೆ ಆಗಿದ್ದೇನು? VIDEO

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

6,4,4,4,4,4,4,4; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಆರ್​​ಸಿಬಿ ಸ್ಟಾರ್​ ಪ್ಲೇಯರ್​

https://newsfirstlive.com/wp-content/uploads/2024/08/RCB-4.jpg

Load More