newsfirstkannada.com

ಇಂದು ಸಂಜೆ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ; ಅಂತ್ಯಕ್ರಿಯೆ ಯಾವಾಗ? ಎಲ್ಲಿ? ಇಲ್ಲಿದೆ ಮಾಹಿತಿ

Share :

08-08-2023

    ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಬಾಳಲ್ಲಿ ಬರಸಿಡಿಲು ಅಪ್ಪಳಿಸಿದೆ

    ಬ್ಯಾಂಕಾಕ್‌ನಲ್ಲಿ ವಿಧಿವಶರಾದ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ

    ಇಂದು ಸಂಜೆ ಬೆಂಗಳೂರಿಗೆ ಬರಲಿದೆ ಸ್ಪಂದನಾ ಪಾರ್ಥಿವ ಶರೀರ

ಗಂಧದ ಗುಡಿಯ ಚಿನ್ನಾರಿ ಮುತ್ತನ ಬಾಳಲ್ಲಿ ಬರಸಿಡಿಲು ಅಪ್ಪಳಿಸಿದೆ. ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ವಿಧಿವಶರಾಗಿದ್ದಾರೆ. ಇದು ಇಡೀ ಚಂದನವನವನ್ನ ದುಃಖದ ಮಡುವಿಗೆ ನೂಕಿದೆ. ಇನ್ನು ಇಂದು ಸಂಜೆ ಬೆಂಗಳೂರಿಗೆ ಪಾರ್ಥಿವ ಶರೀರ ಆಗಮಿಸಲಿದೆ. ಇನ್ನೊಂದೆಡೆ ಅಂತ್ಯಕ್ರಿಯೆಗೂ ಸಿದ್ಧತೆ ನಡೀತಿದೆ.

ಚಿನ್ನಾರಿಮುತ್ತನ ಬಾಳಲ್ಲಿ ಬರಸಿಡಿಲು ಅಪ್ಪಳಿಸಿದೆ. ವಿಧಿಯ ಘೋರ ಬರಹಕ್ಕೆ ರಿಷಿಯ ಒಲವಿನ ಪತ್ನಿ ಮರೆಯಾಗಿದ್ದಾಳೆ. ಸದಾ ನಿನಗಾಗಿ ಎಂದು ಮಿಡಿಯುತ್ತಿದ್ದ ಗಂಧದ ಗುಡಿಯ ಶ್ರೀ ಪಾಲಿಗೆ ಅವಳು, ಕಲ್ಲರಳಿ ಹೂವಾದವಳು. ಅವಳು ಅಷ್ಟೇ ಸೇವಂತಿಯಂತೆ ತಮ್ಮ ಯಜಮಾನರ ಸುಂದರ ಬದುಕಿನ ಘಮವಾಗಿದ್ಲು. 2007ರಲ್ಲಿ ನಾನು ನೀನು ಜೋಡಿ ಅಂತ ವಿವಾಹ ಬಂಧನಕ್ಕೆ ಒಳಗಾದ ಸ್ಯಾಂಡಲ್​ವುಡ್​ನ ಬೆಸ್ಟ್​​ ಪೇರ್​ ಆಗಿ ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದರು. ಈಗ ಅದೆಲ್ಲವೂ ಮಿಂಚಿನ ಓಟದಂತೆ ಮರೆಯಾದ ನಿಮಿಷಗಳಷ್ಟೇ.

ಮೃತದೇಹ ಬೆಂಗಳೂರಿಗೆ ತರೋದು ಅಷ್ಟು ಸುಲಭವಲ್ಲ

ಬದುಕೆಂಬ ಜಟಕಾ ಬಂಡಿ ಹತ್ತಿ ಹೊರಟಿದ್ದ ಈ ಜೋಡಿ ಜೀವನದಲ್ಲಿ ವಿಧಿಯಾಟವಾಡಿದ್ದು, ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನ ಸಣ್ಣ ವಯಸ್ಸಿಗೆ ಉಸಿರು ಚೆಲ್ಲಿದ್ದಾರೆ. ಕಸಿನ್ಸ್​ ಜೊತೆ ಬ್ಯಾಂಕಾಕ್​ ಟ್ರಿಪ್​ ಹೋಗಿದ್ದ ಸ್ಪಂದನ ರಾತ್ರಿ ಮಲಗಿದ್ದವರು ಮೇಲೆ ಏಳಲೇ ಇಲ್ಲ ಅಂತ ಕೆಲವರು ಹೇಳಿದ್ರೆ ಮತ್ತೆ ಕೆಲವರು ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿದೆ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್‌ನ ಕೆಸಿಹೆಚ್ ಆಸ್ಪತ್ರೆಯಲ್ಲಿ ಮುಗಿದಿದ್ದು. ಮುಂದಿನ ಪ್ರಕ್ರಿಯೆಗಳು ನಡೀತಿದೆ.

ಸ್ಪಂದನಾ ವಿದೇಶದಲ್ಲಿ ಸಾವನ್ನಪ್ಪಿರೋಂದ್ರಿಂದ ಮೃತದೇಹ ಬೆಂಗಳೂರಿಗೆ ತರೋದು ಅಷ್ಟು ಸುಲಭವಾಗಿಲ್ಲ. ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕಿದೆ.

ಏನೆಲ್ಲಾ ಪ್ರಕ್ರಿಯೆ?

ಬ್ಯಾಂಕಾಕ್​ನ ಆಸ್ಪತ್ರೆಯಿಂದ ವೈದ್ಯಕೀಯ ವರದಿ ಪಡೆಯಬೇಕು. ವೈದ್ಯಕೀಯ ವರದಿಯ ಜೊತೆ ಮರಣ ಪ್ರಮಾಣ ಪತ್ರ ಇಟ್ಕೊಂಡು ಸಂಪೂರ್ಣವಾಗಿ ಪೊಲೀಸ್ ರಿಪೋರ್ಟ್ ಪಡೆದುಕೊಳ್ಳಬೇಕು. ವರದಿ ಬೇರೆ ಭಾಷೆಯಲ್ಲಿದ್ರೆ, ಇಂಗ್ಲೀಷ್​ಗೆ ತರ್ಜುಮೆ ಮಾಡಿಸಬೇಕು. ಜೊತೆಗೆ ಮೃತರ ಪಾಸ್​ಪೋರ್ಟ್, ವೀಸಾ ಜೆರಾಕ್ಸ್ ಪ್ರತಿ ಮಾಡಿಸಬೇಕು. ಇವೆಲ್ಲವನ್ನೂ ಥಾಯ್ಲೆಂಡ್​ನಲ್ಲಿರುವ ಭಾರತೀಯ ಎಂಬೆಸಿಗೆ ನೀಡಬೇಕು. ನಂತರ ಮೃತದೇಹ ರವಾನೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು ಅಗಷ್ಟೇ ಮೃತದೇಹ ರವಾನೆ ಸಾಧ್ಯವಾಗೋದು

ಇಂದು ಸಂಜೆಯೊಳಗೆ ಸ್ಪಂದನಾ ಮೃತದೇಹ ಬೆಂಗಳೂರಿಗೆ ಬರಲಿದೆ. ಈ ಬಗ್ಗೆ ವಿಜಯ್​ ರಾಘವೇಂದ್ರ ಅವರ ತಂದೆ ಚಿನ್ನೇಗೌಡ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ತಿದ್ದಾರೆ.

ನಾಳೆ ಅಂತ್ಯಕ್ರಿಯೆ

ಮೃತದೇಹ ತರೋದಕ್ಕೆ ವಿಶೇಷ ವಿಮಾನ ಸಿದ್ಧವಿರೋದಾಗಿ ಬಿ.ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ. ಇನ್ನು, ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಅಂತ್ಯಕ್ರಿಯೆ ಎಲ್ಲಿ ಮಾಡ್ಬೇಕು..? ಯಾವ ಸಂಪ್ರದಾಯದಲ್ಲಿ ಮಾಡಬೇಕು ಅನ್ನೋದ್ರ ಬಗ್ಗೆ ಕುಟುಂಬಸ್ಥರು ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ ಬುಧವಾರ ಅಂದ್ರೆ ನಾಳೆ ಅಂತ್ಯಕ್ರಿಯೆ ಆಗುತ್ತೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ.

ಇನ್ನು ಮಲ್ಲೇಶ್ವರಂ ಗ್ರೌಂಡ್ ಅಥವಾ ಬಿಜೆಪಿ ಆಫೀಸ್ ಎದುರಿನ ಮೈದಾನ ಎರಡರಲ್ಲಿ‌ ಒಂದು ಕಡೆ ಅಂತಿಮ ದರ್ಶನಕ್ಕೆ ಪ್ಲ್ಯಾನ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಈಡಿಗಾ ಸಮುದಾಯದ ಪ್ರಕಾರ ಅಂತ್ಯಕ್ರಿಯೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ, ವಿಜಯ ರಾಘವೇಂದ್ರರನ್ನ 15 ವರ್ಷಗಳ ಹಿಂದೆ ಮದುವೆಯಾಗಿದ್ದ ಸ್ಪಂದನಾ, ಈಗ ನೆನಪು ಮಾತ್ರ.. ಇದೇ ತಿಂಗಳ ಆಗಸ್ಟ್ 26ರಂದು 16ನೇ ಮದುವೆ ವಾರ್ಷಿಕೋತ್ಸವ ಸಂಭ್ರಮದ ಶ್ರಾವಣವನ್ನೇ ಕಿತ್ತುಕೊಂಡ ಕ್ರೂರವಿಧಿ, ಸುಂದರ ಗೋಕುಲದಲ್ಲಿನ ಹಾರ್ಟ್​​ಬೀಟ್ಸ್​​ಗಳನ್ನ ಛಿದ್ರ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಸಂಜೆ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ; ಅಂತ್ಯಕ್ರಿಯೆ ಯಾವಾಗ? ಎಲ್ಲಿ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/08/Spandana-5-1.jpg

Load More