newsfirstkannada.com

ಸಂಕೇಶ್ವರ್​​ ಅಳಿಯನ ಸಾವು ಕೇಸ್​​ಗೆ ಹೊಸ ಟ್ವಿಸ್ಟ್​; ಕುಟುಂಬಸ್ಥರೇ ಮಾಟ ಮಂತ್ರ ಮಾಡಿ ಕೊಂದ್ರಾ?

Share :

Published July 2, 2024 at 9:16pm

Update July 2, 2024 at 9:21pm

  2002ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಿಜಯ ಸಂಕೇಶ್ವರ್ ದ್ವಿತೀಯ ಪುತ್ರಿ

  ಏಪ್ರಿಲ್ 6ರಂದು ಅನಾರೋಗ್ಯದಿಂದ ದೀಪಾ ಪತಿ ಶಶಿಕಾಂತ್ ಸಿದ್ನಾಳ ವಿಧಿವಶ

  ಶಿವಕಾಂತ್ ಸಿದ್ನಾಳ್​ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ದೀಪಾ ಸಿದ್ನಾಳ

ರಾಜ್ಯದ ಪ್ರತಿಷ್ಠಿತ ಉದ್ಯಮ ಕುಟುಂಬಗಳು. ದೇಶಕ್ಕೆ ಸಂಸದರನ್ನು ನೀಡಿದ ಪ್ರಭಾವಿ ರಾಜಕೀಯ ಕುಟುಂಬ. ಈ ಕುಟುಂಬದಲ್ಲಿ ನಡೆದು ಹೋದ ದುರಂತ ಕಥೆಗೆ ಈಗ ಮಾಟಮಂತ್ರದ ಬಣ್ಣ ಹತ್ತಿಕೊಂಡಿದೆ. ಗಂಡನ ಆಸ್ತಿಗಾಗಿ ಮಾಟ, ಮಂತ್ರದ ಪ್ರಯೋಗ ಮಾಡ್ತಿರುವ ಆರೋಪ ಕೇಳಿ ಬಂದಿದ್ದು, ಉದ್ಯಮಿ ವಿಜಯ್ ಸಂಕೇಶ್ವರ ಪುತ್ರಿ ಠಾಣೆ ಮೆಟ್ಟಿಲ್ಲೇರಿದ್ದಾರೆ.

ಇದನ್ನೂ ಓದಿ: VIDEO: ದರ್ಶನ್​ ಭೇಟಿಗಾಗಿ 2 ಗಂಟೆ ಕಾದು ಕುಂತ ಧನ್ವೀರ್​.. ಭೇಟಿ ಮಾಡೋಕೆ ನಿರಾಕರಿಸಿದ್ರಾ ದಾಸ? ಏನಾಯ್ತು ಅಲ್ಲಿ?

ಸಣ್ಣ ಟ್ರಕ್ ಮೂಲಕ ಬ್ಯುಸಿನೆಸ್ ಶುರು ಮಾಡಿ ಇಂದು ಸಾರಿಗೆ, ಪತ್ರಿಕೋದ್ಯಮ, ಮಾಧ್ಯಮ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಮೇರು ವ್ಯಕ್ತಿತ್ವದ ಸಾಧಕ. ವಿಆರ್​ಎಲ್ ಸಮೂಹದ ಮಾಲೀಕ. ಇವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದ್ರೀಗ ಇದೇ ವಿಜಯ್ ಸಂಕೇಶ್ವರ ಅವರ ಪುತ್ರಿಯ ಕೌಟುಂಬಿಕ ಕಲಹ ಬೀದಿಗೆ ಬಿದ್ದಿದೆ. ಖುದ್ದು ವಿಜಯ್ ಸಂಕೇಶ್ವರ ಪುತ್ರಿಯೇ ತಮ್ಮ ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಠಾಣೆ ಮೆಟ್ಟಿಲೇರಿದ್ದಾರೆ.
2002ರಲ್ಲಿ ಉದ್ಯಮಿ ಆದಿತ್ಯ ಮಿಲ್ಕ್ ಡೈರಿ ಸಂಸ್ಥಾಪಕ ಶಿವಕಾಂತ್ ಸಿದ್ನಾಳಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದ್ರೆ ಅನಾರೋಗ್ಯದ ಕಾರಣಕ್ಕೆ ಶಿವಕಾಂತ ಸಿದ್ನಾಳ್​ ಇದೇ ಏಪ್ರಿಲ್​ನಲ್ಲಿ ನಿಧನ ಹೊಂದಿದ್ರು. ಆದ್ರೀಗ ಆಸ್ತಿಗಾಗಿ ಮಾಟ, ಮಂತ್ರದ ಪ್ರಯೋಗ ಮಾಡಿ ತಮ್ಮ ಗಂಡನನ್ನ ಸಾಯಿಸಿದ್ದಾರೆ ಅಂತ ದೀಪಾ ಆರೋಪಿಸಿದ್ದು, ಈ ಬಗ್ಗೆ ಜೂನ್ 29 ರಂದು ಎಫ್​ಐಆರ್ ಕೂಡ ರಿಜಿಸ್ಟರ್ ಆಗಿದೆ. ವಿಜಯ್ ಸಂಕೇಶ್ವರ್ ಮತ್ತು ಮಾಜಿ ಸಂಸದ ಎಸ್​. ಬಿ. ಸಿದ್ನಾಳ್ ಕುಟುಂಬ. ಎರಡು ಪ್ರಭಾವಿ ಕುಟುಂಬಗಳೇ ಆದ್ರೀಗ ಈ ಕುಟುಂಬಗಳ ಆಂತರಿಕ ಜಗಳ ಬೀದಿಗೆ ಬಂದಿದೆ. ಎಸ್.​ಬಿ. ಸಿದ್ನಾಳ್ ಮಗ ಶಿವಕಾಂತ್ ಸಿದ್ನಾಳ್​ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿಜಯ್ ಸಂಕೇಶ್ವರ್ ಪುತ್ರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಆದಿತ್ಯ ಮಿಲ್ಕ್ ಡೈರಿ ಬಗ್ಗೆ ನಿಮಗೆ ಗೊತ್ತೆ ಇರುತ್ತೆ. ಬೆಳಗಾವಿ ಭಾಗದಲ್ಲಿ ಈ ಡೈರಿ ತುಂಬಾ ಫೇಮಸ್. ಆದಿತ್ಯ ಮಿಲ್ಕ್ ಹಾಲು ರಾಜ್ಯದ ಮನೆ ಮಾತಾಗಿರುವ ಉತ್ಪನ್ನ. ಕಳೆದ ಎರಡು ದಶಕಗಳಿಂದ ನಂದಿನಿ ಪ್ರೊಡಕ್ಟ್​ಗೆ ಆದಿತ್ಯ ಸ್ಪರ್ಧೆ ಒಡ್ಡುತ್ತಲೇ ಬಂದಿದೆ. ಈ ಹೆಮ್ಮೆಯ ಸಂಸ್ಥೆ ಹುಟ್ಟಿಕೊಂಡಿರುವುದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಈ ಸಂಸ್ಥೆ ಹುಟ್ಟಿಹಾಕಿ ಶಶಿಕಾಂತ್ ಸಿದ್ನಾಳ್ ಯಶಸ್ವಿಯಾಗಿದ್ರು. ಆದ್ರೆ ಏಪ್ರಿಲ್ 6ರಂದು ಅನಾರೋಗ್ಯದಿಂದ ಶಶಿಕಾಂತ್ ಸಿದ್ನಾಳ ವಿಧಿವಶರಾಗಿದ್ರು. ಆದ್ರೀಗ ಶಿವಕಾಂತ ಸಿದ್ನಾಳ ಸಾವಿಗೆ ಮಾಟಮಂತ್ರ ಕಾರಣವಾಯಿತೇ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅಷ್ಟಕ್ಕೂ ಇಂಥದೊಂದು ಅನುಮಾನ ವ್ಯಕ್ತಪಡಿಸಿದ್ದು ಬೇರ್ಯಾರೂ ಅಲ್ಲ, ಉದ್ಯಮಿ ವಿಜಯ್ ಸಂಕೇಶ್ವರ್ ಪುತ್ರಿ, ಶಿವಕಾಂತ ಸಿದ್ನಾಳ ಪತ್ನಿ ದೀಪಾ. ಈ ಕುರಿತು ಕ್ಯಾಂಪ್ ಠಾಣೆ ಮೆಟ್ಟಿಲೇರಿರುವ ದೀಪಾ, ಶಿವಕಾಂತ ಸಿದ್ನಾಳ ಸಹೋದರ ಶಶಿಕಾಂತ ಸಿದ್ನಾಳ, ವಾಣಿ ಸಿದ್ನಾಳ, ದಿಗ್ವಿಜಯ ಸಿದ್ನಾಳ ವಿರುದ್ಧ ಕ್ಯಾಂಪ್ ಠಾಣೆಯಲ್ಲಿ ದೂರನ್ನೂ ನೀಡಿದ್ದಾರೆ.

ಪತಿ ಶಿವಕಾಂತ್ ಸಿದ್ನಾಳ್ ಸಾವಿಗೆ ವಾಮಚಾರವೇ ಕಾರಣ ಅಂತ ಸಂಕೇಶ್ವರ್ ಪುತ್ರಿ ದೀಪಾ ದೂರು ಕೊಟ್ಟಿದ್ದಾರೆ. ಹಾಗಂತ ಬೇರೆ ಯಾರೋ ಹೊರಗಿನವರ ಮೇಲೆ ದೀಪಾ ದೂರಿಲ್ಲ. ಶಿವಕಾಂತ್ ಸಿದ್ನಾಳ್ ಸಹೋದರ ಶಶಿಕಾಂತ್ ಸಿದ್ನಾಳ್ ಮತ್ತು ವಾಣಿ ಸಿದ್ನಾಳ್, ದಿಗ್ವಿಜಯ್ ಸಿದ್ನಾಳ್ ವಿರುದ್ಧ ಈ ಆರೋಪ ಮಾಡಿದ್ದಾರೆ. 2019ರಿಂದ 2024ರರೆಗೆ ಮನೆ ಎದುರು ಮಾಟ ಮಂತ್ರ ಮಾಡಲಾಗಿತ್ತು ಎಂದು ಆರೋಪಿಸಿರುವ ದೀಪಾ ಅವರು, ಪತಿಯ ಸಮಾದಿ ಬಳಿಯೂ ವಾಮಾಚಾರ ಮಾಡಲಾಗಿದೆ. ಶಿವಕಾಂತ ಹುಟ್ಟುಹಾಕಿದ್ದ ವಿಜಯಕಾಂತ ಡೈರಿ ಸ್ವತ್ತನ್ನು ಕಬಳಿಸಲೆಂದೇ ಈ ಮಾಟಮಂತ್ರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾದರೆ. ತನ್ನ ಭಾವ ಶಶಿಕಾಂತ ಹಾಗೂ ಕುಟುಂಬ ಸದಸ್ಯರ ವಿರುದ್ಧ ದೀಪಾ ಈ ಆರೋಪ ಮಾಡಿದ್ದು, ಪ್ರತಿಷ್ಠಿತ ಕುಟುಂಬದ ಆಸ್ತಿ ಜಗಳ ಬೀದಿಗೆ ಬಂದಂತಾಗಿದೆ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ! ಅಪ್ಪ ಆಗ್ತಿದ್ದಾರೆ ಭುವನ್ ಪೊನ್ನಣ್ಣ

ಶಿವಕಾಂತ ಬೈಲಹೊಂಗಲ ತಾಲೂಕಿನ ನೆಗಿನಹಾಳ ಗ್ರಾಮದಲ್ಲಿ ವಿಜಯಕಾಂತ ಡೈರಿ ಮತ್ತು ಫುಡ್ ಪ್ರಾಡಕ್ಟ್ ಆರಂಭಿಸಿದ್ದರು. ಈ ಕಂಪನಿಯ ಅಡಿಯಲ್ಲಿ ಆದಿತ್ಯ ಮಿಲ್ಕ್‌ ತಯಾರಿ ಆಗ್ತಿತ್ತು. ಪ್ರತಿನಿತ್ಯ 1.20 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ಆದಿತ್ಯ ಮಿಲ್ಕ್​ ಬ್ರಾಂಡ್ ಅಡಿ ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಮಾಡಲಾಗುತ್ತಿತ್ತು. ರಾಜ್ಯ ಅಷ್ಟೇ ಅಲ್ಲದೇ ಹೊರರಾಜ್ಯಗಳಿಗೂ ಈ ಬ್ರ್ಯಾಂಡ್ ವಿಸ್ತರಣೆ ಪಡೆದಿತ್ತು. ಈ ಕಾರಣಕ್ಕಾಗಿ ಶಿವಕಾಂತ ಸಿದ್ನಾಳ ಭರವಸೆಯ ಉದ್ಯಮಿ ಎಂಬ ಕೀರ್ತಿಯನ್ನೂ ಪಡೆದಿದ್ದರು. ದುರಂತ ಏನಂದ್ರೆ 2019 ರಲ್ಲಿ ಶಿವಕಾಂತ್ ಸಿದ್ನಾಳ ಅನಾರೋಗ್ಯಕ್ಕೀಡಾಗಿದ್ರು. 2019ರಿಂದ 2024ರವರೆಗೂ ಸಿದ್ನಾಳ್ ಆರೋಗ್ಯ ಹದಗೆಟ್ಟಿತ್ತು. ಆದ್ರೆ, ಕಳೆದ ಏಪ್ರಿಲ್​ನಲ್ಲಿ ಶಿವಕಾಂತ್ ಸಿದ್ನಾಳ ಸಾವನ್ನಪ್ಪಿದ್ರು. ಆದ್ರೀಗ ದೀಪಾ ಈ ಸಾವಿನ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದು, ಮಾಟ ಮಂತ್ರದ ಮೂಲಕ ಗಂಡನ ಸಾವಾಗಿದೆ ಅಂತ ಆರೋಪಿಸಿದ್ದಾರೆ.

ವಿಚಿತ್ರ ಏನಂದ್ರೆ ಶಿವಕಾಂತ್ ಅನಾರೋಗ್ಯದಿಂದ ಬಳಲುತ್ತಿರುವ ಸಮಯದಲ್ಲಿ ಕ್ಯಾಂಪ್ ಪ್ರದೇಶದಲ್ಲಿದ್ದ ಮನೆಯ ಮುಂದೆ ಪ್ರತಿ ಅಮಾವಾಸ್ಯೆಯಂದು ಮಾಟ ಮಂತ್ರದ ಪ್ರಯೋಗ ನಡೆಯುತ್ತಿತ್ತಂತೆ. ಈ ಬಗ್ಗೆ ದೀಪಾ ಪೊಲೀಸರ ಗಮನಕ್ಕೂ ತಂದಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಗ ದೀಪಾ ಈ ಮಾಟ ಮಂತ್ರದ ಮುಕ್ತಿಗೆ ಉತ್ತರ ಭಾರತದ ಜ್ಯೋತಿಷಿ ಒಬ್ಬರನ್ನ ಕರೆದುಕೊಂಡು ಬಂದು ಪೂಜೆ ಕೂಡ ಮಾಡಿಸಿದ್ರಂತೆ. ಮನೆ ಪರಿಶೀಲನೆ ನಡೆಸಿದ್ದ ಜ್ಯೋತಿಷಿ ಮಾಟ ಮಂತ್ರದ ಪ್ರಯೋಗವಾಗಿರುವ ಬಗ್ಗೆ ಸುಳಿವು ಕೊಟ್ಟಿದ್ರಂತೆ. ಹೀಗಾಗಿ ವಾಮಾಚಾರದ ಮುಕ್ತಿಗಾಗಿ ಪೂಜೆ ಕೂಡ ಮಾಡಿಸಿ ಎಚ್ಚರಿಕೆಯಿಂದಲೇ ಇದ್ರಂತೆ. ಆದ್ರೆ ಕೊನೆಗೆ ಆ ಮಾಟ ಮಂತ್ರದ ಪರಿಣಾಮದಿಂದಲೇ ಶಿವಕಾಂತ್ ಸಿದ್ನಾಳ್ ಸಾವನ್ನಪ್ಪಿದ್ದಾರೆ ಅನ್ನೋದು ಸಂಕೇಶ್ವರ್ ಪುತ್ರಿ ದೀಪಾರ ಗಂಭೀರ ಆರೋಪವಾಗಿದೆ.

ಶಿವಕಾಂತ್ ಸಿದ್ನಾಳ ಬದುಕಿದ್ದಾಗ ಮಾತ್ರವಲ್ಲ. ಅವರು ನಿಧನ ಹೊಂದಿದ ಮೇಲೂ ಅವರ ಸಮಾಧಿ ಸುತ್ತ ವಾಮಚಾರ ನಡೆದಿದ್ಯಂತೆ. ಶಿವಕಾಂತ್ ಸಿದ್ನಾಳ ಡೈರಿಯನ್ನ ಕಬಳಿಸೋಕೆ ಇಷ್ಟೆಲ್ಲ ತಂತ್ರ ಮಾಡಿದ್ದಾರೆ ಅಂತ ಆರೋಪಿಸಿರುವ ದೀಪಾ ತನ್ನ ಭಾವ ಶಶಿಕಾಂತ ಹಾಗೂ ಕುಟುಂಬ ಸದಸ್ಯರೇ ಈ ವಾಮಾಚಾರ ಮಾಡಿಸಿರೋದಾಗಿ ಆರೋಪಿಸಿದ್ದಾರೆ. ಪ್ರತಿಷ್ಠಿತ ಕುಟುಂಬಗಳ ಆಸ್ತಿ ಜಗಳ ಬೀದಿಗೆ ಬಂದಿದ್ದು, ಖ್ಯಾತ ಉದ್ಯಮಿಯೊ ಸಂಕೇಶ್ವರ್ ಪುತ್ರಿಯ ಆರೋಪ ಸಂಚಲನ ಸೃಷ್ಟಿಸಿದೆ. ಆದ್ರೆ ದೀಪಾ ಮಾಡಿರುವ ಆರೋಪಗಳು ಸತ್ಯನಾ? ಶಿವಕಾಂತ್ ಸಿದ್ನಾಳ್ ಸಾವಿಗೆ ನಿಜಕ್ಕೂ ಮಾಟ ಮಂತ್ರ ಕಾರಣವಾಯ್ತಾ? ಅನ್ನೋದು ಪೊಲೀಸರ ತನಿಖೆ ಬಳಿಕವಷ್ಟೆ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಕೇಶ್ವರ್​​ ಅಳಿಯನ ಸಾವು ಕೇಸ್​​ಗೆ ಹೊಸ ಟ್ವಿಸ್ಟ್​; ಕುಟುಂಬಸ್ಥರೇ ಮಾಟ ಮಂತ್ರ ಮಾಡಿ ಕೊಂದ್ರಾ?

https://newsfirstlive.com/wp-content/uploads/2024/07/deepa.jpg

Load More