ಪತಿ ದರ್ಶನ್ ರಿಲೀಸ್ಗೆ ಶಕ್ತಿ ದೇವತೆಗಳ ಮೊರೆ ಹೋದ ಪತ್ನಿ
ಶಕ್ತಿ ಪೀಠ ಕಾಮಾಕ್ಯ ದೇಗುಲಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಭೇಟಿ
ದರ್ಶನ್ಗಾಗಿ ಕಾಮಾಕ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಹೆಂಡತಿ
ದರ್ಶನ್‌ನ ದೋಷಮುಕ್ತರಾಗಿ ಹೊರತರಲು ಪತ್ನಿ ವಿಜಯಲಕ್ಷ್ಮಿ ಹರ ಸಾಹಸ ಪಡ್ತಿದ್ದಾರೆ. ಪತಿ ಬಿಡುಗಡೆಗಾಗಿ ದೇವಾಲಯ ಪ್ರದಕ್ಷಿಣೆ ಮುಂದುವರಿದಿದ್ದು, ವಿಜಯಲಕ್ಷ್ಮಿ ಶಕ್ತಿ ದೇವತೆಗಳ ಮೊರೆ ಹೋಗಿದ್ದಾರೆ. ಕೇವಲ ರಾಜ್ಯದ ಶಕ್ತಿ ದೇವತೆಗಳು ಮಾತ್ರವಲ್ಲ, ಹೊರ ರಾಜ್ಯದ ಆದಿಶಕ್ತಿ ಪೀಠಕ್ಕೂ ತೆರಳಿ ಪತಿಗಾಗಿ ಮೊರೆಯಿಟ್ಟಿದ್ದಾರೆ.
ಇದನ್ನೂ ಓದಿ: ‘ದರ್ಶನ್ ಖಾಸಗಿ ವಿಡಿಯೋ ಇಟ್ಕೊಂಡು ಬ್ಲಾಕ್ಮೇಲ್ ಮಾಡಿದ್ದ ಪವಿತ್ರಾ’- ವಿಜಯಲಕ್ಷ್ಮಿ ಬಿಚ್ಚಿಟ್ಟ ಅಸಲಿ ಸತ್ಯ
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಮೇಲಿನ ಕೇಸ್ ಬಿಗಿಗೊಂಡಿದೆ. ಪೊಲೀಸರ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಒಂದೊಂದೇ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಚಾರ್ಚ್ ಶೀಟ್ ಪ್ರಕಾರ ಮೇಲ್ನೋಟಕ್ಕೆ ದರ್ಶನ್‌ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗೋದು ಡೌಟ್ ಎನ್ನಲಾಗ್ತಿದೆ. ಆದ್ರೂ ಪಟ್ಟು ಬಿಡದ ವಿಜಯಲಕ್ಷ್ಮಿ ಪತಿಯನ್ನು ಬಿಡಿಸಿಕೊಂಡು ಬರಲೇಬೇಕೆಂದು ಪಣತೊಟ್ಟಿದ್ದಾರೆ.
ದೇಶದ 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ, ಪತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ. ಬನಾರಸಿ ಸಿಲ್ಕ್ ಕುರ್ತಾ ಧರಿಸಿದ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೋಗಳನ್ನು ವಿಜಯಲಕ್ಷ್ಮಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ಪತಿಯ ರಕ್ಷಣೆಗಾಗಿ ದರ್ಶನ್ ಪತ್ನಿ ಟೆಂಪಲ್ ರನ್ ಮಾಡ್ತಿರೋದು ಇದೆ ಮೊದಲೇನಲ್ಲ. ದರ್ಶನ್ ಅರೆಸ್ಟ್ ಆಗಿ ಜೈಲಿಗೆ ಹೋದ ದಿನದಿಂದಲೂ ವಿಜಯಲಕ್ಷ್ಮಿ ಟೆಂಪಲ್ ರನ್ ಮಾಡ್ತಾನೆ ಇದ್ದಾರೆ.
ಇದನ್ನೂ ಓದಿ: ಒಂದೇ ಫ್ರೇಮ್ನಲ್ಲಿ ತುಂಬು ಗರ್ಭಿಣಿಯರು.. ಚಿನ್ನು, ಗೊಂಬೆ ಮಗುವಿನ ಬಗ್ಗೆ ಭವಿಷ್ಯ ನುಡಿದ ಫ್ಯಾನ್ಸ್; ಏನದು?
ಬೆಂಗಳೂರಿನ ಬಂಡೆ ಮಾಕಾಳಮ್ಮನ ದರ್ಶನ. ಭೀಮನ ಅಮಾಸ್ಯೆ ದಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲದೇ ನಾಡದೇವತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಯಾಗ ಮಾಡಿದ್ದರು. ಮಂತ್ರಾಯಲದ ರಾಯರ ಮಠದಲ್ಲಿ ಪಾದಪೂಜೆ ಸೇವೆಯನ್ನು ಸಲ್ಲಿಸಿ, ಪತಿಗೆ ಎದುರಾಗಿರುವ ಸಂಕಷ್ಟಗಳು ದೂರಾಗಲಿ ಎಂದು ಪ್ರಾರ್ಥಿಸಿದ್ದರು. ಇದೀಗ ಮತ್ತೊಂದು ಆದಿಶಕ್ತಿ ಪೀಠದ ಮೊರೆ ಹೋಗಿದ್ದಾರೆ.
ಕಾಮಾಕ್ಯ ಕ್ಷೇತ್ರದ ಮಹತ್ವವೇನು?
ಭಾರತದ ಪುರಾತನ ಶಕ್ತಿಪೀಠಗಳಲ್ಲಿ ಕಾಮಾಕ್ಯ ದೇವಿ ದೇವಸ್ಥಾನ ಒಂದು
ಗುವಾಹಟಿಯ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ದೇವಿ ನೆಲೆ
ಪವರ್ ಫುಲ್’ ಶಕ್ತಿ ದೇವತೆ ಎನ್ನಿಸಿಕೊಂಡಿರುವ ಕಾಮಾಕ್ಷಿ ಮಾತೆ
ಇಲ್ಲಿ ದೇವಿ ವಿಗ್ರಹವಿಲ್ಲ, ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತೆ
ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ
ಅದೇ ಕಾರಣಕ್ಕೆ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ
ಮುಟ್ಟಾದ 3 ದಿನಗಳ ಕಾಲ ಈ ದೇವಾಲಯ ಬಂದ್ ಮಾಡ್ತಾರೆ
ದೇವಿ ಮುಟ್ಟಾದ ಬಟ್ಟೆಯನ್ನು ಪ್ರಸಾದದ ರೂಪದಲ್ಲಿ ಹಂಚಲಾಗುತ್ತೆ
ಅನೇಕ ಗಣ್ಯ ವ್ಯಕ್ತಿಗಳು ಈ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ
ಡಿ.ಕೆ.ಶಿವಕುಮಾರ್ ಕೂಡ ಸಂಕಷ್ಟದ ಸಮಯದಲ್ಲಿ ಇಲ್ಲಿಗೆ ಬಂದಿದ್ದರು
ದೊಡ್ಡ ದೊಡ್ಡ ನಟರು, ರಾಜಕಾರಣಿ, ಉದ್ಯಮಿದಾರರು ನೆಚ್ಚಿನ ತಾಣ
ಗಂಡ ಏನೇ ತಪ್ಪು ಮಾಡಲಿ, ಎಷ್ಟೇ ದೂರ ಮಾಡಿದ್ರೂ ಧರ್ಮ ಪತ್ನಿಯಾದವಳು ಪತಿ ಸಂಕಷ್ಟಕ್ಕೆ ಸಿಲುಕಿದಾಗ ಆತನ ರಕ್ಷಣೆಗೆ ಟೊಂಕಕಟ್ಟಿ ನಿಲ್ಲೋದು ಈ ಮಣ್ಣಿನ ಇತಿಹಾಸದಲ್ಲೇ ಇದೆ. ಪುರಾಣ ಕಥೆಗಳನ್ನೂ ಉಲ್ಲೇಖಿತವಾಗಿದೆ. ಆದರೆ ದರ್ಶನ್ ಮಾಡಿರೋದು ಸಾಮಾನ್ಯವಾದ ತಪ್ಪೇನಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ