newsfirstkannada.com

BREAKING: ದರ್ಶನ್‌ಗೂ ಪವಿತ್ರಾಗೂ ಏನ್ ಸಂಬಂಧ? ಪೊಲೀಸರಿಗೆ ಕ್ಲಾರಿಟಿ ಕೊಟ್ಟ ವಿಜಯಲಕ್ಷ್ಮೀ

Share :

Published July 3, 2024 at 11:02pm

  ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ

  ನಟ ದರ್ಶನ್ ಹಾಗೂ ನನ್ನ ಮದುವೆ ಧರ್ಮಸ್ಥಳದಲ್ಲಿ ನಡೆದಿದೆ

  ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ವಿಜಯಲಕ್ಷ್ಮಿ ಪತ್ರ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದ ಇಂಚಿಂಚು ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮನವಿಯೊಂದನ್ನ ಮಾಡಿದ್ದಾರೆ. ಇದರ ಜೊತೆಗೆ A1 ಪವಿತ್ರಾ ಗೌಡಗೂ ತನ್ನ ಪತಿ ದರ್ಶನ್‌ಗೂ ಇರೋ ಸಂಬಂಧ ಏನು ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ‘ವಿಜಯಲಕ್ಷ್ಮಿಗೆ ಕೊಟ್ಟಿದ್ದ ಸೇಮ್ ಕಾರು ನಂಗೂ ಬೇಕು’- ಹಠ ಹಿಡಿದಿದ್ದ ಪವಿತ್ರಾಗೆ ದರ್ಶನ್ ಕೊಟ್ಟ ಗಿಫ್ಟ್ ಏನು? 

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕಳೆದ ಜೂನ್ 24ರಂದೇ ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ದಯಾನಂದ್‌ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ದರ್ಶನ್‌ಗೆ ಎ1 ಆರೋಪಿ ಪವಿತ್ರಾ ಗೌಡ ಪತ್ನಿ ಅಲ್ಲ. ನಾನು ದರ್ಶನ್‌ ಅವರ ಏಕೈಕ ಪತ್ನಿ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

ನಾನು ದರ್ಶನ್‌ ಅವರ ಏಕೈಕ ಪತ್ನಿ. ಕೊಲೆ ಆರೋಪಿ ಪವಿತ್ರಾ ಗೌಡ ಅವರು ಸ್ನೇಹಿತೆ ಅಷ್ಟೇ. ದರ್ಶನ್ ಹಾಗೂ ನನ್ನ ಮದುವೆ ಧರ್ಮಸ್ಥಳದಲ್ಲಿ 19.05.2003 ರಂದು ನಡೆದಿದೆ. ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. ಪವಿತ್ರಾ ಗೌಡರನ್ನ ‘ದರ್ಶನ್ ಪತ್ನಿ’ ಎಂದು ಉಲ್ಲೇಖಿಸಿ ಹೇಳಿಕೆ ನೀಡಲಾಗಿದೆ. ಹೀಗಾಗಿ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ಕಮಿಷನರ್‌ಗೆ ವಿಜಯಲಕ್ಷ್ಮೀ ದರ್ಶನ್ ಅವರು ಮನವಿ ಮಾಡಿದ್ದಾರೆ.

ವಿಜಯಲಕ್ಷ್ಮೀ ಬರೆದ ಪತ್ರದಲ್ಲಿ ಏನಿದೆ?
ವಿಷಯ: ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಶ್ರೀಮತಿ ಪವಿತ್ರಾ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸಲು ವಿನಂತಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನ ಪತಿ ದರ್ಶನ್ ಹಾಗೂ ಕೆಲವರನ್ನು ನಿಮ್ಮ ಇಲಾಖೆ ಬಂಧಿಸಿ ಎರಡು ವಾರ ಕಳೆದಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಕಾನೂನು ತನ್ನದೇ ಆದ ಮಾರ್ಗ ಪಡೆದುಕೊಳ್ಳುತ್ತದೆ ಎಂದು ನಾನು ನಂಬುತ್ತೇನೆ.

ಇದನ್ನೂ ಓದಿ: ಜೈಲಲ್ಲೂ ರೂಲ್ಸ್ ಬ್ರೇಕ್? ದರ್ಶನ್​ ಭೇಟಿಯಾಗಿದ್ದೇಕೆ ಪವಿತ್ರಾ ಗೌಡ ಸ್ನೇಹಿತೆ; ಈ ಸಮತಾ ಯಾರು? 

ಅದಾಗ್ಯೂ, ಈ ಹತ್ಯೆ ಕೇಸ್‌ನ A-1 ಆರೋಪಿ ಶ್ರೀಮತಿ ಪವಿತ್ರಾ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ನಾನು ನಿಮ್ಮಲ್ಲಿ ವಿನಂತಿ ಮಾಡುತ್ತೇನೆ. ನನ್ನ ಪತಿ ಶ್ರೀ ದರ್ಶನ್ ಶ್ರೀನಿವಾಸ್ ಅವರಿಗೆ ಪವಿತ್ರಾ ಗೌಡ ಸ್ನೇಹಿತೆ ನಿಜ. ಆದರೆ ಹೆಂಡತಿಯಲ್ಲ ಎಂಬುದನ್ನ ತಾವು ದಯವಿಟ್ಟು ಗಮನಿಸಿ. ನಾನು ದರ್ಶನ್ ಅವರ ಏಕೈಕ ಪತ್ನಿ. ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. ನಮ್ಮ ಮದುವೆ ಧರ್ಮಸ್ಥಳದಲ್ಲಿ 19.05.2003 ರಂದು ನಡೆಯಿತು.
ಇಂತಿ
ವಿಜಯಲಕ್ಷ್ಮೀ ದರ್ಶನ್ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ದರ್ಶನ್‌ಗೂ ಪವಿತ್ರಾಗೂ ಏನ್ ಸಂಬಂಧ? ಪೊಲೀಸರಿಗೆ ಕ್ಲಾರಿಟಿ ಕೊಟ್ಟ ವಿಜಯಲಕ್ಷ್ಮೀ

https://newsfirstlive.com/wp-content/uploads/2024/07/Vijayalakshmi-Darshan-Wife-1.jpg

Load More