BMTC ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಪತಿ
ಪತ್ನಿಗೆ ಸೀಮಂತ ಮಾಡಲು ಸ್ಕೂಟಿಯಲ್ಲಿ ಹೂ ತರುತ್ತಿದ್ದ ಗಂಡ
ಗೋವಿಂದರಾಜ ನಗರದ ಬಳಿ BMTC ಬಸ್ ನಡಿಗೆ ಸಿಲುಕಿ ಸ್ಥಳದಲ್ಲೇ ಸಾವು
ವಿಜಯನಗರ: ಹೆಂಡತಿಯ ಸೀಮಂತ ಕಾರ್ಯಕ್ರಮದ ಸಂತಸದಲ್ಲಿದ್ದ ಪತಿ ಬಿಎಂಟಿಸಿ ಬಸ್ನಡಿಗೆ ಸಿಲುಕಿ ಪ್ರಾಣ ಬಿಟ್ಟ ಘಟನೆ ಗೋವಿಂದರಾಜ ನಗರದ ಬೈಟು ಕಾಫಿ ಅಂಗಡಿಯ ಮುಂದೆ ನಡೆದಿದೆ. ಕುಮಾರ್ ಎಂಬಾತ ಸಾವನ್ನಪ್ಪಿದ್ದಾನೆ.
ಮೃತ ಕುಮಾರ್ ಅನ್ನಪೂರ್ಣೇಶ್ವರಿ ನಗರ ನಿವಾಸಿಯಾಗಿದ್ದು, ಪತ್ನಿಗೆ ಸೀಮಂತ ಮಾಡಬೇಕು ಎಂದು ಮಾರ್ಕೆಟ್ನಿಂದ ಹೂ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಬಿಎಂಟಿಸಿ ಬಸ್ನಡಿಗೆ ಕುಮಾರ್ ಬಿದ್ದಿದ್ದಾನೆ. ಪರಿಣಾಮ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.
ಸದ್ಯ ಬಿಎಂಟಿಸಿ ಚಾಲಕ ಶ್ರೀನಿವಾಸ್ನನ್ನು ವಿಜಯನಗರ ಸಂಚಾರಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಕುಮಾರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ