ಸರ್ಕಾರಿ ಆಸ್ಪತ್ರೆಗೆ ಬಂದ್ರೆ ಖಾಸಗಿ ಆಸ್ಪತ್ರೆಗೆ ಕಳುಹಿಸಿದ ಸಿಬ್ಬಂದಿ
ತುರ್ತು ಚಿಕಿತ್ಸೆಗೆ ವೈದ್ಯರೇ ಇರಲಿಲ್ಲ ಅಂತ ಪೋಷಕರು ಆರೋಪ
ಆಸ್ಪತ್ರೆ ಆವರಣದಲ್ಲಿ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ವಿಜಯನಗರ: ಬಡವರಿಗೆ ಅನುಕೂಲ ಆಗಲಿ ಅಂತಾನೇ ಸರ್ಕಾರಿ ಆಸ್ಪತ್ರೆಗಳಿರೋದು. ಸರ್ಕಾರಿ ವೈದ್ಯರನ್ನ ನಂಬಿ ಎಷ್ಟೋ ಬಡವರು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಆದರೆ 5 ವರ್ಷದ ಗಂಡು ಮಗು ವೈದ್ಯರ ನಿರ್ಲಕ್ಷ್ಯಕ್ಕೆ ಹೊಸಪೇಟೆ ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರೋ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಆವರಣದಲ್ಲಿ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಹೊಸಪೇಟೆ ತಾಲೂಕಿನ ಕಮಲಾಪುರದ ಅಂಬೇಡ್ಕರ್ ನಗರದ ಕುಶಾಲ್ ಮೃತ ದುರ್ದೈವಿ. ಕುಶಾಲ್, ಶಾಂತಪ್ಪ, ಶಂಕ್ರಮ್ಮ ದಂಪತಿ ಪುತ್ರ.
ಕಳೆದ ಅಕ್ಟೋಬರ್ 24ರಂದು ಜ್ವರ ಇದೆ ಅಂತ ಕುಶಾಲ್‌ನನ್ನು ಪೋಷಕರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಪಡೆದು ಹೋಗಿದ್ದರು. ವೈದ್ಯರು ಮಗು ಚೆನ್ನಾಗಿದೆ ಅಂತ ಹೇಳಿ ಕಳಿಸಿದ್ದರಂತೆ.
ಇದನ್ನೂ ಓದಿ: ಸಾವನ್ನಪ್ಪಿದ ಆತ್ಮೀಯ! 80kmನಿಂದ ಹುಡುಕಿಕೊಂಡು ಬಂದ 17 ಆನೆಗಳ ಹಿಂಡಿನ ಗ್ರೇಟ್ ಸ್ಟೋರಿಯಿದು!
ಇಂದು ಬೆಳಗ್ಗೆ ಮತ್ತೆ ಜ್ವರ ಹೆಚ್ಚಾದಾಗ ಕುಶಾಲ್‌ನನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಗ ತುರ್ತು ಚಿಕಿತ್ಸೆಗೆ ವೈದ್ಯರು ಇರಲಿಲ್ಲ ಅಂತ ಪೋಷಕರು ಆರೋಪ ಮಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಗುವಿಗೆ ಜ್ವರ ಹೆಚ್ಚಿದೆ ಅಂತ ಖಾಸಗಿ ಆಸ್ಪತ್ರೆಗೆ ರೇಫರ್ ಮಾಡಿದ್ದಾರೆ. ಆ ಖಾಸಗಿ ಆಸ್ಪತ್ರೆಯವರು ಸರಿಯಾದ ಚಿಕಿತ್ಸೆ ನೀಡದೆ ಮತ್ತೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೆ ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್.. ತ್ರಿವಿಕ್ರಮ್ಗೆ ಗೋಮುಖ ವ್ಯಾಘ್ರ ಎಂದ ಮೋಕ್ಷಿತಾ!
ಜ್ವರ ಬಂದಿದ್ದ ಮಗುವನ್ನು ಸರ್ಕಾರಿ ಆಸ್ಪತ್ರೆಯಿಂದ ಖಾಸಗಿಗೆ ಖಾಸಗಿಯಿಂದ ಸರ್ಕಾರಿ ಆಸ್ಪತ್ರೆ ಶಿಫ್ಟ್ ಮಾಡುವಷ್ಟರಲ್ಲಿ ಪ್ರಾಣವೇ ಹೋಗಿದೆ. ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ವೈದ್ಯರು ಇರಲಿಲ್ಲ. ವೈದ್ಯರ ನಿರ್ಲಕ್ಷ್ಯ ಐದು ವರ್ಷದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ನಮಗೆ ಎರಡು ಹೆಣ್ಣು ಮಕ್ಕಳಿದ್ರು ಒಂದೇ ಗಂಡು ಮಗು ಇತ್ತು. ಮಗನನ್ನು ಕಳೆದುಕೊಂಡ ಪೋಷಕರು ಆಸ್ಪತ್ರೆ ಆವರಣದಲ್ಲಿ ಗೋಳಾಡುತ್ತಿದ್ದಾರೆ. ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾವಿಗೆ ಕಾರಣ ಏನು ಅನ್ನೋ ಮಾಹಿತಿ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ