ಮೇ 10 ರಂದು ದೇವರಹಿಪ್ಪರಗಿಯ ಚಟ್ಟರಕಿ ಗ್ರಾಮದಲ್ಲಿ ನಡೆದ ಘಟನೆ
ಇಬ್ಬರ ರಾಸಲೀಲೆಯನ್ನು ಕಣ್ಣಾರೆ ಕಂಡಿದ್ದ ಪತಿಯನ್ನ ಹತ್ಯೆ ಮಾಡಿದ್ರಾ?
ಕುಟುಂಬಸ್ಥರು ವ್ಯಕ್ತಪಡಿಸಿದ ಆ ಶಂಕೆ.. ಹಲವು ಅನುಮಾನಗಳಿಗೆ ದಾರಿ
ವಿಜಯಪುರ: ಪ್ರಿಯಕರನೊಂದಿಗೆ ಪತ್ನಿ ಸೇರಿ ತನ್ನ ಪತಿಯನ್ನು ಕರೆಂಟ್ ಶಾಕ್ ಕೊಟ್ಟು ಹತ್ಯೆಗೈದಿದ್ದಾರೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಮೇ 10 ರಂದು ಈ ಘಟನೆ ನಡೆದಿತ್ತು.
ಚಟ್ಟರಕಿ ಗ್ರಾಮದ ನಿವಾಸಿಗಳಾದ ಸೈಫನ್, ರಾಜ್ಮಾಳ ಎನ್ನುವರು ದಂಪತಿಗಳಾಗಿದ್ದರು. ಸೈಫನ್ ಮೇ 10 ರಂದು ಮನೆಯಲ್ಲಿ ಫ್ಯಾನ್ನ ಕರೆಂಟ್ ಶಾಕ್ನಿಂದ ಸಾವನ್ನಪ್ಪಿದ್ದನು. ಬಳಿಕ ಆತನ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. ಆದರೆ ಕೆಲ ದಿನಗಳ ಬಳಿಕ ಸೈಫನ್ ಸಾವಿನ ಬಗ್ಗೆ ಕುಟುಂಬಸ್ಥರೇ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸೈಫನ್ನ ಸ್ನೇಹಿತನಾಗಿದ್ದ ಅಬ್ಬಾಸ್ ಅಲಿ ಎನ್ನುವ ವ್ಯಕ್ತಿಯು ಆಗಾಗ ಮನೆಗೆ ಬರುತ್ತಿದ್ದರಿಂದ ರಾಜ್ಮಾಳ ಜೊತೆ ಸಲುಗೆ ಬೆಳಸಿಕೊಂಡಿದ್ದನು ಎನ್ನಲಾಗಿದೆ. ಪತ್ನಿ ಮತ್ತು ಸ್ನೇಹಿತನ ರಾಸಲೀಲೆಯನ್ನು ಪತಿಯು ಕಣ್ಣಾರೆ ಕಂಡಿದ್ದನು. ಹೀಗಾಗಿಯೇ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿ ಆರೋಪಿಗಳಾದ ಅಬ್ಬಾಸ್ ಅಲಿ, ರಾಜ್ಮಾಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಹೂತಿದ್ದ ಮೃತದೇಹವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ