ಬಂಗಾರದಂಥ ಬೆಳೆ ಕೊಟ್ಟ 4 ಎಕರೆ ಜಾಗ
ನಿತ್ಯವೂ 1.5 ಲಕ್ಷ ಎಣಿಸುತ್ತಿರುವ ರಾಜ್ಯದ ರೈತ
ಲಕ್ಷಾಧಿಪತಿ ಪೊಲೀಸ್ರಿಗೆ ಮಾಡಿದ ಮನವಿಯೇನು?
ವಿಜಯಪುರ: ಜಿಲ್ಲೆಯ ಅಲಿಯಾಬಾದ್ನಲ್ಲಿ ರೈತ ಬಿ.ಬಿ.ಲಮಾಣಿ ನಾಲ್ಕು ಎಕರೆಯಲ್ಲಿ ಟೊಮ್ಯಾಟೋ ಬೆಳೆದು ಅರ್ಧ ಕೋಟ್ಯಾಧಿಪತಿಯಾಗಿದ್ದಾನೆ. ಬಿ.ಬಿ.ಲಮಾಣಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿಯಾಗಿದ್ದು, ನಿವೃತ್ತಿ ಹೊಂದಿದ ಬಳಿಕ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ನಾಲ್ಕು ಎಕರೆಯಲ್ಲಿ ಟೊಮ್ಯಾಟೋ ಬೆಳೆದಿರುವ ಇವರು, ಪ್ರತಿನಿತ್ಯ 60-80 ಬಾಕ್ಸ್ ಬೆಳೆಯನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಪ್ರತಿದಿನವೂ ಇವರಿಗೆ 1.50 ಲಕ್ಷ ದಿಂದ 2 ಲಕ್ಷ ಆದಾಯ ಬರುತ್ತಿದೆ. ಎರಡು ತಿಂಗಳು ಟೊಮ್ಯಾಟೊ ಬೆಳೆ ಬರುವುದರಿಂದ 1 ಕೋಟಿವರೆಗೆ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ.
ಇದೇ ಮೊದಲ ಬಾರಿಗೆ ಟೊಮ್ಯಾಟೋ ಬೆಳೆಯಿಂದ ಒಂದೂವರೆ ತಿಂಗಳಲ್ಲಿ 50 ಲಕ್ಷ ರೂ. ಆದಾಯ ಬಂದಿದೆ ಎಂದು ರೈತ ಬಿ.ಬಿ.ಲಾಮಾಣಿ ಸಂತಸ ವ್ಯಕ್ತಪಡಿಸಿದ್ದಾರೆ. ಕೂಲಿ ಖರ್ಚು, ಮನೆ ಖರ್ಚಿಗೆಂದು ಟೊಮ್ಯಾಟೋ ಹಾಕಲಾಗಿತ್ತು. ಆದರೆ ಇಂದು ನನ್ನ ಅದೃಷ್ಟ ಬದಲಾಗಿದೆ ಅಂತಾ ಖುಷಿ ವ್ಯಕ್ತಪಡಿಸಿದ್ದಾರೆ.
ಪತ್ನಿ ಕಮಲಾ ನನ್ನ ಕೃಷಿಗೆ ಸಾಥ್ ನೀಡುತ್ತಾಳೆ. ಟೊಮ್ಯಾಟೋ ಬಂಪರ್ ಬೆಲೆ ಹಿನ್ನೆಲೆ ಕಳ್ಳರ ಕಾಟ ಕೂಡ ತೋಟದಲ್ಲಿ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಟೊಮ್ಯಾಟೋ ಕದ್ದ ಕಳ್ಳರು ನನ್ನ ಸಹೋದರನ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ ಬೆಳೆ ಉಳಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳು ನಮಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ