ನಡುರೋಡಲ್ಲೇ ರೌಡಿಶೀಟರ್ ತಲೆ ಜಜ್ಜಿದ ದುಷ್ಕರ್ಮಿಗಳು
ಹತ್ಯೆ ಮಾಡುತ್ತಿದ್ದಂತೆ ಸ್ಥಳದಿಂದ ಓಡಿ ಹೋದ ಕಿರಾತಕರು
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಂದ ಪರಿಶೀಲನೆ
ವಿಜಯಪುರ: ರೌಡಿಶೀಟರ್ನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರೋ ಭೀಕರ ಘಟನೆ ಭೀಮಾ ತೀರದ ಆಲಮೇಲ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ನಡೆದಿದೆ.
ಆಲಮೇಲ ಪಟ್ಟಣದ ಮಾಳಪ್ಪ ಮೇತ್ರಿ (45) ಕೊಲೆಯಾದ ರೌಡಿಶೀಟರ್. ಆರೋಪಿಗಳು ಮೇತ್ರಿ ತಲೆಗೆ ಕಲ್ಲಿನಿಂದ ಮನಬಂದಂತೆ ಜಜ್ಜಿದ್ದಾರೆ. ಪರಿಣಾಮ ರೌಡಿಶೀಟರ್ ರಸ್ತೆ ಬದಿಯೇ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾನೆ. ಹತ್ಯೆಯ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಆಲಮೇಲ ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೊಲೆ ಬಗ್ಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆ ಬಳಿಕವೇ ಈ ಬಗ್ಗೆ ಮಾಹಿತಿ ದೊರೆಯಲಿದೆ ಎನ್ನಲಾಗಿದೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ