newsfirstkannada.com

‘ಸ್ಕೂಲ್ ಫೀಸ್ ಕಟ್ಟಿಲ್ಲ’ ಎಂದು ವಿದ್ಯಾರ್ಥಿನಿ ಮೇಲೆ ಮನಸೋ ಇಚ್ಛೆ ಹಲ್ಲೆ -ವಿಜಯಪುರದಲ್ಲಿ ಖಾಸಗಿ ಶಾಲೆಯ ದರ್ಬಾರ್..!

Share :

01-07-2023

    ಶಾಲಾ ಶಿಕ್ಷಕಿಯ ದುರ್ವರ್ತನೆಗೆ ಬಾಲಕಿ ತಂದೆ ತೀವ್ರ ಬೇಸರ

    ತೀವ್ರ ಹಲ್ಲೆಗೊಳಗಾದ ಬಾಲಕಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ..!

    ಸರ್ಕಾರದ ಯೋಜನೆಯಡಿ ದಾಖಲಾದರೂ ಶುಲ್ಕಕ್ಕೆ ಒತ್ತಾಯ

ವಿಜಯಪುರ: ಶುಲ್ಕ ಪಾವತಿ ಮಾಡಿಲ್ಲವೆಂದು ವಿದ್ಯಾರ್ಥಿನಿ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹಿರೇಬೇವನೂರು ಗ್ರಾಮದ ಖಾಸಗಿ ಶಾಲೆ ವಿದ್ಯಾಭಾರತಿ ವಿದ್ಯಾ ಕೇಂದ್ರದಲ್ಲಿ ನಡೆದಿದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ವಿದ್ಯಾರ್ಥಿನಿ ದಾಖಲಾಗಿದ್ದರೂ ಶುಲ್ಕ ವಸೂಲಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 1 ರಿಂದ 6ನೇ ತರಗತಿವರೆಗೂ ವಿದ್ಯಾರ್ಥಿನಿಯ ಪೋಷಕರಿಂದ ಹಣ ಪಡೆದಿದ್ದು ಈಗ 7ನೇ ತರಗತಿಗಾಗಿ 4 ಸಾವಿರ ರೂ. ಶುಲ್ಕ ನೀಡುವಂತೆ ಶಾಲಾ ಸಿಬ್ಬಂದಿ ಒತ್ತಾಯಿಸಿದ್ದಾರೆ.

ವಿದ್ಯಾರ್ಥಿನಿಯ ಪೋಷಕರು ಹಣ ನೀಡದ ಕಾರಣ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿಕ್ಷಕಿ ಹಲ್ಲೆಯಿಂದ ಮಗಳು ತೀವ್ರ ಭಯಗೊಂಡಿದ್ದಾಳೆ ಎಂದು ವಿಶೇಷ ಚೇತನರಾದ ತಂದೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಘಟನೆಯು ಇಂಡಿ ತಾಲೂಕಿನ ಗ್ರಾಮೀಣಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸ್ಕೂಲ್ ಫೀಸ್ ಕಟ್ಟಿಲ್ಲ’ ಎಂದು ವಿದ್ಯಾರ್ಥಿನಿ ಮೇಲೆ ಮನಸೋ ಇಚ್ಛೆ ಹಲ್ಲೆ -ವಿಜಯಪುರದಲ್ಲಿ ಖಾಸಗಿ ಶಾಲೆಯ ದರ್ಬಾರ್..!

https://newsfirstlive.com/wp-content/uploads/2023/07/VIJ_STUDENT_HALLE.jpg

Load More