ಇಂದು ರಾಜ್ಯ ಕಮಲಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ
ಕೇಸರಿ ಪತಾಕೆ.. ತಳಿರು-ತೋರಣಗಳಿಂದ ಅಲಂಕಾರ..!
ಬೆಳಗ್ಗೆ 10.30 ಕ್ಕೆ ಬಿ.ವೈ ವಿಜಯೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು: ರಾಜ್ಯ ಕಮಲ ಸಾರಥಿಯಾಗಿ ನೇಮಕ ಆಗಿರೋ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಇಂದು ಬಿಜೆಪಿ ಕಚೇರಿಯಲ್ಲಿ ಪದಗ್ರಹಣಕ್ಕೆ ಸಜ್ಜಾಗಿದ್ದಾರೆ. ನಳೀನ್ ಕುಮಾರ್ ಕಟೀಲ್ ಅವರಿಂದ ಸರಳವಾಗಿ ಅಧಿಕಾರ ಹಸ್ತಾಂತರಕ್ಕೆ ಸಿದ್ಧತೆ ನಡೆದಿದೆ. ಹುದ್ದೆ ಅಲಂಕಾರಕ್ಕೂ ಮೊದಲೇ ಚಟುವಟಿಕೆ ಆರಂಭಿಸಿರೋ ವಿಜಯೇಂದ್ರ ಈಗಾಗಲೇ ನಾಯಕರ ಭೇಟಿ ಮತ್ತು ಪ್ರವಾಸ ಆರಂಭಿಸಿದ್ದಾರೆ. ಇದರ ಭಾಗವಾಗಿ ಕುರುಡು ಮಲೆಗೂ ಭೇಟಿ ನೀಡಿದ್ದರು.
ಕರ್ನಾಟಕದಲ್ಲಿ ಬಿಜೆಪಿ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಹಲವರ ಸಾರಥ್ಯದಲ್ಲಿ ಮುನ್ನಡೆದುಕೊಂಡು ಬಂದಿದೆ. ಸದ್ಯ ವಿಜಯೇಂದ್ರ ನೂತನ ಸಾರಥಿಯಾಗಿ ನೇಮಕ ಆಗಿದ್ದು ರಾಜ್ಯ ಬಿಜೆಪಿಯ 11ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ ಶುರುವಾಗಿದೆ.

ವಿಧಾನಸಭೆ ಚುನಾವಣೆ ಸೋಲಿನಿಂದ ಕುಗ್ಗಿರುವ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕವಾಗಿದ್ದು ಪಕ್ಷದಲ್ಲಿ ಹೊಸ ಹುರುಪು ಬಂದಂತಾಗಿದೆ. ವಿಜಯೇಂದ್ರ ಪದಗ್ರಹಣ ಮಾಡಲಿದ್ದು ಮಲ್ಲೇಶ್ವರಂ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಸುಣ್ಣ-ಬಣ್ಣ ಹೊಡೆದು ಕಚೇರಿಯನ್ನು ಝಗಮಗಗೊಳಿಸಲಾಗ್ತಿದೆ. ಕೇಸರಿ ಬಾವುಟ, ತಳಿರು ತೋರಣಗಳಿಂದ ಬಿಜೆಪಿ ಕಚೇರಿ ಸಿಂಗಾರಗೊಳಿಸಲಾಗ್ತಿದೆ.
ಬೆಳಗ್ಗೆ 10.30ಕ್ಕೆ ವಿಜಯೇಂದ್ರ ಅಧಿಕಾರ ಸ್ವೀಕಾರ
ಇನ್ನು ಬೆಳಗ್ಗೆ 10.30ಕ್ಕೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ವಿದ್ಯುಕ್ತವಾಗಿ ಹುದ್ದೆ ಅಲಂಕರಿಸಲಿದ್ದು ವಿಶೇಷ ಸಿದ್ಧತೆಗಳೇನೂ ಇಲ್ಲ. ನಳೀನ್ ಕುಮಾರ್ ಕಟೀಲ್‌ರಿಂದ ಸರಳವಾಗಿ ಹುದ್ದೆ ಹಸ್ತಾಂತರ ನಡೆಯುತ್ತೆ ಅಂತ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಎಲ್ಲರ ವಿಶ್ವಾಸ ಪಡೆದುಕೊಂಡು ವಿಜಯೇಂದ್ರ ಅಧಿಕಾರ ಸ್ವೀಕಾರಕ್ಕೆ ಸಜ್ಜಾಗಿದ್ದಾರೆ. ಪಕ್ಷದೊಳಗಿನ ಅಸಮಾಧಾನ ಶಮನಗೊಳಿಸಿ ಪಕ್ಷವನ್ನು ಯಾವ ರೀತಿ ಮುನ್ನಡೆಸ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ