newsfirstkannada.com

ಬಂಧನದ ಬಳಿಕ ಮೊದಲ ಬಾರಿ ಮಗನನ್ನು ಕಂಡ ದರ್ಶನ್.. ಕಂಬಿ ಹಿಂದಿರೋ ಅಪ್ಪನ ನೋಡಿ ವಿನೀಶ್​ ಹೇಳಿದ್ದೇನು?

Share :

Published June 24, 2024 at 6:41pm

    ದರ್ಶನ್ ಜೈಲು ಪಾಲಾದ ನಂತರ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟ ವಿಜಯಲಕ್ಷ್ಮಿ

    ಪತ್ನಿ ವಿಜಯಲಕ್ಷ್ಮೀ ಜೊತೆ ಪುತ್ರ ವಿನೀಶ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಆಗಮನ

    ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್​ನನ್ನು ನೋಡಿ ಜೈಲಿನಲ್ಲಿ ನಟ ದರ್ಶನ್ ಭಾವುಕ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಒಟ್ಟು 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಒಂದು ಕಡೆ ಜೈಲಿನಲ್ಲಿರೋ ತಂದೆಯನ್ನು ನೋಡಲು ಮಗ ವಿನೀಶ್, ಮತ್ತೊಂದು ಕಡೆ ಪ್ರೀತಿಯ ಪತಿಯನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಹಾತೊರೆಯುತ್ತಿದ್ದಾರೆ. ಹೀಗಾಗಿ ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್​​ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಆಗಮಿಸಿದ್ದರು. ಮೊದಲು ಜೈಲಿನ ಚೆಕ್ ಪೋಸ್ಟ್ ಸಮೀಪ ಕಾರು ನಿಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಕ್ಯಾಮೆರಾ ಕಂಡು ವಿಜಯಲಕ್ಷ್ಮಿ, ವಿನೀಶ್ ವಾಪಸ್ ತೆರಳಿದರು. ನಂತರ ತಾವು ಬಂದಿದ್ದ ಕಾರು ಬಿಟ್ಟು, ಪೊಲೀಸ್ ಅಧಿಕಾರಿಯೊಬ್ಬರ ಖಾಸಗಿ ಕಾರಿನಲ್ಲಿ ಜೈಲಿನ ಒಳಗೆ ಹೋಗಿದ್ದಾರೆ. ಇದೇ ಮೊದಲ ಬಾರಿಗೆ ನಟ ದರ್ಶನ್ ಕುಟುಂಬ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟಿದೆ. ಪತ್ನಿ ವಿಜಯಲಕ್ಷ್ಮೀ ಅವರ ಜೊತೆಗೆ ಪುತ್ರ ವಿನೀಶ್ ಕೂಡ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಕಂಬಿ ಹಿಂದಿರೋ ಅಪ್ಪನ ನೋಡಿದ ಮಗ ವಿನೀಶ್​​ ಭಾವುಕರಾಗಿದ್ದಾರಂತೆ. ಪತ್ನಿ ಹಾಗೂ ಪುತ್ರ ನೋಡಿ ಜೈಲಿನಲ್ಲಿರೋ ನಟ ದರ್ಶನ್ ಕೂಡ ಭಾವುಕರಾಗಿದ್ದಾರಂತೆ.

ಇನ್ನು, ನಟ ದರ್ಶನ್​ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದರಿಂದ ಅವರನ್ನು ಅನ್ನಪೂರ್ಣೇಶ್ವರಿ ಪೊಲೀಸ್ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡಿದ್ದರು. ಆ ಸಮಯದಲ್ಲಿ ನಟ ದರ್ಶನ್​ನ್ನು ನೋಡಲು ತಾಯಿ, ತಮ್ಮ, ಪತ್ನಿ, ಮಗ, ಸ್ನೇಹಿತರು ಯಾರೊಬ್ಬರು ಕೂಡ ಅವರನ್ನು ಭೇಟಿಯಾಗಲು ಬಂದಿರಲಿಲ್ಲ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲಿಗೆ ಸೇರುತ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಸ್ನೇಹಿತರು ಶಾಕ್​ ಆಗಿದ್ದರು. ಅದರಲ್ಲೂ ಮಗ ವಿನೀಶ್​​ ತುಂಬಾ ಬೇಸರಗೊಂಡಿದ್ದಾರಂತೆ. ಇಷ್ಟೂ ದಿನ ಅಪ್ಪನ ಜೊತೆಗೆ ಆಟವಾಡಿಕೊಂಡಿದ್ದ ಮಗ ವಿನೀಶ್​ ತಂದೆಯನ್ನು ನೆನೆದು ಬೇಸರಗೊಂಡಿದ್ದರಂತೆ. ಹೀಗಾಗಿ ಇಂದು ತಾಯಿಯ ಜೊತೆಗೆ ಅಪ್ಪನನ್ನು ಭೇಟಿಯಾಗಲು ಮಗ ವಿನೀಶ್​ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಬಳಿಕ ಕಂಬಿ ಹಿಂದೆ ನಿಂತ ಅಪ್ಪನನ್ನು ನೋಡಿದ ಮಗ ಹಾಗೂ ಪತ್ನಿ ಭಾವುಕ ಕ್ಷಣಕ್ಕೆ ಪರಪ್ಪನ ಅಗ್ರಹಾರ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬಂಧನದ ಬಳಿಕ ಮೊದಲ ಬಾರಿ ಮಗನನ್ನು ಕಂಡ ದರ್ಶನ್.. ಕಂಬಿ ಹಿಂದಿರೋ ಅಪ್ಪನ ನೋಡಿ ವಿನೀಶ್​ ಹೇಳಿದ್ದೇನು?

https://newsfirstlive.com/wp-content/uploads/2024/06/darshan53.jpg

Load More