newsfirstkannada.com

Chandrayaan-3: ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಹಾದಿ ಸುಗಮ; ಇಸ್ರೋ ಲೇಟೆಸ್ಟ್ ಮಾಹಿತಿ ಇಲ್ಲಿದೆ ನೋಡಿ

Share :

22-08-2023

    ಚಂದ್ರಯಾನ-3 ಮಿಷನ್ ನಿಗದಿಯಂತೆ ಸಾಗುತ್ತಿದೆ ಎಂದ ಇಸ್ರೋ

    70 ಕಿ.ಮೀ ದೂರದಿಂದ ಚಂದ್ರನ ಮೇಲ್ಮೈ ಫೋಟೋ ಕಳುಹಿಸಿದ ವಿಕ್ರಂ

    ನಾಳೆ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಂ ಲ್ಯಾಂಡರ್‌ ಸೇಫ್ ನಿರೀಕ್ಷೆ

ಚಂದ್ರನ ದಕ್ಷಿಣ ಧ್ರುವದಲ್ಲಿ ಇತಿಹಾಸ ಸೃಷ್ಟಿಸುವ ಭಾರತದ ಚಂದ್ರಯಾನ-3 ಮಿಷನ್ ನಿಗದಿಯಂತೆ ಸಾಗುತ್ತಿದೆ. ವಿಕ್ರಂ ಲ್ಯಾಂಡರ್‌ ಸಾಗುವುದು ಸುಸೂತ್ರವಾಗಿ ಮುಂದುವರಿದಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಈ ಮಾಹಿತಿಯೊಂದಿಗೆ ಇಸ್ರೋ ನಾಳೆ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಂ ಲ್ಯಾಂಡರ್‌ ಅನ್ನು ಸೇಫ್ ಆಗಿ ಲ್ಯಾಂಡ್ ಆಗುವ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕೋಟ್ಯಾಂತರ ಭಾರತೀಯರು ಚಂದ್ರನಲ್ಲಿ ವಿಕ್ರಂ ಲ್ಯಾಂಡರ್‌ನ ಸೇಫ್ ಲ್ಯಾಂಡಿಂಗ್‌ಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಕೊನೆಯ 2 ಗಂಟೆಗಳ ನಿರ್ಧಾರವೇ ಅಂತಿಮ: ಆಮೇಲೆ ನಿಯಂತ್ರಣದಲ್ಲೇ ಇರಲ್ಲ! ‘ವಿಕ್ರಂ’ ವೇಗ ತಗ್ಗಿಸಲು ಮುಂದಾದ ಇಸ್ರೋ

ಸೋಷಿಯಲ್ ಮೀಡಿಯಾ Xನಲ್ಲಿ ಲೇಟೆಸ್ಟ್ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಚಂದ್ರಯಾನ-3 ಮಿಷನ್ ನಿಗದಿಯಂತೆ ಸಾಗುತ್ತಿದೆ. ಚಂದ್ರಯಾನ ಸಿಸ್ಟಮ್ಸ್ ಅನ್ನು ನಿರಂತರವಾಗಿ ಪರಿಶೀಲನೆ ಮಾಡಲಾಗುತ್ತಿದೆ. ವಿಕ್ರಂ ಲ್ಯಾಂಡರ್ ನಿಧಾನವಾಗಿ, ಸುಸೂತ್ರವಾಗಿ ಸಾಗುವುದು ಮುಂದುವರಿದಿದೆ. ಮಿಷನ್ ಆಪರೇಷನ್ ಕಾಂಪ್ಲೆಕ್ಸ್ ಶಕ್ತಿ, ಉತ್ಸಾಹದಿಂದ ಕೂಡಿದೆ. ವಿಕ್ರಮ್ ಲ್ಯಾಂಡರ್ 70 ಕಿ.ಮೀ ದೂರದಿಂದ ಚಂದ್ರನ ಮೇಲ್ಮೈ ಫೋಟೋವೊಂದನ್ನು ಸೆರೆ ಹಿಡಿದಿದ್ದು, ಇಸ್ರೋ ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡಿದೆ.

ಚಂದ್ರನಿಗೆ ಇನ್ನೂ ಹತ್ತಿರವಾಗುತ್ತಿರುವ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್​ಗೆ ಸಕಲ ಸಿದ್ಧತೆಗಳು ನಡೆದಿದೆ. ಒಂದು ಸೆಕೆಂಡ್​ಗೆ 1.69 ಕಿ.ಮೀ ವೇಗದಲ್ಲಿ ಸಾಗುತ್ತಿರುವ ಲ್ಯಾಂಡರ್ ವೇಗವನ್ನು ಮತ್ತಷ್ಟು ಇಳಿಸಬೇಕಿದೆ. ಲ್ಯಾಂಡರ್ ವೇಗ ಇಳಿಸುವುದೇ ಇಸ್ರೋಗೆ ಸವಾಲಿನ ಕೆಲಸ. ಈ ಸವಾಲಿನ ಮಧ್ಯೆ ನಾಳೆ ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡಿಂಗ್ ನಿರೀಕ್ಷೆಯಿದ್ದು, ಇಸ್ರೋ ವಿಜ್ಞಾನಿಗಳು ಸರ್ವ ರೀತಿಯಲ್ಲೂ ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Chandrayaan-3: ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಹಾದಿ ಸುಗಮ; ಇಸ್ರೋ ಲೇಟೆಸ್ಟ್ ಮಾಹಿತಿ ಇಲ್ಲಿದೆ ನೋಡಿ

https://newsfirstlive.com/wp-content/uploads/2023/08/Chandrayaana-3-1.jpg

Load More