newsfirstkannada.com

ವಿಕ್ರಂನ 2 ಎಂಜಿನ್​ ಕೈಕೊಟ್ಟರೂ ಸೇಫ್​ ಲ್ಯಾಂಡಿಂಗ್​ ಆಗಲಿದೆ; ಇಸ್ರೋ ಮುಖ್ಯಸ್ಥ ಬಿಚ್ಚಿಟ್ರು ಕುತೂಹಲಕಾರಿ ಸಂಗತಿ

Share :

23-08-2023

    ವಿಕ್ರಮ್ ಸೇಫ್ ಲ್ಯಾಂಡಿಂಗ್ ಆಗುವಂತೆ ವಿನ್ಯಾಸ

    ಅಡ್ಡಲಾಗಿ ಚಲಿಸುತ್ತಿರುವ ವಿಕ್ರಮ್ ಲ್ಯಾಂಡರ್

    ಲೆಕ್ಕಾಚಾರ ತಲೆಕೆಳಗಾದ್ರು ವಿಕ್ರಮ್ ಸೇಫ್ ಲ್ಯಾಂಡ್​ ಆಗುತ್ತೆ

ಇಂದು ವಿಕ್ರಮನ ಪರಾಕ್ರಮವನ್ನು ಕಣ್ಣಾರೆ ಕಾಣುವ ದಿನ. ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ವಿಕ್ರಮ ಇಳಿಯಲಿದ್ದಾನೆ. ಬಳಿಕ ರೋವರ್​ ಚಂದ್ರನ ಮೇಲೆ ಚಲಿಸಲಿದ್ದಾನೆ. ಅಂದಹಾಗೆಯೇ ಇಸ್ರೋ ಮುಖ್ಯಸ್ಥ ಸೋಮನಾಥ್ ವಿಕ್ರಮ್​ ಲ್ಯಾಂಡರ್​ ಕುರಿತಾಗಿ ಕೆಲವು ಕುತೂಹಲ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. ಈ ಬಾರಿ ವಿಕ್ರಮ್ ಲ್ಯಾಂಡರ್ ನ ಎರಡು ಇಂಜಿನ್‌ ಕಾರ್ಯನಿರ್ವಹಿಸದೇ ಇದ್ದರೂ, ಲ್ಯಾಂಡಿಂಗ್ ಆಗಲಿದೆ ಎಂದು ಹೇಳಿದ್ದಾರೆ.

ಚಂದ್ರಯಾನ-3 ನೌಕೆ ಲ್ಯಾಂಡಿಂಗ್​ ವೇಳೆ ಬಹಳಷ್ಟು ವೈಫಲ್ಯಗಳಾದರೂ, ವಿಕ್ರಮ್ ಸೇಫ್ ಲ್ಯಾಂಡಿಂಗ್ ಆಗುವಂತೆ ವಿನ್ಯಾಸ ಮಾಡಲಾಗಿದೆ. ಬಹಳಷ್ಟು ವೈಫಲ್ಯಗಳಾದರೂ, ಆಲ್ಗಾರಿದಮ್ ಕೆಲಸ ಮಾಡಲಿದೆ. ಅಡ್ಡವಾಗಿ ಚಲಿಸುತ್ತಿರುವ ವಿಕ್ರಮ್ ಲ್ಯಾಂಡರ್, ನೇರ ದಿಕ್ಕಿನಲ್ಲಿ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡಿಂಗ್ ಮಾಡಿಸುವುದೇ ದೊಡ್ಡ ಚಾಲೆಂಜ್‌. ಆರ್ಬಿಟರ್ ನಿಂದ ಲ್ಯಾಂಡರ್ ಪ್ರತೇಕವಾದ ಬಳಿಕ ಅಡ್ಡವಾಗಿ ಚಲಿಸುತ್ತೆ. ಸರಣಿ ವೇಗ ತಗ್ಗಿಸುವ ಮೂಲಕ ನೇರ ದಿಕ್ಕಿನಲ್ಲಿ ಸಾಗುವಂತೆ ಮಾಡಿ ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡಿಂಗ್ ಮಾಡುತ್ತೆ. ಈ ಪ್ರಕ್ರಿಯೆಯೇ ಬಹಳ ಮುಖ್ಯ ಎಂದು ಸೋಮನಾಥ್ ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ಅಡ್ಡ ದಿಕ್ಕಿನಿಂದ ನೇರ ದಿಕ್ಕಿಗೆ ಪರಿವರ್ತಿಸುವಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸಲಿದೆ. ಈ ವಿಷಯದಲ್ಲೇ ಕಳೆದ ಬಾರಿ ಸಮಸ್ಯೆಯಾಗಿತ್ತು. ಆದರೇ, ಆ ಬಾರಿ ಕೆಲವೊಂದು ಲೆಕ್ಕಾಚಾರ ತಲೆಕೆಳಗಾದರೂ, ವಿಕ್ರಮ್ ಸೇಫ್ ಲ್ಯಾಂಡಿಂಗ್ ಸಿದ್ಧತೆ ಮಾಡಲಾಗಿದೆ. ಇಸ್ರೋ ಮುಖ್ಯಸ್ಥ ಹೇಳಿದ್ದಾರೆ.

ಸದ್ಯ ಭಾರತ ಮಾತ್ರವಲ್ಲದೆ, ವಿಶ್ವವೇ ಈ ದೃಶ್ಯವನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ವಿಕ್ರಂ ಲ್ಯಾಂಡಿಂಗ್​​ ಯಶಸ್ವಿಯಾಗಲೆಂದು ಹಾರೈಸುತ್ತಿದ್ದಾರೆ. ಒಟ್ಟಿನಲ್ಲಿ ಭಾರತೀಯರಂತೂ ಸಂಜೆ 6 ಗಂಟೆ 04 ನಿಮಿಷದ ದೃಶ್ಯವನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ಉತ್ಸುಹಕರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಕ್ರಂನ 2 ಎಂಜಿನ್​ ಕೈಕೊಟ್ಟರೂ ಸೇಫ್​ ಲ್ಯಾಂಡಿಂಗ್​ ಆಗಲಿದೆ; ಇಸ್ರೋ ಮುಖ್ಯಸ್ಥ ಬಿಚ್ಚಿಟ್ರು ಕುತೂಹಲಕಾರಿ ಸಂಗತಿ

https://newsfirstlive.com/wp-content/uploads/2023/08/Somanath.jpg

Load More