newsfirstkannada.com

ಆ್ಯಕ್ಷನ್ ಸೀನ್ ಚಿತ್ರೀಕರಿಸುವಾಗ ಅವಘಡ; ಸಲಾರ್​ ಸಿನಿಮಾದಲ್ಲಿ ನಟಿಸಿದ್ದ ಪೃಥ್ವಿರಾಜ್ ಸುಕುಮಾರನ್​ ಸ್ವಲ್ಪದರಲ್ಲೇ ಪಾರು

Share :

26-06-2023

    ಸಾಲು ಸಾಲು ಶೂಟಿಂಗ್​ಗಳು ಕೈಯಲ್ಲಿರುವಾಗಲೇ ನಟನಿಗೆ ಗಾಯ

    ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಸಿನಿಮಾದಲ್ಲಿ ಪೃಥ್ವಿರಾಜ್

    ಆ್ಯಕ್ಷನ್​ ಸೀನ್ ಶೂಟಿಂಗ್​ ನಡೆಯುವಾಗ ಬಸ್​ನಿಂದ ಜಾರಿ ಬಿದ್ದ ನಟ

ಕೊಚ್ಚಿ: ಮಾಲಿವುಡ್​ ಸ್ಟಾರ್​ ಹಾಗೂ ಪ್ಯಾನ್​ ಇಂಡಿಯಾ ಸಿನಿಮಾ ಸಲಾರ್​ನಲ್ಲಿ ಅಭಿನಯಿಸುತ್ತಿರುವ ಪೃಥ್ವಿರಾಜ್ ಸುಕುಮಾರನ್ ಕಾಲಿಗೆ ತೀವ್ರವಾದ ಪೆಟ್ಟು ಮಾಡಿಕೊಂಡಿದ್ದಾರೆ. ಪೃಥ್ವಿರಾಜ್ ಖಾಸಗಿ ಆಸ್ಪತ್ರೆಗೆ ದಾಖಲೆಯಾಗಿದ್ದು ನಟನಿಗೆ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ.

ಮಲಯಾಳಂ ಭಾಷೆಯ ‘ವಿಳಯಾಟ್ಟು ಬುದ್ಧ’ ಸಿನಿಮಾದ ಶೂಟಿಂಗ್ ಮಾಡುತ್ತಿದ್ದರು. ಕೇರಳದ ಮರಯೂರು ಬಸ್​ ನಿಲ್ದಾಣದಲ್ಲಿ ಆರ್​ಟಿಸಿ ಬಸ್​ ಒಳಗೆ ಆ್ಯಕ್ಷನ್​ ಸ್ವೀಕ್ವೆನ್ಸ್​ ಮಾಡುವಾಗ ನಟ ಪೃಥ್ವಿರಾಜ್​ ಬಸ್​ನಿಂದ ಜಾರಿ ಬಿದ್ದಿದ್ದಾರೆ. ತಕ್ಷಣ ನಟನನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ವೈದ್ಯರು ಚಿಕಿತ್ಸೆ ನೀಡಿ ಸರ್ಜರಿ ಮಾಡಿಕೊಂಡು 2-3 ವಾರಗಳು ಬೆಡ್​ ರೆಸ್ಟ್​ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಸಾಲು ಸಾಲು ಸಿನಿಮಾಗಳ ಶೂಟಿಂಗ್​ ಕೈಯಲ್ಲಿರುವಾಗಲೇ ನಟನಿಗೆ ಈ ರೀತಿ ಆಗಿರುವುದು ಭಾರೀ ನಿರಾಸೆ ಮೂಡಿಸಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಚಿತ್ರದಲ್ಲೂ ಪೃಥ್ವಿರಾಜ್ ಅಭಿನಯ ಮಾಡಿದ್ದಾರೆ. ಈಗಾಗಲೇ ಪೃಥ್ವಿರಾಜ್ ಸಲಾರ್ ಸಿನಿಮಾದಲ್ಲಿ ತಮ್ಮ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಸಲಾರ್​ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಡಾರ್ಲಿಂಗ್​ ಪ್ರಭಾಸ್ ನಟನೆ ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ಕೆಜಿಎಫ್​ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಆ್ಯಕ್ಷನ್ ಸೀನ್ ಚಿತ್ರೀಕರಿಸುವಾಗ ಅವಘಡ; ಸಲಾರ್​ ಸಿನಿಮಾದಲ್ಲಿ ನಟಿಸಿದ್ದ ಪೃಥ್ವಿರಾಜ್ ಸುಕುಮಾರನ್​ ಸ್ವಲ್ಪದರಲ್ಲೇ ಪಾರು

https://newsfirstlive.com/wp-content/uploads/2023/06/Prithviraj_Sukumaran.jpg

Load More