newsfirstkannada.com

ಕಾರ್ಪೊರೇಟರ್​ ಪತಿಯ ಚೇರ್​ಗೆ ಕಟ್ಟಿ ಹಾಕಿದ ಗ್ರಾಮಸ್ಥರು.. ಸುಮ್ನೆ ಕಟ್ಟಿಹಾಕಿದ್ದಲ್ಲ, ಕಾರಣ ಇದೆ?​

Share :

28-07-2023

    ಚೇರ್​ಗೆ ಕಟ್ಟಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

    ಕಳಪೆ ರಸ್ತೆ ನಮಗೆ ಬೇಡವೇ ಬೇಡ ಎಂದು ಆಕ್ರೋಶ

    ಕಾರ್ಪೊರೇಟರ್​ ಬದಲು ಆಕೆಯ ಪತಿಯನ್ನು ಕಟ್ಟಿ ಹಾಕಿದ ಜನರು

ಕಾರ್ಪೊರೇಟರ್ ಪತಿಯನ್ನ ಚೇರ್​ಗೆ ಕಟ್ಟಿಹಾಕಿದ ಘಟನೆ ಯುಪಿಯ ಕಾನ್ಪುರದಲ್ಲಿ ನಡೆದಿದೆ. ಅಭಿವೃದ್ಧಿ ನಿರ್ಲಕ್ಷ್ಯದಿಂದಾಗಿ ಕಾರ್ಪೊರೇಟರ್ ಪತಿಯನ್ನ ನೀರು ತುಂಬಿದ್ದ ರಸ್ತೆಯಲ್ಲಿ ಚೇರ್​ನಲ್ಲಿ​ ಕೂರಿಸಿ ಕಟ್ಟಿ ಹಾಕಿದ್ದಾರೆ.

ಊರಿನ ರಸ್ತೆಗಳು ಮಳೆಯಿಂದ ಸಂಪೂರ್ಣ ಹಾಳಾಗಿದ್ದರಿಂದ ಗ್ರಾಮಸ್ಥರು ಕಾರ್ಪೋರೇಟರ್​ ಮೇಲೆ ಕೋಪಗೊಂಡಿದ್ದರು. ಇದಕ್ಕೂ ಮೊದಲು ಪತ್ನಿಯ ಪರವಾಗಿ ವಾರ್ಡ್​ನಲ್ಲಿ ಓಡಾಡುತ್ತಿದ್ದನು. ಆದರೆ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ನೊಂದ ಜನರು ಪ್ರತಿಭಟನೆ ಇಳಿಯುವ ಮೂಲಕ ಕಾರ್ಪೊರೇಟರ್ ಪತಿಯನ್ನ ಚೇರ್ ಕಟ್ಟಿಹಾಕಿ ಆಕ್ರೋಶ ಮೆರೆದಿದ್ದಾರೆ.ಸದ್ಯ ಈ ದೃಶ್ಯ ವೈರಲ್​ ಆಗುತ್ತಿದೆ.

ಇನ್ನು ಊರಿನ ಸಮಸ್ಯೆಗೆ ಸರಿಯಾಗಿ ಸ್ಪಂದಿಸದೆ ಕಳಪೆ ಮಟ್ಟದ ರಸ್ತೆ ಮತ್ತು ಇನ್ನಿತರ ಕಳಪೆ ಸೇವೆ ಒದಗಿಸಿ ಮಂಕು ಬೂದಿ ಎರಚಿದ ಕಾರ್ಪೋರೇಟರ್​ಗೆ ಏನು ಮಾಡಬೇಕೆಂದು ತಿಳಿಯದೆ ಕೋಪಗೊಂಡ ಜನರು ಆಕೆಯ​ ಪತಿಯನ್ನು ಹಿಡಿದು ಚೇರ್​ಗೆ ಕಟ್ಟಿಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರ್ಪೊರೇಟರ್​ ಪತಿಯ ಚೇರ್​ಗೆ ಕಟ್ಟಿ ಹಾಕಿದ ಗ್ರಾಮಸ್ಥರು.. ಸುಮ್ನೆ ಕಟ್ಟಿಹಾಕಿದ್ದಲ್ಲ, ಕಾರಣ ಇದೆ?​

https://newsfirstlive.com/wp-content/uploads/2023/07/Corporate.jpg

Load More