newsfirstkannada.com

ಏಯ್‌.. ಏನೇ.. ಎಂದ ವಿನಯ್‌ ವಿರುದ್ಧ ತಿರುಗಿಬಿದ್ದ ತನಿಶಾ; ಬಿಗ್‌ಬಾಸ್‌ ಮನೆಯಲ್ಲಿ ಏನಾಗ್ತಿದೆ?

Share :

02-11-2023

    ಬಿಗ್​ಬಾಸ್​​ ಮನೆಯಲ್ಲಿ ಏಕವಚನದ ಪದ ಬಳಸಿದ ವಿನಯ್​

    ಸ್ಪರ್ಧಿಗಳು ಎದುರಾಳಿ ಟೀಮ್​ ಜೊತೆಗೆ ಜಟ್ಟಿ ಕಾಳಗ ಮಾಡಬೇಕು

    ಕುಸ್ತಿ ಅಖಾಡದಲ್ಲಿ ವಿನಯ್​ ಹಾಗೂ ತನಿಶಾ ನಡುವೆ ಮಾತಿನ ಚಕಮಕಿ

ಕನ್ನಡದ ಬಿಗ್​ಬಾಸ್ ರಿಯಾಲಿಟಿ ಶೋ​​ ನಿನ್ನೆ ರಣರಂಗವಾಗಿ ಹೋಗಿತ್ತು. ನಿನ್ನೆ ಎರಡು ಟಾಸ್ಕ್​ಗಳಲ್ಲಿಯೂ ಎಲ್ಲರ ಮಾತುಗಳು ತಾರಕಕ್ಕೇರಿದ್ದು ಸುಳ್ಳಲ್ಲ. ದಿನ ಕಳೆದಂತೆ ಬಿಗ್​ಬಾಸ್​​ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳ ವ್ಯಕ್ತಿತ್ವ ಆಚೆ ಬರುತ್ತಿದೆ. ಇವತ್ತು ಕೂಡ ಬಿಗ್​ಬಾಸ್​ ಮನೆಯಲ್ಲಿ ಹಳ್ಳಿ ಟಾಸ್ಕ್​ ಮುಂದುವರೆಯಲ್ಲಿದ್ದು, ತನಿಶಾ ಹಾಗೂ ವಿನಯ್ ಮಧ್ಯೆ ಮಾತಿನ ಚಕಮಕಿ ನಡೆಯಲಿದೆ.

ಇವತ್ತು ಮನೆಯಲ್ಲಿ ಹಳ್ಳಿಗಳ ಹೆಸರಾಂತ ಆಟ ಜಟ್ಟಿ ಕಾಳಗವಿರಲಿದೆ. ಆಚೆಯಿಂದ ಜಟ್ಟಿಯೊಬ್ಬರು ಈ ಟಾಸ್ಕ್​ ಆಡಿಸಲಿಕ್ಕೆ ಬರ್ತಾರೆ. ಟೀಮ್​ನಿಂದ ಆಯ್ಕೆ ಆದ ಸ್ಪರ್ಧಿಗಳು ಎದುರಾಳಿ ಟೀಮ್​ ಸ್ಪರ್ಧಿಯೊಟ್ಟಿಗೆ ಜಟ್ಟಿ ಕಾಳಗ ಮಾಡಬೇಕು. ಇನ್ನೂ, ತನಿಶಾ ತಮ್ಮ ಟೀಮ್​ಗೆ ಆಚೆ ಇದ್ದು ಜೋರು ಧ್ವನಿಯಲ್ಲಿ ಸಪೋರ್ಟ್​ ಮಾಡುತ್ತಾರೆ. ಅದಕ್ಕೆ ರೊಚ್ಚಿಗೆದ್ದ ವಿನಯ್ ನೀನೇ ಭಾ ಡ್ರೆಸ್ ಚೇಂಜ್ ಮಾಡ್ಕೊಂಡು ಬಂದು ಆಡು ಅಂತಾರೆ.

ಆ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ತನಿಶಾ, ಅವರಿಗೆ ಸಮಸ್ಯೆ ಆದ್ರೆ ಅವರೇ ಹೇಳ್ತಾರೆ. ನೀವು ಹೇಳಬೇಕಾಗಿಲ್ಲ ಅಂತ ತಿರುಗಿಸಿ ಮಾತಾಡುತ್ತಾರೆ. ಅದಕ್ಕೆ ವಿನಯ್​​ ಏಕವಚನದಲ್ಲಿ ಹೋಗೆಲೆ ಅಂತಾ ಹೇಳುತ್ತಾರೆ. ಕೂಡಲೇ ತನಿಶಾ ಮರ್ಯಾದೆ ಕೊಟ್ಟು ಮಾತಾಡಿ ಸಿಂಗ್ಯೂಲರ್ ಯೂಸ್ ಮಾಡಬೇಡಿ. ಮೈಂಡ್ ಯೂವರ್ ವರ್ಡ್ಸ್ ಅಂತಾರೆ. ಒಟ್ಟಿನಲ್ಲಿ ದೊಡ್ಮನೆಯಲ್ಲಿ ಯಾಕೋ ಜಗಳವಂತೂ ತಪ್ಪಿದ್ದಲ್ಲ. ಒಂದಲ್ಲಾ ಒಂದು ವಿಷಯಕ್ಕೆ ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಗಳು ಜಗಳ ಆಡ್ತಾನೆ ಇರ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಯ್‌.. ಏನೇ.. ಎಂದ ವಿನಯ್‌ ವಿರುದ್ಧ ತಿರುಗಿಬಿದ್ದ ತನಿಶಾ; ಬಿಗ್‌ಬಾಸ್‌ ಮನೆಯಲ್ಲಿ ಏನಾಗ್ತಿದೆ?

https://newsfirstlive.com/wp-content/uploads/2023/11/bigg-boss.png

Load More