newsfirstkannada.com

ವಿನೇಶ್ ಫೋಗಟ್, ಬಜರಂಗ್ ಪುನಿಯಾ ರಾಜಕೀಯದ ಕುಸ್ತಿಗೆ ಅಧಿಕೃತ ಎಂಟ್ರಿ; ಏನಿದರ ಪ್ಲಾನ್?

Share :

Published September 4, 2024 at 6:22pm

    ರಾಹುಲ್‌ ಗಾಂಧಿ ಅವರನ್ನು ಭೇಟಿಯಾದ ವಿನೇಶ್ ಫೋಗಟ್

    ಫೋಗಟ್ ಪರಿವಾರದ ತವರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ

    ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನ

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 100 ಗ್ರಾಂ ದೇಹದ ತೂಕ ಹೆಚ್ಚಾದ ಕಾರಣಕ್ಕೆ ಚಿನ್ನದ ಪದಕದಿಂದ ವಂಚಿತರಾದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ವಿರೋಚಿತ ಸೋಲು ಕಂಡಿದ್ದರು. ವಿನೇಶ್ ಫೋಗಟ್‌ ನೋವಿನ ವಿದಾಯಕ್ಕೆ ಅಂದು ಇಡೀ ದೇಶವೇ ಮರುಗಿತ್ತು. ಸೋತು ಕೋಟ್ಯಾಂತರ ಮನಗೆದ್ದ ವಿನೇಶ್ ಫೋಗಟ್ ಅವರು ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕುಸ್ತಿ ಅಖಾಡದಿಂದ ರಾಜಕೀಯಕ್ಕೆ ವಿನೇಶ್ ಫೋಗಟ್.. ಎಲೆಕ್ಷನ್​​ನಲ್ಲಿ ಬಬಿತಾ ಫೋಗಟ್ ವಿರುದ್ಧ ಸೈ ಅಂತಾರಾ? 

ಕುಸ್ತಿ ಪಟುಗಳಾದ ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಇಂದು ಲೋಕಸಭಾ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಮಾತುಕತೆಯ ಬಳಿಕ ವಿನೇಶ್ ಫೋಗಟ್ ಅವರು ಅಧಿಕೃತವಾಗಿ ರಾಜಕೀಯದ ಅಖಾಡಕ್ಕೆ ಧುಮುಕಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿರುವ ವಿನೇಶ್ ಫೋಗಟ್ ಅವರು ಈ ಬಾರಿಯ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ವಿನೇಶ್ ಫೋಗಟ್ ಅವರು ಹರಿಯಾಣದ ಜುಲಾನಾ ಕ್ಷೇತ್ರದಿಂದ ಹಾಗೂ ಬದ್ಲಿ ಕ್ಷೇತ್ರದಿಂದ ಬಜರಂಗ್ ಪುನಿಯಾ ಅವರು ಸ್ಪರ್ಧಿಸಲಿದ್ದಾರೆ.

ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಇಬ್ಬರು ಮುಂಬರುವ ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಇಬ್ಬರು ಕ್ಷೇತ್ರಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದಾರೆ.

ಇದನ್ನೂ ಓದಿ: ವಿನೇಶ್​ ಪೋಗಟ್​​​ ಜತೆಗಿನ ಅಮೀರ್​ ಖಾನ್​ ವಿಡಿಯೋ ಕಾಲ್​ ವೈರಲ್​​; ಏನಿದರ ರಹಸ್ಯ? 

ಮುಂದಿನ ಅಕ್ಟೋಬರ್ 5ರಂದು ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಆಮ್ ಆದ್ಮಿ ಪಾರ್ಟಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ ಪಕ್ಷ ಈ ಇಬ್ಬರು ಕುಸ್ತಿ ಪಟುಗಳನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಲು ಮಾಸ್ಟರ್ ಪ್ಲಾನ್ ಮಾಡಿದೆ. ಜುಲಾನಾ ಕ್ಷೇತ್ರದಲ್ಲಿ ಸದ್ಯ ಜನ ನಾಯಕ ಜನತಾ ಪಾರ್ಟಿಯ ಶಾಸಕರಿದ್ದಾರೆ. ಬದ್ಲಿ ಕ್ಷೇತ್ರ ಫೋಗಟ್ ಪರಿವಾರದ ತವರು ಕ್ಷೇತ್ರ. ಇಲ್ಲಿ ಕುಸ್ತಿ ಪಟುಗಳು ತಮ್ಮ ರಾಜಕೀಯ ಅಗ್ನಿಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಅಕ್ಟೋಬರ್ 8 ರಂದು ಹರಿಯಾಣ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿನೇಶ್ ಫೋಗಟ್, ಬಜರಂಗ್ ಪುನಿಯಾ ರಾಜಕೀಯದ ಕುಸ್ತಿಗೆ ಅಧಿಕೃತ ಎಂಟ್ರಿ; ಏನಿದರ ಪ್ಲಾನ್?

https://newsfirstlive.com/wp-content/uploads/2024/09/Rahul-gandhi-Vinesh-Phogat.jpg

Load More