/newsfirstlive-kannada/media/post_attachments/wp-content/uploads/2024/08/VINESH-PHOGAT-1-2.jpg)
ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ ವಿನೇಶ್​ ಫೋಗಾಟ್​ರನ್ನು ಪ್ಯಾರಿಸ್​ ಒಲಿಂಪಿಕ್ಸ್​ ಅನರ್ಹಗೊಳಿಸಿದೆ. ಇಂದು ಫೈನಲ್​ ಪಂದ್ಯ ನಡೆಯೂವುದಕ್ಕೂ ಮುನ್ನವೇ ಭಾರತೀಯರಿಗೆ ಈ ವಿಚಾರ ಅಚ್ಚರಿ ಜೊತೆಗೆ ಆಘಾತ ಮೂಡಿಸಿದೆ.
ಪ್ರೀಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಯೂಯ್ ಸುಸಾಕಿಗೆ ನಿನ್ನೆ ವಿನೇಶ್ ಫೋಗಾಟ್ ಮಣ್ಣು ಮುಕ್ಕಿಸಿದ್ದರು. ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಯೂಯ್ ಸುಸಾಕಿಯನ್ನು ಸೋಲಿಸಿದ್ದರು.
/newsfirstlive-kannada/media/post_attachments/wp-content/uploads/2024/08/Vinesh-Phogat-1-1.jpg)
ಇದನ್ನೂ ಓದಿ: ಬೈಕ್​ಗೆ ಗುದ್ದಿದ ಅಪರಿಚಿತ ವಾಹನ.. ಮಗು ಸೇರಿ ಐವರು ಸ್ಥಳದಲ್ಲೇ ಸಾವು
ಕ್ವಾರ್ಟರ್​ ಫೈನಲ್​ನಲ್ಲಿ ಉಕ್ರೇನ್​ ಒಕ್ಸಾನಾ ಲಿವಾಚ್​ ಎದುರಿಸಿದ ವಿನೇಶ್​ ಫೋಗಾಟ್​ ಪರಾಕ್ರಮ ಮೆರೆದಿದ್ದರು. ಬಳಿಕ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ವಿರುದ್ಧ ಪ್ರದರ್ಶನ ತೋರಿ 5-0 ಅಂತರದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಹಾಕಿದರು.
ಆದರಿಂದು ಪ್ರೀಸ್ಟೈಲ್ ಫೈನಲ್‌ನಲ್ಲಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್​ರನ್ನ ಎದುರಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ವಿನೇಶ್​ ಪೋಗಾಟ್​ರನ್ನು ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಅನರ್ಹಗೊಳಿಸಲಾಗಿದೆ. ಅತಿಯಾದ ತೂಕದ ಕಾರಣ ವಿನೇಶ್​ ಪೋಗಾಟ್​ ಅನರ್ಹರಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/Vinesh-Phogat-5.jpg)
ಇದನ್ನೂ ಓದಿ: ಇರೋದು ಒಂದೇ ಚಾನ್ಸ್​.. ಕ್ಯಾಪ್ಟನ್ ತಲೆಯಲ್ಲಿ ಹೊಸ ತಂತ್ರ.. ಆದರೂ ಕಾಡಿವೆ ಐದು ಪ್ರಶ್ನೆಗಳು..!
ಮಾಹಿತಿ ಪ್ರಕಾರ, ವಿನೇಶ್ 100 ಗ್ರಾಂ ಹೆಚ್ಚಿದ್ದ ಕಾರಣ ಇಂದು ಸಂಜೆ ನಡೆಯಬೇಕಾಗಿದ್ದ ಫೈನಲ್​ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಸದ್ಯ ಈ ವಿಚಾರ ಭಾರತೀಯರಿಗಂತೂ ಭಾರೀ ಬೇಸರ ತರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us