/newsfirstlive-kannada/media/post_attachments/wp-content/uploads/2024/08/Vinesh-Poghaht.jpg)
ಪ್ಯಾರಿಸ್​ ನೆಲದಲ್ಲಿ ವಿನೇಶ್​ ಫೋಗಾಟ್​​ ಕನಸು ಭಗ್ನವಾಗಿದೆ. ಅತಿಯಾದ ತೂಕದಿಂದಾಗಿ ಫೈನಲ್​ ಪಂದ್ಯದಿಂದ ಅನರ್ಹರಾಗಿದ್ದಾರೆ. ಆದರೆ ಬೇಸರದ ಸಂಗತಿ ಎಂದರೆ ವಿನೇಶ್​ ಮೇಲೆ ಭಾರತೀಯರು ನಿರೀಕ್ಷೆ ಇಟ್ಟುಕೊಂಡಿದ್ದರು. ಇಂದು ಸಂಜೆ ನಡೆಯಲಿರುವ ಫೈನಲ್​ನಲ್ಲಿ ಚಿನ್ನದ ಪದಕವನ್ನು ಪಡೆದೇ ಪಡೆಯುತ್ತಾರೆ ಎಂಬ ಆಸೆಯನ್ನು ಭಾರತೀಯರು ಇಟ್ಟುಕೊಂಡಿದ್ದರು. ಆದರೆ ದೇಹದಲ್ಲಾದ ಬದಲಾವಣೆ ವಿನೇಶ್​​ ಕನಸನ್ನು ನುಚ್ಚು ನೂರು ಮಾಡಿದೆ.
ಅದೃಷ್ಟ ಕೈಕೊಟ್ಟ ಆಗಸ್ಟ್​ ತಿಂಗಳು
ಕಳೆದ ವರ್ಷ ಆಗಸ್ಟ್​ 17ರಂದು ವಿನೇಶ್​​ ಫೋಗಾಟ್​​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ACL ಸರ್ಜರಿ ಮಾಡಿಸಿಕೊಂಡಿದ್ದರು. ಪ್ಯಾರಿಸ್​ ಒಲಿಂಪಿಕ್ಸ್​ಗಾಗಿ ಸರ್ಜರಿ ಮಾಡಿಕೊಂಡು ರೆಡಿಯಾದರು. ಸತತ ಪ್ರಯತ್ನ ಮತ್ತು ಅಭ್ಯಾಸದಿಂದ ಈ ಬಾರಿಯ ಒಲಿಂಪಿಕ್ಸ್​ಗೆ ಅರ್ಹತೆ ಪಡೆದರು. ಆದರೀಗ ಅದೇ ತಿಂಗಳು ವಿನೇರ್ಶ್ಗೆ ಅದೃಷ್ಟ ಕೈಕೊಟ್ಟಿದೆ. ಇದು ಅವರ ಕುಟುಂಬದವರಿಗೆ ಮತ್ತು ಭಾರತೀಯರಿಗೆ ಭಾರೀ ನೋವು ತರಿಸಿದೆ.
ಏನಿದು ACL ಸರ್ಜರಿ?
ಆಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್ (ACL). ಇದು ಮೊಣಕಾಲಿನ ಅಸ್ಥಿರಜ್ಜುಗಳ ಶಸ್ತ್ರಚಿಕಿತ್ಸೆಯಾಗಿದೆ. ಮೂಳೆಗಳು ಮತ್ತು ಕಾರ್ಟಿಲೆಜ್ ಅನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಅಂಗಾಂಶದ ಮೇಲೆ ಶಸ್ತ್ರಚಿಕಿತ್ಸೆ ನಡೆಯುತ್ತದೆ. ACL ತೊಡೆಯ ಮೂಳೆಯ ಕೆಳಭಾಗವು ಮೇಲ್ಭಾಗವನ್ನು ಸಂಪರ್ಕಿಸುತ್ತದೆ. ಇದು ಮೊಣಕಾಲು ಸ್ಥಿರವಾಗಿರಲು ಸಹಾಯ ಮಾಡುತ್ತದೆ.
ಹುಟ್ಟುಹಬ್ಬದ ಸನಿಹದಲ್ಲಿ ವಿನೇಶ್​ ಫೋಗಾಟ್​
ಇದೇ ತಿಂಗಳು ಆಗಸ್ಟ್​ 25 ರಂದು ವಿನೇಶ್​ ಫೋಗಾಟ್​​ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಿದ್ದಾರೆ. ಆ ಮೂಲಕ 30ನೇ ಹುಟ್ಟುಹಬ್ಬದ ಸನಿಹದಲ್ಲಿದ್ದಾರೆ. ಆದರೆ ಫೈನಲ್​ಗೆ ತಲುಪಿದ ಪೋಗಾಟ್​ಗೆ 100ಗ್ರಾ ಹೆಚ್ಚುವರಿ ತೂಕ ದೊಡ್ಡ ಆಘಾತ ನೀಡಿದೆ. ಸದ್ಯ ಅವರು ಮೂರ್ಛೆ ಬಿದ್ದು ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us