/newsfirstlive-kannada/media/post_attachments/wp-content/uploads/2024/08/Vinesh-Phogat-5-3.jpg)
ವಿನೇಶ್​ ಫೋಗಾಟ್​​ನ ಕನಸಿನ ಕಟ್ಟೆ ಒಡೆದಿದೆ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಫೈನಲ್ ಪ್ರವೇಶಿಸಿದ್ದ ದಂಗಲ್​ ಹುಡುಗಿ ಅತಿಯಾದ ತೂಕದಿಂದ ಅನರ್ಹರಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿನೇಶ್​ ಕೈಕೊಟ್ಟ ಅದೃಷ್ಟದ ಕುರಿತು ಅನೇಕರು ಬೇಸರ ಹೊರಹಾಕುತ್ತಿದ್ದಾರೆ. ಮತ್ತೊಂದೆಡೆ ಮಹಿಳಾ ಕುಸ್ತಿಪಟುವಿನ ಕೋಚ್​ ಯಾರು? ಎಂದು ಹುಡುಕಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/Vinesh-Phogat-6-1.jpg)
ವಿನೇಶ್​ ಫೋಗಾಟ್​​ ನಿನ್ನೆ 3 ಪಂದ್ಯದಲ್ಲಿ ವಿಜಯಶಾಲಿಯಾಗಿ ಫೈನಲ್ ತಲುಪಿದರು. ಇಂದು ರಾತ್ರಿ ಫೈನಲ್​ ಪಂದ್ಯ ಆಯೋಜನೆಗೊಂಡಿತ್ತು. ಆದರೆ ರಾತ್ರಿ ಪೂರ್ತಿ ಅತಿಯಾದ ವರ್ಕೌಟ್​ನಿಂದ ಫೋಗಾಟ್​​ಗೆ ಡಿಹೈಡ್ರೇಷನ್​ ಆಗಿದೆ. ಪರಿಣಾಮ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/08/Vinesh-Phogat-4-2.jpg)
ಮಾಹಿತಿ ಪ್ರಕಾರ, ವಿನೇಶ್​​​ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಭಾಗವಹಿಸಿದ್ದರು. ಆದರೆ 150 ಗ್ರಾಂ ಹೆಚ್ಚುವರಿ ತೂಕದಿಂದ ಫೋಗಾಟ್​ಗೆ ಹಿನ್ನಡೆಯಾಗಿದೆ. ಪರಿಣಾಮ ಅತಿಯಾದ ವರ್ಕೌಟ್​ ಅವರಿಗೆ ಮುಳುವಾಗಿದೆ. ಇದರ ನಡುವೆ ಅನಾರೋಗ್ಯ ಕಾಡಿದೆ. ಆದರೀಗ ವಿನೇಶ್​ ಪೋಗಾಟ್​ಗಾಗಿ ಆದ ಸಂಕಷ್ಟದ ಕುರಿತು ಅನೇಕರು ಬೇಸರ ಹೊರಹಾಕಿದರೆ, ಮತ್ತೆ ಹಲವರು ಆಕೆಗೆ ತರಬೇತಿ ನೀಡಿದ ಕೋಚ್​ ಯಾರು ಎಂದು ಹುಡುಕಾಡುತ್ತಿದ್ದಾರೆ. ಆತನನ್ನು ದೂಷಿಸುತ್ತಿದ್ದಾರೆ.
ಇದನ್ನೂ ಓದಿ: ಕಳೆದ ವರ್ಷ ಇದೇ ತಿಂಗಳು ಶಸ್ತ್ರಚಿಕಿತ್ಸೆ.. ವಿನೇಶ್​ ಫೋಗಾಟ್ ಅಂದು ಏನಾಗಿತ್ತು ಅಂದ್ರೆ..
[caption id="attachment_79353" align="alignnone" width="800"]
ವೋಲರ್​ ಅಕೋಸ್- ಹೆಂಡತಿ ಮರಿಯಾನಾ ಸಸ್ಟಿನ್[/caption]
ಕೋಚ್​ ವೋಲರ್​ ಅಕೋಸ್​ ಹಿನ್ನಲೆ ಏನು?​
ವಿನೇಶ್​ಗೆ ತರಬೇತಿ ನೀಡಿದ ಕೋಚ್​ ಹೆಸರು ವೋಲರ್​ ಅಕೋಸ್​. ಇವರು ಹಂಗೇರಿ ಮೂಲದವರು. 2018ರಿಂದ ವಿನೇಶ್​​ ಅವರ ಜೊತೆಗೆ ತರಬೇತಿ ಪಡೆಯುತ್ತಾ ಬಂದಿದ್ದಾರೆ. ಹಂಗೇರಿಯ ಶಿಬಿರದಲ್ಲಿ ಭಾಗವಹಿಸುವ ಮೂಲಕ ಒಲಿಂಪಿಕ್ಸ್​ಗೆ ತರಬೇತಿ ಪಡೆದಿದ್ದಾರೆ.
ವೋಲರ್​ ಅಕೋಸ್ ಹೆಂಡತಿ ಮರಿಯಾನಾ ಸಸ್ಟಿನ್​ ಕೂಡ ಕುಸ್ತಿಪಟುವಾಗಿದ್ದು, 2011ರದಲ್ಲಿ ಆಕೆಯನ್ನು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆಲ್ಲುವಂತೆ ಟ್ರೈನ್​ ಮಾಡಿದ್ದರು. ಭಾರತದ ಮಾಜಿ ಕುಸ್ತಿ ಫೆಡರೇಷಬ್​​ ಆಫ್​ ಇಂಡಿಯಾದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​​ ಸಿಂಗ್​ ಅವರ ಅನಿರೀಕ್ಷಿತ ವೈಫಲ್ಯದಿಂದ ಅಕೋಸ್​ರವರು ವಿನೇಶ್​ಗೆ ತರಬೇತುದಾರರಾದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us