newsfirstkannada.com

ಫ್ರಾನ್ಸ್​ನಲ್ಲಿ ತೀವ್ರಗೊಂಡ ಗಲಭೆ; ಎಲ್ಲೆಂದರಲ್ಲಿ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಜನರಿಂದ ಭಾರೀ ಲೂಟಿ

Share :

04-07-2023

    ಫ್ರಾನ್ಸ್​ನಲ್ಲಿ ಜೋರಾಯ್ತು ಗಲಭೆ.. ಮಹಿಳೆಯರಿಂದ ಲೂಟಿ

    ಮೇಯರ್‌ ನಿವಾಸಕ್ಕೆ ಕಾರು ನುಗ್ಗಿಸಿ ಬೆಂಕಿ ಹಚ್ಚಿದ ಉದ್ರಿಕ್ತರು

    ಸ್ವಿಜರ್ ​ಲ್ಯಾಂಡ್​ಗೂ ದಿಢೀರ್​​ ಹಬ್ಬಿದ ವಲಸಿಗರ ಹಿಂಸಾಚಾರ

ಪ್ಯಾರಿಸ್‌: ಗಲಭೆ, ಪ್ರತಿಭಟನೆ, ಲೂಟಿ. ಕಳೆದ 5 ದಿನಗಳಿಂದ ಫ್ರಾನ್ಸ್​​ನಲ್ಲಿ ಕೇವಲ ಬೆಂಕಿಯ ಕೆನ್ನಾಲಿಗೆಗಳೇ ಹೊತ್ತಿ ಉರಿಯುತ್ತಿವೆ. ಹಲವು ಹಿಂಸಾತ್ಮಕ ಘಟನೆಗಳು ಫ್ರಾನ್ಸ್‌ನಾದ್ಯಂತ ಸಂಭವಿಸುತ್ತಿವೆ. ಬಾಲಕನನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಕ್ಕೆ ಶುರುವಾದ ಗಲಭೆ ಐದು ಕಳೆದ್ರೂ ಶಮನವಾಗಿಲ್ಲ. ಜನರು ಬೀದಿಗಿಳಿದು ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುವ ದೃಶ್ಯಗಳು ಜನರನ್ನ ಬೆಚ್ಚಿ ಬೀಳಿಸುತ್ತಿವೆ.

ಇನ್ನು ಉದ್ರಿಕ್ತ ಪ್ರತಿಭಟನಕಾರರು ಮತ್ತೊಂದು ಲೆವೆಲ್​ಗೆ ತಮ್ಮ ಆವೇಷವನ್ನು ಕೊಂಡೊಯ್ದಿದ್ದಾರೆ. ಪ್ಯಾರಿಸ್‌ನ ಮೇಯರ್ ಮನೆಗೆ ಕಾರು ನುಗ್ಗಿಸಿ ಬೆಂಕಿ ಹಚ್ಚಿ ಅಕ್ಷರಶಃ ಅಟ್ಟಹಾಸ ಮೆರೆದಿದ್ದಾರೆ. ದಕ್ಷಿಣ ಉಪನಗರದ ಮೇಯರ್‌ ವಿನ್‌ಸೆಂಟ್‌ ಜೀನ್‌ಬ್ರುನ್‌ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಬೆಂಕಿ ಕಾಣಿಸುತ್ತಿದ್ದಂತೆಯೇ ಮನೆಯೊಳಗೆ ಮಲಗಿದ್ದ ಮೇಯರ್‌ ಪತ್ನಿ ಮತ್ತು ಇಬ್ಬರು ಮಕ್ಕಳು, ಮನೆಯ ಹಿಂಬಾಗಿಲಿನ ಮೂಲಕ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೇಯರ್ ಟೌನ್‌ಹಾಲ್‌ನಲ್ಲಿ ಇದ್ದುದರಿಂದ ಬಚಾವಾಗಿದ್ದಾರೆ. ಸದ್ಯ ಕೊಲೆ ಯತ್ನದ ಕೇಸ್​ ದಾಖಲಿಸಿ ತನಿಖೆ ನಡೆಸಲಾಗ್ತಿದೆ.

ಶಾಪ್, ಮಾಲ್​ಗಳನ್ನು ಲೂಟಿ ಹೊಡೆಯುತ್ತಿರುವ ಮಹಿಳೆಯರು​

ಫ್ರಾನ್ಸ್​ನಾದ್ಯಂತ ಗಲಭೆಕೋರರು ಮತ್ತು ಪೊಲೀಸರ ನಡುವಿನ ಸಂಘರ್ಷ ಮುಂದುವರಿದಿದೆ. ಫ್ರಾನ್ಸ್‌ನಾದ್ಯಂತ ಭುಗಿಲೆದ್ದಿರುವ ಗಲಭೆ ಯಾವ ಮಟ್ಟಿಗೆ ಬೃಹದಾಕಾರವಾಗಿ ಹೊತ್ತಿ ಉರಿಯುತ್ತಿದೆ ಅಂದ್ರೆ ಅಲ್ಲಿನ ಬೀದಿ ಬೀದಿಗಳಿಗೆ ನುಗ್ಗಿ ಜನರು ಪ್ರತಿಭಟನೆ ಮಾಡ್ತಿದ್ದಾರೆ. ಸಿಕ್ಕ ಸಿಕ್ಕ ವಾಹನಗಳಿಗೆ, ಶಾಲೆ, ಪೊಲೀಸ್‌ ಠಾಣೆ, ಟೌನ್‌ಹಾಲ್‌ಗೆ ಕೊಳ್ಳಿ ಇಟ್ಟು ಭಸ್ಮಾಸುರರಂತೆ ವರ್ತಿಸುತ್ತಿದ್ದಾರೆ. ಇದರ ಜೊತೆಗೆ ವಿವಿಧ ಮಾಲ್​, ಮಾರ್ಕೆಟ್​, ಶಾಪ್​ಗಳಿಗೆ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ನುಗ್ಗಿ ಲೂಟಿ ಹೊಡೆಯುತ್ತಿದ್ದಾರೆ.

ಸಂಘರ್ಷ ನಿಲ್ಲಿಸಿ ಅಂತ ಗಲಭೆಕೋರರಿಗೆ ಯುವಕನ ಅಜ್ಜಿ ಮನವಿ

ಇನ್ನು ಇದುವರೆಗೂ ಪ್ರತಿಭಟನಾಕಾರರ ಆಕ್ರೋಶಕ್ಕೆ 2,000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಸುಮಾರು 45 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಈವರೆಗೆ ಸುಮಾರು 3000ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಬಂಧಿಸಲಾಗಿದೆ. ಗಲಭೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಬಾಲಕನನ್ನು ಹತ್ಯೆ ಮಾಡಿದ ಇಬ್ಬರು ಪೊಲೀಸರನ್ನು ಬಂಧಿಸಿ ಸರ್ಕಾರ ತನಿಖೆಗೆ ಆದೇಶಿಸಿದೆ. ಇದರ ಜೊತೆಗೆ ಸೇನಾ ಟ್ಯಾಂಕರ್‌ಗಳ ಪಥಸಂಚಲನದ ಮೂಲಕ ಗಲಭೆಕೋರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಸಂಘರ್ಷ ನಿಲ್ಲಿಸಿ ಅಂತ ಗಲಭೆಕೋರರಿಗೆ ಸಂತ್ರಸ್ಥ ಯುವಕನ ಅಜ್ಜಿ ಕೂಡ ಮನವಿ ಮಾಡಿದ್ದಾರೆ. ಅಲ್ಲದೇ ಗಲಭೆ ನಿಯಂತ್ರಣಕ್ಕೆ ಎಲ್ಲ ಕ್ರಮಗಳು ನಮ್ಮ ಮುಂದಿವೆ ಅಂತ ಫ್ರಾನ್ಸ್ ಅಧ್ಯಕ್ಷ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಫ್ರಾನ್ಸ್​ ಪರ ಬೀದಿಗಿಳಿದ ಫುಟ್​ಬಾಲ್​ ಅಭಿಮಾನಿಗಳು

ಅತ್ತ ಗಲಭೆಕೋರರು ಬೀದಿಗಿಳಿದು ಗಲಭೆ ಮಾಡಿ ಬೆಂಕಿ ಹಚ್ಚುತ್ತಿದ್ರೆ ಇತ್ತ ಧನಾತ್ಮಕ ಬೆಳವಣಿಗೆಯೊಂದು ನಡೆದಿದೆ. ದೇಶಭಕ್ತ ಫುಟ್​ಬಾಲ್​ ಅಭಿಮಾನಿಗಳು ತಂಡೋಪತಂಡವಾಗಿ ಬೀದಿಗಿಳಿದು ಫ್ರಾನ್ಸ್​ ದೇಶದ ಪರ ಘೋಷಣೆ ಕೂಗಿದ್ದಾರೆ.

ಸ್ವಿಜರ್​ಲ್ಯಾಂಡ್​ಗೂ ಹಬ್ಬಿದ ವಲಸಿಗರ ಹಿಂಸಾಚಾರ

ಇನ್ನು ಫ್ರಾನ್ಸ್​ನ ಹಿಂಸಾಚಾರ ಸ್ವಿಜರ್​ಲ್ಯಾಂಡ್​ಗೂ ಹಬ್ಬಿದೆ, ಬಾಲಕನ ಹತ್ಯೆ ಖಂಡಿಸಿ ವಲಸಿಗರು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಸ್ವಿಜರ್​ಲ್ಯಾಂಡ್ ಸರ್ಕಾರ ಮಿಲಿಟರಿ ಯುದ್ಧ ಟ್ಯಾಂಕ್​ಗಳ ಮೂಲಕ ಕಾರ್ಯಚರಣೆ ನಡೆಸಿದೆ. ಸ್ವಿಟ್ಜರ್ಲ್ಯಾಂಡ್ ಬಳಿಕ ಯೂರೋಪ್ ದೇಶಗಳಿಗೂ ಹಿಂಸಾಚಾರ ಹಬ್ಬುವ ಭೀತಿ ಶುರುವಾಗಿದೆ. ಸದ್ಯ ಯಾವುದೇ ವಲಸಿಗರನ್ನು ಹಾಗೂ ನಿರಾಶ್ರಿತರನ್ನು ದೇಶದೊಳಗೆ ಬಿಟ್ಟುಕೊಳ್ಳಲ್ಲ ಅನ್ನೋ ಕಠಿಣ ನಿರ್ಧಾರವನ್ನು ಪೋಲೆಂಡ್ ಸರ್ಕಾರ ತಳೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರಾನ್ಸ್​ನಲ್ಲಿ ತೀವ್ರಗೊಂಡ ಗಲಭೆ; ಎಲ್ಲೆಂದರಲ್ಲಿ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಜನರಿಂದ ಭಾರೀ ಲೂಟಿ

https://newsfirstlive.com/wp-content/uploads/2023/07/Voilence.jpg

Load More