newsfirstkannada.com

×

ಮುಂಬೈ ಗಣಪನ ದರ್ಶನದಲ್ಲೂ ತಾರತಮ್ಯ.. ಇದ್ದವರಿಗೊಂದು ಇಲ್ಲದವರಿಗೊಂದು ಪದ್ಧತಿ; ಭಕ್ತರಿಗೆ ಬೇಸರ!

Share :

Published September 13, 2024 at 5:18pm

Update September 13, 2024 at 5:26pm

    ಮುಂಬೈನ ಲಾಲ್​ಬೌಗ್ಚ್​ ರಾಜ ಗಣೇಶನ ದರ್ಶನದಲ್ಲಿಯೂ ಕಂಡ ತಾರತಮ್ಯ!

    ಉಳ್ಳವರನ್ನು ಒಂದು ರೀತಿ, ಸಾಮಾನ್ಯರನ್ನು ಒಂದು ರೀತಿ ನಡೆಸಿಕೊಡ ಮಂಡಳಿ

    ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ಭೇದಭಾವದ ವಿಡಿಯೋ, ಜನರ ಬೇಸರ

ಮುಂಬೈ:  ಹಬ್ಬ, ಈ ದೇಶವನ್ನು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಒಂದೇ ಕಡೆ ಸೇರಿಸುವ ದಿನ. ಅದರಲ್ಲೂ ಗಣೇಶೋತ್ಸವ ಅಂದ್ರೆ ಅದರ ಕಳೆಯೇ ಬೇರೆ. ಇಡೀ ಸಮಾಜವೇ ಒಂದು ಏಕದಂತನ ಐದು ದಿನದ ಸಡಗರಕ್ಕೆ ಸಜ್ಜಾಗಿ ನಿಂತು ಬಿಡುತ್ತದೆ. ಬೀದಿಯಲ್ಲಿ ಪುಟ್ಟ, ಪುಟ್ಟ ಮಕ್ಕಳು ಕೂಡ ಪುಟ್ಟದೊಂದು ಗಣಪನನ್ನು ಪ್ರತಿಷ್ಠಾಪನೆ ಮಾಡಿ. ಕೈಗೆ ಸಿಕ್ಕ ತಟ್ಟೆ ಸೌಟು ಹಿಡಿದು ಬಡೆಯುತ್ತಾ ಗಣಪತಿ ಬಪ್ಪಾ ಮೋರಯಾ ಎನ್ನುತ್ತಾ ಗಣಪನನ್ನು ವಿಸರ್ಜನೆ ಮಾಡಿದ ಅನೇಕ ಸಾಕ್ಷಿಗಳು ನಮ್ಮ ಕಣ್ಣ ಮುಂದೆಯೇ ಇವೆ.

ಇದನ್ನೂ ಓದಿ: ಮುಂಬೈನ GSB ಮಂಡಳ ಗಣೇಶನಿಗೆ ಬರೋಬ್ಬರಿ ₹400 ಕೋಟಿ ಇನ್ಸೂರೆನ್ಸ್‌.. ಎಲ್ಲಾ ರೆಕಾರ್ಡ್ ಬ್ರೇಕ್! 

ದೇವರಿಗೆ ಯಾವ ಭೇದವೂ ಇಲ್ಲ. ನಾದ ಪ್ರಿಯನೂ ಅಲ್ಲ, ವೇದ ಪ್ರಿಯನೂ ಅಲ್ಲ ಭಕ್ತಿ ಪ್ರಿಯ ನೋಡ ನಮ್ಮ ಕೂಡಲಸಂಗಮ ದೇವ ಅನ್ನೋ ವಿಶ್ವಗುರು ಬಸವಣ್ಣನವರ ಉಕ್ತಿಯಂತೆ ದೇವರು ಎಂದಿಗೂ ಭಕ್ತಿಗೆ ಒಲಿಯುವವನು. ಶರಣು ಎಂದು ಬಾಗಿದ ಭಕ್ತರ ತಲೆ ಕಾಯುವವನು. ಆ ದೇವರಿಗೆ ಭೇದವಿಲ್ಲ. ಆದ್ರೆ ಈ ಮನುಷ್ಯರು ದೇವರ ಹೆಸರಲ್ಲಿ ಮನುಜು ಮನುಜರ ನಡುವೆಯೇ ತಾರತಮ್ಯ ಮಾಡುತ್ತಾರೆ ಅದಕ್ಕೆ ದೊಡ್ಡ ನಿದರ್ಶನವಾಗಿ ನಿಂತಿದೆ ಮುಂಬೈನ ಬಿಲಿಯೇನರ್​ ಲಾಲ್​ಬೌಗ್ಚಾ ರಾಜ ಗಣಪ.

ಇದನ್ನೂ ಓದಿ: ನಾರಾಯಣ ಮೂರ್ತಿ ಮೇಲೆ ಮತ್ತೆ ಕೋಪಿಸಿಕೊಂಡ ಜನ.. ಈ ಸಲ ಕೊಟ್ಟ ಸಲಹೆ ಏನು..?

ಮುಂಬೈ ಅತ್ಯಂತ ಶ್ರೀಮಂತ ಗಣೇಶ ಅಂದ್ರೆ ಅದು ಲಾಲ್​ಬೌಗ್ಚಾ ರಾಜ ಗಣೇಶ. ಮುಂಬೈನಲ್ಲಿ ಸಿದ್ಧಿ ವಿನಾಯಕನ ಮಂದಿರಕ್ಕೆ ಹೇಗೆ ಭಕ್ತರ ದಂಡು ಹರಿದು ಬರುತ್ತದೆಯೋ ಹಾಗೆಯೇ ಈ ಸಾರ್ವಜನಿಕ ಗಣಪನ ದರ್ಶನಕ್ಕೆ ಲಕ್ಷ ಲಕ್ಷ ಭಕ್ತಗಣ ಹರಿದು ಬರುತ್ತದೆ. ಸಾರ್ವಜನಿಕರ ಹಣದಿಂದ, ಸಾರ್ವಜನಿಕರಿಗಾಗಿಯೇ ಪ್ರಿತಷ್ಠಾಪನೆಯಾಗಿರುವ ಗಣೇಶನ ಈ ಸನ್ನಿಧಿಯಲ್ಲಿ ಆಡಳಿತ ಮಂಡಳಿಯೇ ತಾರತಮ್ಯ ಮಾಡಿದ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ. ವಿಐಪಿ ಸಂಸ್ಕೃತಿ ಈಗ ಸಾರ್ವಜನಿಕ ಗಣೇಶನ ಪೆಂಡಾಲ್​ಗೂ ಕೂಡ ಅಂಟಿಕೊಂಡಿದೆ.

ಇದನ್ನೂ ಓದಿ: ಹೊಸ ಬಾಂಬ್ ಸಿಡಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ; ರಾಜೀನಾಮೆ ಕೊಡಲು ಸಿದ್ಧ ಎಂದಿದ್ದೇಕೆ?

ಲಾಲ್​​ಬೌಗ್ಚಾ ರಾಜ ಗಣೇಶನ ವೀಕ್ಷಣೆಗೆ ಪ್ರತಿ ವರ್ಷ 15 ಲಕ್ಷ ಜನರು ಬರುತ್ತಾರೆ. ಬಡವರು ಶ್ರೀಮಂತರು ಎನ್ನದೇ ಸಾಲಿನಲ್ಲಿ ನಿಂತು ದರ್ಶನ ಪಡೆದು ಹೋಗುತ್ತಾರೆ. ಆದ್ರೆ ಈ ಬಾರಿ ಆಡಳಿತ ಮಂಡಳಿ ವಿಐಪಿ ಸಂಸ್ಕೃತಿಯನ್ನು ಪರಿಚಯಿಸಿ ಸಾಮಾನ್ಯ ಜನರಿಗೆ ಹೆಚ್ಚು ಕಡಿಮೆ ಅವಮಾನ ಮಾಡಲಾಗಿದೆ. ವಿಐಪಿ ಸಾಲಿನಲ್ಲಿ ಬರುವ ಉಳ್ಳವರು ಬಿಂದಾಸ್​ ಆಗಿ ಫೋಟೋ ಹಾಗೂ ಸೆಲ್ಫಿಗಳಿಗೆ ಪೋಸ್ ಕೊಟ್ಟುಕೊಂಡು ನಿಧಾನವಾಗಿ ಆರಾಮಾಗಿ ಗಣೇಶನ ದರ್ಶನ ಮಾಡಿಕೊಂಡು ಹೋಗುತ್ತಿದ್ದರೆ. ಮತ್ತೊಂದು ಕಡೆ ಸಾಮಾನ್ಯ ಸಾಲಿನಲ್ಲಿ ಗಣೇಶನ ದರ್ಶನ ಮಾಡುವ ಭಕ್ತರನ್ನು ಬೇಗ ಬೇಗ ತೆರಳುವಂತೆ ಅವರನ್ನು ಕತ್ತು ಹಿಡಿದು ನೂಕುವ ವಿಡಿಯೋ ವೈರಲ್ ಆಗಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಗಣಪನ ದರ್ಶನದಲ್ಲೂ ತಾರತಮ್ಯ.. ಇದ್ದವರಿಗೊಂದು ಇಲ್ಲದವರಿಗೊಂದು ಪದ್ಧತಿ; ಭಕ್ತರಿಗೆ ಬೇಸರ!

https://newsfirstlive.com/wp-content/uploads/2024/09/Lalbaugcha-Raja-Ganesh.jpg

Load More