newsfirstkannada.com

Video: ಹೈವೇ ಸೈನ್​ಬೋರ್ಡ್​ ಮೇಲೆ ಕುಡುಕನ ಹುಚ್ಚಾಟ.. ಪ್ರಯಾಣಿಕರು ಗಾಬರಿ..!

Share :

21-06-2023

  ಅಂಗಿ ಬಿಚ್ಚಿ ಭಯವಿಲ್ಲದೇ push-ups ಮಾಡಿದ ಕುಡುಕ

  ವಿಶ್ವ ಯೋಗ ದಿನದಂದು ಈ ವಿಡಿಯೋ ಭಾರೀ ವೈರಲ್

  ಈ ವಿಡಿಯೋ ನೋಡ್ತಿದ್ದಂತೆ ನಿಮ್ಗೆ ನಗು ಬರುತ್ತೆ, ಆದರೆ..

ಇವತ್ತು ಅಂತಾರಾಷ್ಟ್ರೀಯ ಯೋಗ ದಿನ. ಪ್ರಪಂಚದಾದ್ಯಂತ ಯೋಗ ಪ್ರಿಯರು ಯೋಗದಿನಾಚರಣೆ ಮಾಡಿ, ಯೋಗದಿಂದ ಆಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ ಭಾರತದಲ್ಲಿ ಪ್ರತಿವರ್ಷದಂತೆ ಈ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.

ಆದರೆ ಇಲ್ಲೊಬ್ಬ ಕುಡುಕ, ನಡು ರಸ್ತೆಯಲ್ಲಿ ಹೋಗ್ತಿದ್ದ ವಾಹನ ಸವಾರರಿಗೆ ದಿಗಿಲು ಹುಟ್ಟಿಸಿದ್ದಾನೆ. ಹೈವೇ ಟವರಿಂಗ್ ಸೈನ್​ಬೋರ್ಡ್​ (signboard) ಮೇಲೇರಿದ ಈತ, push-ups ಹೊಡೆದಿದ್ದಾನೆ. ಯಾವುದೇ ಪ್ರಾಣಭಯವಿಲ್ಲದೇ, ಸೈನ್​ಬೋರ್ಡ್​ ಹತ್ತಿ, ನಿರ್ಭೀತಿಯಿಂದ ಪುಶ್​-ಅಪ್ಸ್ ಮಾಡಿದ್ದಾನೆ.

ಪತ್ನಗಢ್ ಟಾಪ್ ಮಾಡೆಲ್ಸ್​ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಅಪ್​ಲೋಡ್​ ಆಗಿದೆ. ಈ ಇನ್​ಸ್ಟಾಗ್ರಾಮ್ ವಿಡಿಯೋ ಅಪ್​ಲೋಡ್ ಮಾಡಿರೋದ್ರಿಂದ ಇದು ಒಡಿಶಾ ಜಿಲ್ಲೆಯ ಬೊಲಂಗಿರ್​ ನಗರದಲ್ಲಿ ನಡೆದಿರುವ ಪ್ರಸಂಗ ಎಂದು ತಿಳಿದುಬಂದಿದೆ. ಏಪ್ರಿಲ್ 30 ರಂದು ವಿಡಿಯೋ ಅಪ್​ಲೋಡ್ ಆಗಿದ್ದು, 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಪಡೆದುಕೊಂಡಿದೆ. ಇವತ್ತು ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಕಷ್ಟು ಮೈಲೇಜ್ ಪಡೆದುಕೊಳ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಹೈವೇ ಸೈನ್​ಬೋರ್ಡ್​ ಮೇಲೆ ಕುಡುಕನ ಹುಚ್ಚಾಟ.. ಪ್ರಯಾಣಿಕರು ಗಾಬರಿ..!

https://newsfirstlive.com/wp-content/uploads/2023/06/DRUNK.jpg

Load More