newsfirstkannada.com

ಅಭಿಮಾನಿಗಳ ಕಣ್ಣಿಗೆ ನಿರಾಸೆ ಮಾಡಲಿಲ್ಲ.. ಆ 205 ನಿಮಿಷ ಬಲು ರೋಚಕ, ರೋಮಾಂಚನ..!

Share :

06-11-2023

    ಹುಟ್ಟುಹಬ್ಬದ ದಿನ ವಿರಾಟ ವೀರಾವೇಶ

    ಕ್ರಿಕೆಟ್​ ಕಾಶಿಯಲ್ಲಿ ಕೊಹ್ಲಿಯ ಕ್ಲಾಸ್​​ ಇನ್ನಿಂಗ್ಸ್​

    ಏಕದಿನ ಮಾದರಿಗೆ ವಿರಾಟ್ ಕೊಹ್ಲಿಯೇ ಕಿಂಗ್​

ಟೀಮ್​ ಇಂಡಿಯಾ ನಿನ್ನೆಯ ಪಂದ್ಯದಲ್ಲಿ ಗೆದ್ದಿದ್ದಕ್ಕಿಂತ ವಿರಾಟ ಕೊಹ್ಲಿಯ ವೀರಾವೇಷವೇ ಸೆನ್ಸೇಷನ್​ ಸೃಷ್ಟಿಸಿದೆ. ಎಲ್ಲರೂ ಅಸಾಧ್ಯ ಎಂದಿದ್ದ ದಾಖಲೆಯನ್ನು 35ನೇ ವಸಂತಕ್ಕೆ ಕಾಲಿಟ್ಟ ದಿನವೇ ಕಿಂಗ್​ ಕೊಹ್ಲಿ, ಸರಿಗಟ್ಟಿದ ರೀತಿ ಹಾಗಿತ್ತು. ಕ್ರಿಕೆಟ್​ ಕಾಶಿಯಲ್ಲಿ ಕಿಂಗ್​ ಕೊಹ್ಲಿ ಕಟ್ಟಿದ್ದು ಅಂತಾ ಕ್ಲಾಸಿಕ್​ ಇನ್ನಿಂಗ್ಸ್​.

ನಿನ್ನೆಯ ಇಂಡೋ-ಆಫ್ರಿಕಾ ಫೈಟ್​ನಲ್ಲಿ ಯಾರು ಸೋಲ್ತಾರೆ. ಯಾರು ಗೆಲ್ತಾರೆ ಅನ್ನೋದು ಮ್ಯಾಟರ್​ ಆಗೇ ಇರಲಿಲ್ಲ. ವಿಶ್ವದ ಉದ್ದಗಲ ಇರೋ ಅಭಿಮಾನಿಗಳಲ್ಲಿ ಇದ್ದಿದ್ದು ಒಂದೇ ಕನಸು. ಆ ಕನಸು ನನಸಾಗಲಿ ಎಂದು ಮಾಡಿದ ಪ್ರಾರ್ಥನೆ ಎಷ್ಟೋ. ಕೊನೆಗೂ ಕಾದು ಕನವರಿಸಿದ ಅಭಿಮಾನಿಗಳಿಗೆ ನಿರಾಸೆ ಆಗಲಿಲ್ಲ.

40 ರನ್​ಗಳಿಸಿ ರೋಹಿತ್​ ಶರ್ಮಾ ಪೆವಿಲಿಯನ್​​ನತ್ತ ಹೆಚ್ಚೆ ಹಾಕ್ತಿದ್ರೆ, ಅಭಿಮಾನಿಗಳ ಕಣ್ಣಲ್ಲಿ ನಿರಾಸೆ ಇರಲಿಲ್ಲ. ಯಾಕಂದ್ರೆ ರಣವಿಕ್ರಮನ ಎಂಟ್ರಿಗೆ ವೇದಿಕೆ ಸಿದ್ಧವಾಗಿತ್ತು. ಕೊಹ್ಲಿ, ಕೊಹ್ಲಿ ಎಂಬ ಕಹಳೆ ಈಡನ್​ ಗಾರ್ಡನ್​ ಅಂಗಳದಲ್ಲಿ ಮುಗಿಲು ಮುಟ್ಟಿತ್ತು. ಕ್ರಿಕೆಟ್​ ಕಾಶಿಯಲ್ಲಿ ಬರ್ತ್​​ಡೇ ಬಾಯ್​ ವಿರಾಟ್​​ ಕೊಹ್ಲಿಯ ಆಟ ನೋಡಲು ಫ್ಯಾನ್ಸ್​ ಕನಸು ಕಂಗಳಲ್ಲಿ ಕಾಯ್ತಿದ್ರು.

ಹುಟ್ಟುಹಬ್ಬದ ದಿನ ವಿರಾಟ ವೀರಾವೇಶ

ರಾಜಗಾಂಭೀರ್ಯದಲ್ಲಿ ಕಣಕ್ಕಿಳಿದ ಕಿಂಗ್​ ಕೊಹ್ಲಿಯ ಎಂಟ್ರಿಯೇ ಹರಿಣಗಳ ಪಡೆಯಲ್ಲಿ ನಡುಕ ಹುಟ್ಟಿಸಿತ್ತು. ಆರಂಭದಲ್ಲೇ ಆರ್ಭಟಿಸಲು ಶುರುವಿಟ್ಟುಕೊಳ್ತಿದ್ದಂತೆ, ಫ್ಯಾನ್ಸ್​ ವಲಯದಲ್ಲಿ ಸೆಂಚುರಿ ಇನ್ನಿಂಗ್ಸ್​ ಪಕ್ಕಾ ಆಗಿತ್ತು. ಅಷ್ಟು ಪರ್ಫೆಕ್ಟ್​ ಆಗಿ ಇನ್ನಿಂಗ್ಸ್​​ ಸ್ಟಾರ್ಟ್​ ಮಾಡಿದ್ರು ವಿರಾಟ್​.

ಕ್ರಿಕೆಟ್​​​ ಕಾಶಿಯಲ್ಲಿ ಶತಕ ಸಂಭ್ರಮ.!

ಅಗ್ರೆಸ್ಸಿವ್​ ಆಗಿ ಇನ್ನಿಂಗ್ಸ್​ ಸ್ಟಾರ್ಟ್​​ ಮಾಡಿದ ಕೊಹ್ಲಿ, ಆ ಬಳಿಕ ಕಟ್ಟಿದ್ದು, ಪಕ್ಕಾ ಕ್ಯಾಲ್ಕ್ಯುಲೇಟೆಡ್​​​ ಇನ್ನಿಂಗ್ಸ್​. ಸಂದರ್ಭಕ್ಕೆ ತಕ್ಕಂತೆ ಇನ್ನಿಂಗ್ಸ್​ ಬ್ಯುಲ್ಡ್​ ಮಾಡಿದ ಕಿಂಗ್​, ಅತ್ಯದ್ಭುತ ಆಟವಾಡಿದ್ರು. ಅಸಂಖ್ಯ ಅಭಿಮಾನಿಗಳ ಪ್ರಾಥನೆ ಕೂಡ ಫಲಿಸಿಯೇ ಬಿಡ್ತು. ಹುಟ್ಟುಹಬ್ಬದ ದಿನ ಸೆಂಚುರಿ ಸಿಡಿಸಿದ ವಿರಾಟ್,​ಸಚಿನ್​ ತೆಂಡುಲ್ಕರ್​ ದಾಖಲೆಯನ್ನು ಸರಿಗಟ್ಟಿದ್ರು.

205 ನಿಮಿಷ.. 121 ಎಸೆತ

ಸೌತ್​ ಆಫ್ರಿಕಾದ ದಮನಕಾರಿ ಬೌಲಿಂಗ್​ ದಾಳಿಯನ್ನ ದಿಟ್ಟವಾಗಿ ಎದುರಿಸಿದ ಕೊಹ್ಲಿ 205 ನಿಮಿಷಗಳ ಕಾಲ ಕ್ರೀಸ್​ ಕಚ್ಚಿ ನಿಂತಿದ್ರು. 121 ಎಸೆತವನ್ನ ಸಮರ್ಥವಾಗಿ ಎದುರಿಸಿ, 10 ಬೌಂಡರಿ ಸಹಿತ 101 ರನ್​ ಚಚ್ಚಿ ಅಜೇಯರಾಗುಳಿದ್ರು.

ಏಕದಿನ ಮಾದರಿಗೆ ಕೊಹ್ಲಿಯೇ ಕಿಂಗ್​

ಗಾಡ್​ ಆಫ್​ ಕ್ರಿಕೆಟ್​, ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​​ ಇಷ್ಟು ದಿನ ಏಕದಿನ ಕ್ರಿಕೆಟ್​ನ ಅನಭಿಷಕ್ತ ದೊರೆಯಾಗಿದ್ರು. 49ನೇ ಸೆಂಚುರಿ ಸಿಡಿಸೋದ್ರೊಂದಿಗೆ ಕಿಂಗ್​, ಇದೀಗ ಆ ಪಟ್ಟಕ್ಕೇರಲು ಸಜ್ಜಾಗಿದ್ದಾರೆ. ಈ ಸಾಧನೆ ಮಾಡಲು ಸಚಿನ್​ ಬರೋಬ್ಬರಿ 452 ಇನ್ನಿಂಗ್ಸ್​ಗಳನ್ನ ತೆಗೆದುಕೊಂಡರೆ ಕಿಂಗ್​ ಕೊಹ್ಲಿ ಜಸ್ಟ್​ 277 ಇನ್ನಿಂಗ್ಸ್​​ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅಸಾಧ್ಯ ಎಂದ ದಾಖಲೆಯನ್ನು ಉಡೀಸ್​ ಮಾಡಿದ್ದಾರೆ.

ವೈಟ್​ಬಾಲ್​ ಫಾರ್ಮೆಟ್​ನಲ್ಲಿ 50 ಅಂತಾರಾಷ್ಟ್ರೀಯ ಸೆಂಚುರಿ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ​ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಜೊತೆಗೆ ಅಭಿಮಾನಿಗಳ ಮನದ ವಿಶ್ವಕಪ್​ ಗೆಲುವಿನ ಕನಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅತ್ಯಮೋಘ ಫಾರ್ಮ್​​ನಲ್ಲಿರೋ ಕೊಹ್ಲಿ ಅಭಿಮಾನಿಗಳ ಅಲ್ಟಿಮೇಟ್​ ಕನಸನ್ನೂ ಈಡೇರಿಸಲಿ ಅನ್ನೋದು ನಮ್ಮ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಭಿಮಾನಿಗಳ ಕಣ್ಣಿಗೆ ನಿರಾಸೆ ಮಾಡಲಿಲ್ಲ.. ಆ 205 ನಿಮಿಷ ಬಲು ರೋಚಕ, ರೋಮಾಂಚನ..!

https://newsfirstlive.com/wp-content/uploads/2023/11/VIRAT-18.jpg

Load More