ದಕ್ಷಿಣ ಆಫ್ರಿಕಾದ ಆ ಲೆಜೆಂಡ್ಸ್ ಕೊಹ್ಲಿ ಮೇಲೆ ಪ್ರಭಾವ ಬೀರಿದ್ದೇಗೆ?
ಮೈದಾನದಲ್ಲಿ ಅಗ್ರೆಸ್ಸಿವ್ ವರ್ತನೆ ಬಹಳಷ್ಟು ಕಮ್ಮಿ ಮಾಡಿದ ಕೊಹ್ಲಿ
ವಿರಾಟ್ ಕೊಹ್ಲಿಯನ್ನು ಬದಲಾಯಿಸಿದ ಆ ಇಬ್ಬರು ಲೆಜೆಂಡ್ಸ್ ಯಾರು?
ವಿರಾಟ್ ಕೊಹ್ಲಿ ವಿಶ್ವವನ್ನೇ ಗೆದ್ದ ಧೀರ. ಚೆಂಡಿನಾಟದ ಸಾಮ್ರಾಟ. ಕಿಂಗ್ ಕೊಹ್ಲಿ ಇಷ್ಟೊಂದು ಪ್ರಖ್ಯಾತಿ ಗಳಿಸಲು ಕಾರಣ ಈ ಇಬ್ಬರು ದಿಗ್ಗಜರು. ಇಂದು ವಿರಾಟ್ ಏನೇ ಆಗಿದ್ರು ಆ ದಿಗ್ಗಜ ದ್ವಯರೇ ಕಾರಣ. ಆ ಇಬ್ಬರಿಂದ ಕೊಹ್ಲಿ ಸಂಪೂರ್ಣ ಬದಲಾದ್ರು. ಅಷ್ಟಕ್ಕೂ ಆ ಇಬ್ಬರು ಲೆಜೆಂಡ್ಗಳು ಯಾರು?.
ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ವರ್ಣನೆ ಬೇಕಿಲ್ಲ. ಯಾಕಂದ್ರೆ ಕೊಹ್ಲಿ ಯಾರು?. ಅವರ ಸಾಧನೆ ಏನು ಅನ್ನೋದನ್ನ ಇಡೀ ಜಗತ್ತೇ ಮಾತನಾಡಿಕೊಳ್ತಿದೆ. ಆದ್ರೆ ಶೂನ್ಯದಿಂದಲೇ ಕ್ರಿಕೆಟ್ ಜರ್ನಿ ಶುರು ಮಾಡಿದ ವಿರಾಟ್ ಹ್ಯೂಜ್ ಸಕ್ಸಸ್ ಕಂಡಿದ್ದೇಗೆ?. ಅವರ ಈ ಯಶಸ್ಸಿಗೆ ಬ್ಯಾಕ್ಬೋನ್ ಯಾರು?. ಅನ್ನೋ ಪ್ರಶ್ನೆ ಎದುರಾಗಲೆಲ್ಲ ಸಿಗುವ ಒಂದೇ ಉತ್ತರ. ಪತ್ನಿ ಅನುಷ್ಕಾ ಶರ್ಮಾ. ಆದ್ರೆ, ಅನುಷ್ಕಾ ಮಾತ್ರವಲ್ಲ, ಇನ್ನಿಬ್ಬರು ದಿಗ್ಗಜರಿದ್ದಾರೆ.
ಕೊಹ್ಲಿ ಬದಲಾವಣೆಗೆ ಪತ್ನಿ ಅನುಷ್ಕಾ ಕಾರಣವಲ್ಲ.!
ಅನುಷ್ಕಾ ಶರ್ಮಾ ಕೈಹಿಡಿದ ಬಳಿಕ ಅವರ ಸಕ್ಸಸ್ ಗ್ರಾಫ್ ಏರುಗತಿಯಲ್ಲಿ ಸಾಗ್ತು. ಆಟಗಾರನಾಗಿ, ನಾಯಕನಾಗಿ ಕೊಹ್ಲಿ ವಿಜೃಂಭಿಸಿದ್ರು. ಅಂಗಳದಲ್ಲಿ ಊರಿದು ಬೀಳ್ತಿದ್ದ ಕೊಹ್ಲಿ ಕ್ರಮೇಣ ಆಧ್ಯಾತ್ಮ ಕಡೆ ಒಲವು ತೋರಿದ್ರು. ಇದೆಲ್ಲ ಇತ್ತೀಚಿನ ಕತೆ. ಆದ್ರೆ, ಆರಂಭದಲ್ಲಿ ಕೊಹ್ಲಿಯ ಲೈಫ್ ಬದಲಿಸಿದ್ದು ಪತ್ನಿ ಅನುಷ್ಕಾ ಶರ್ಮಾ ಅಂತ ನೀವಂದುಕೊಂಡ್ರೆ ಅದು ತಪ್ಪು. ಯಾಕಂದ್ರೆ ಸೆಂಚುರಿ ಸಾಮ್ರಾಟನ ಲೈಫ್ ನಿಜವಾಗಿಯು ಬದಲಿಸಿದ್ದು, ಆ ಇಬ್ಬರು ಲೆಜೆಂಡ್ರಿ ಕ್ರಿಕೆಟರ್ಸ್. ರನ್ ಮಷೀನ್ ಇಂದು ಏನೇ ಆಗಿದ್ರು ಅದಕ್ಕೆ ಆ ದಿಗ್ಗಜ ದ್ವಯರೇ ಕಾರಣ. ಕೊಹ್ಲಿ ಲೈಫ್ನಲ್ಲಿ ಹೆಚ್ಚು ಪ್ರಭಾವ ಬೀರಿದ ಆ ಇಬ್ಬರು ದಿಗ್ಗಜರು ಮತ್ಯಾರು ಅಲ್ಲ, ಅವರೇ ಎಬಿ ಡಿವಿಲಿಯರ್ಸ್ ಹಾಗೂ ಮಾರ್ಕ್ ಬೌಚರ್.
ಎಬಿಡಿ-ಬೌಚರ್ ರಿಂದ ಬದಲಾಯ್ತು ಕೊಹ್ಲಿ ವರ್ತನೆ
ಓರ್ವ ಕ್ರಿಕೆಟರ್ ಎಷ್ಟೇ ಎತ್ತರಕ್ಕೆ ಬೆಳಿಲಿ, ಡಿಸಿಪ್ಲಿನ್ ಅನ್ನೋದು ಇಲ್ಲವಾದ್ರೆ ಎಲ್ಲ ಸಾಧನೆ ನಗಣ್ಯ. ಕಿಂಗ್ ಕೊಹ್ಲಿ ಅದ್ಭುತ ಟ್ಯಾಲೆಂಟೆಡ್ ಕ್ರಿಕೆಟರ್. ಅದನ್ನ ಜಗತ್ತೇ ಒಪ್ಪಿಕೊಂಡಿದೆ. ಇಂತಹ ಕೊಹ್ಲಿ ಅಗ್ರೆಸ್ಸಿವ್ ಆ್ಯಟಿಟ್ಯೂಡ್ನಿಂದ ಹಲವು ಬಾರಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದು ಎಸ್ಪೆಶಲಿ ಆರಂಭಿಕ ದಿನಗಳಲ್ಲಿ. ಬ್ಯಾಟ್ನಿಂದ ರನ್ ಶಿಖರ ನಿರ್ಮಿಸೋ ವಿರಾಟ್, ಆನ್ ಫೀಲ್ಡ್ನಲ್ಲಿ ಎದುರಾಳಿ ಆಟಗಾರರನ್ನ ಕಂಡ್ರೆ ಉರಿದು ಬೀಳ್ತಿದ್ರು. ಅವರ ಅತಿರೇಕದ ವರ್ತನೆಗೆ ಕ್ರಿಕೆಟ್ ಎಕ್ಸ್ಫರ್ಟ್ಸ್ ಹಾಗೂ ಫ್ಯಾನ್ಸ್ ಕೆಂಡಾಮಂಡಲರಾಗಿದ್ದು ಇದೆ.
ಇಂತಹ ನಿಗಿ ನಿಗಿ ಕೆಂಡಕಾರುವ ಕೊಹ್ಲಿಯನ್ನ ಬದಲಾಯಿಸಿದ್ದು ದಕ್ಷಿಣ ಆಫ್ರಿಕಾದ ಎಬಿ ಡಿಲಿಯರ್ಸ್ ಹಾಗೂ ಮಾರ್ಕ್ ಬೌಚರ್. ಹೌದು, ಕೋಪದ ಜ್ವಾಲೆ ತುಂಬಿದ ಕೊಹ್ಲಿ ತಾಳ್ಮೆಯ ಮಂತ್ರ ಪಠಿಸುವಂತೆ ಮಾಡಿದ್ದು ಇದೇ ಆಫ್ರಿಕಾ ಲೆಜೆಂಡ್ಸ್. ಬಿಸಿರಕ್ತದ ಯುವಕನ ಆಕ್ರಮಣಕಾರಿ ಸ್ವಭಾವ ಬದಲಿಸಿ ಆತನಲ್ಲಿ ಪ್ರಬುದ್ಧತೆ ಬೆಳೆಸಿದ್ದು ಈ ಇಬ್ಬರು ಲೆಜೆಂಡ್ಗಳು.
ನಮ್ಮಿಂದ ಕೊಹ್ಲಿ ವರ್ತನೆ ಬದಲಾಗಿದೆ
ವಯಸ್ಸಾದಂತೆ ಎಲ್ಲರೂ ಪ್ರಬುದ್ಧರಾಗುತ್ತಾರೆ. ಅನುಭವಿ ಆಟಗಾರರಿಂದ ಸಾಕಷ್ಟು ಕಲಿತಾರೆ. ವಿರಾಟ್ ಕೊಹ್ಲಿಯು ಹಾಗೇ. ವರ್ತನೆ ಬದಲಿಸಿಕೊಳ್ಳುವ ಸಲುವಾಗಿ ಹಲವು ವಿಚಾರಗಳನ್ನ ಕೋಚ್ ಮತ್ತು ಸಹ ಆಟಗಾರರಿಂದ ಕಲಿತರು. ವಿಶೇಷವಾಗಿ ಆರ್ಸಿಬಿ ತಂಡದ ಕೋಚ್ ಮಾರ್ಕ್ ಬೌಚರ್, ಕೊಹ್ಲಿ ಅವರ ಜೀವನದಲ್ಲಿ ಪ್ರಮುಖ ಪಾತ್ರ ಬೀರಿದ್ದಾರೆ. ಕೊಹ್ಲಿ ಕರಿಯರ್ ಆರಂಭದಲ್ಲಿ ಗೆಳೆಯನಾಗಿ ಅವರ ಮೇಲೆ ನಾನು ಸಾಕಷ್ಟು ಪ್ರಭಾವ ಬೀರಿದ್ದೇನೆ. ಹಾಗಾಗಿನೇ ಅವರು ಸರಿಯಾದ ಮಾರ್ಗ ಕಂಡುಕೊಂಡರು.
ಎಬಿ ಡಿವಿಲಿಯರ್ಸ್, ಆರ್ಸಿಬಿ ಮಾಜಿ ಆಟಗಾರ
ಟೀಮೆಟ್ಸ್ ಮತ್ತು ಕೋಚಸ್ ಮನಸ್ಸು ಮಾಡಿದ್ರೆ, ಎಂತಹ ಆಟಗಾರನನ್ನ ಬೇಕಾದ್ರೂ ಬದಲಿಸಬಹುದು ಅನ್ನೋದಕ್ಕೆ ವಿರಾಟ್ ಕೊಹ್ಲಿನೇ ಬೆಸ್ಟ್ ಎಕ್ಸಾಂಪಲ್. ಇಬ್ಬರ ಪ್ರಭಾವದ ಪರಿಣಾಮ ಸದ್ಯ ಅಂಗಳಲ್ಲಿ ಕೊಹ್ಲಿ ಅಗ್ರೆಸ್ಸಿವ್ ವರ್ತನೆ ಬಹಳಷ್ಟು ಕಮ್ಮಿ ಆಗಿದೆ. ವಿರಾಟ್ರಂತ ದಿ ಗ್ರೇಟೆಸ್ಟ್ ಆಟಗಾರರನಿಗೆ ಅದು ಬೇಕಾಗಿತ್ತು ಕೂಡ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ