ಅಂದು, ಇಂದು, ಮುಂದೂ.. ಈ ಬಾಂಡಿಂಗ್ ಬದಲಾಗಲ್ಲ
ಇವರಿಬ್ಬರ ಸ್ನೇಹಕ್ಕೆ ಇದೆ ವಿಶೇಷ ಫ್ಯಾನ್ ಬೇಸ್ ಇದೆ
ವಿರಾಟ್ ಮತ್ತು ಧೋನಿ ನಡುವಿನ ಸಂಬಂಧ ಎಂಥದ್ದು?
MS ಧೋನಿ ಹಾಗೂ ವಿರಾಟ್ ಕೊಹ್ಲಿ. ಭಾರತೀಯ ಕ್ರಿಕೆಟ್ ಇತಿಹಾಸದ ದಿ ಬೆಸ್ಟ್ ಫ್ರೆಂಡ್ಸ್. ಇವರಿಬ್ಬರು ಜೊತೆಯಾಗಿ ಸರಿ ಸುಮಾರು 5 ವರ್ಷಗಳೇ ಆಯ್ತು. ಈಗಲೂ ಅದೇ ಪ್ರೀತಿ, ಅದೇ ಗೌರವ ಇಬ್ಬರ ನಡುವೆಯಿದೆ. ಕ್ರಿಕೆಟ್ ಹೊರತಾಗಿ ಎಲ್ಲೂ ಕೂಡ ಧೋನಿ, ಕೊಹ್ಲಿ ಜೊತೆಗಿನ ಭಾಂದವ್ಯದ ಬಗ್ಗೆ ಮಾತನಾಡಿರಲಿಲ್ಲ. ಇದೀಗ ಧೋನಿ ಮನದ ಮಾತನ್ನ ಹೊರ ಹಾಕಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟರ್ಗಳ ಆಟಕ್ಕೆ ಮಾತ್ರವಲ್ಲ. ಅವರ ನಡೆ, ನಡಿಗೂ ಅಭಿಮಾನಿಗಳು ಕ್ಲೀನ್ಬೋಲ್ಡ್ ಆಗಿದ್ದಾರೆ. ಕ್ರಿಕೆಟರ್ಗಳ ನಡುವಿನ ಗೆಳೆತನದ ಕತೆಗಳಂತೂ ಎಷ್ಟೋ ಜನರಿಗೆ ಸ್ಫೂರ್ತಿಯ ಸೆಲೆಯಾಗಿದೆ. ಟೀಮ್ ಇಂಡಿಯಾ ಕಂಡ ಜೀವದ ಗೆಳೆಯರ ಲಿಸ್ಟ್ನಲ್ಲಿ ವಿರಾಟ್ ಕೊಹ್ಲಿ – MS ಧೋನಿಗೆ ವಿಶೇಷವಾದ ಸ್ಥಾನವಿದೆ. ಇವರಿಬ್ಬರ ನಡುವಿನ ಭಾಂದವ್ಯಕ್ಕೇ ಸ್ಪೆಷಲ್ ಫ್ಯಾನ್ ಬೇಸ್ ಇದೆ.
ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!
16 ವರ್ಷಗಳ ಕೊಹ್ಲಿಯ ಗೆಳೆತನ ನೆನೆದ ಧೋನಿ
ವಿರಾಟ್ ಕೊಹ್ಲಿ-ಮಹೇಂದ್ರ ಸಿಂಗ್ ಧೋನಿ. ಇವ್ವರಿಬ್ಬರ ಒಡನಾಟ ಇಂದು ನಿನ್ನೆಯದಲ್ಲ. ಇದಕ್ಕೆ ಬರೋಬ್ಬರಿ 16 ವರ್ಷಗಳ ಸುದೀರ್ಘ ಇತಿಹಾಸ ಇದೆ. ಈ ವರ್ಷಗಳಲ್ಲಿ ಇಬ್ಬರ ಜೀವನದಲ್ಲಿ ಹಲವಾರು ಬದಲಾವಣೆಯಾಗಿದೆ. ಆ ಗೆಳೆತನ ಮಾತ್ರ ಇಂದಿಗೂ ಹಾಗೇ ಉಳಿದಿದೆ.
ಇವರಿಬ್ಬರೂ ಟೀಮ್ ಇಂಡಿಯಾದಲ್ಲಿದ್ದಾಗ ಆನ್ಫೀಲ್ಡ್ ಆಟದಿಂದ, ಫ್ಯಾನ್ಸ್ಗೆ ಭರ್ಜರಿ ಟ್ರೀಟ್ ನೀಡಿದ್ರು. ಇಬ್ಬರೂ ಒಟ್ಟಾಗಿ ಎಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಈ ಜೋಡಿಯ ಬ್ಯಾಟಿಂಗ್ ಮ್ಯಾಜಿಕ್, ಫ್ಯಾನ್ಸ್ಗೆ ಎಷ್ಟು ರಂಜನೆ ನೀಡಿತ್ತೋ, ಆಫ್ ದಿ ಫೀಲ್ಡ್ನ ಒಡನಾಟ ಕೂಡ ನೋಡುಗರ ಮನ ತಣಿಸಿತ್ತು.. ಕೊಹ್ಲಿ ಜೊತೆಗಿನ ಸ್ಪೆಷಲ್ ಬಾಂಡಿಂಗ್ ಬಗ್ಗೆ ಧೋನಿ ಇದೀಗ ಮನ ಬಿಚ್ಚಿ ಮಾತನಾಡಿದ್ದಾರೆ.
ನಾವಿಬ್ಬರು 2008-09ರಿಂದ ಒಟ್ಟಾಗಿ ಆಡ್ತಿದ್ದೇವೆ. ಇಬ್ಬರ ನಡುವೆ ವಯಸ್ಸಿನ ಅಂತರವಿದೆ. ನನಗೆ ಗೊತ್ತಿಲ್ಲ. ದೊಡ್ಡಣ್ಣ, ಸಹೋದ್ಯೋಗಿ ಅಥವಾ ನೀವು ಹೇಗೆ ಬೇಕಾದ್ರೂ ಕರೆಯಬಹುದು. ಅಂತಿಮವಾಗಿ ನಾವಿಬ್ಬರೂ ಸಹೋದ್ಯೋಗಿಗಳು. ಭಾರತದ ಪರ ಹಲವು ವರ್ಷಗಳ ಕಾಲ ಆಡಿದ್ದೀವಿ. ವಿಶ್ವ ಕ್ರಿಕೆಟ್ಗೆ ಬಂದ್ರೆ ಕೊಹ್ಲಿ ಒಬ್ಬ ಶ್ರೇಷ್ಟ ಕ್ರಿಕೆಟಿಗ-ಎಂಎಸ್ ಧೋನಿ
ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್..!
ಧೋನಿಯೇ ಹೇಳಿದಂತೆ ವಿರಾಟ್ ಕೊಹ್ಲಿ, ಈಗ ವಿಶ್ವ ಕ್ರಿಕೆಟ್ನ ಶ್ರೇಷ್ಟ ಕ್ರಿಕೆಟಿಗ. ಇಂದು ವಿರಾಟ್ ಕೊಹ್ಲಿ ಶ್ರೇಷ್ಟ ಕ್ರಿಕೆಟಿಗನಾಗಿ ಬೆಳೆದಿರೋದ್ರ ಹಿಂದೆ ಧೋನಿಯ ಪಾತ್ರ ಮಹತ್ವದ್ದು. ಕೊಹ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟಾಗ ಬೆನ್ನು ತಟ್ಟಿ ಬೆಳೆಸಿದ್ದೇ ಧೋನಿ. ವಿರಾಟ್ ಕೊಹ್ಲಿ ತಪ್ಪು ಹೆಜ್ಜೆ ಇಟ್ಟಾಗೆಲ್ಲಾ ತಿದ್ದಿ ತೀಡಿ ಸರಿ ದಾರಿಗೆ ತಂದಿದ್ದ ಧೋನಿ, ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ನೀಡುತ್ತಾ ಪ್ರೋತ್ಸಾಹಿಸಿದ್ರು.
ಏಕಾಂಗಿಯಾಗಿದ್ದ ಕೊಹ್ಲಿಗೆ ಆತ್ಮಸ್ಥೈರ್ಯ ತುಂಬಿದ್ದೆ ಧೋನಿ
2020ರ ಬಳಿಕ ವಿರಾಟ್ ಕೊಹ್ಲಿ ವೃತ್ತಿ ಜೀವನ ಕರಾಳ ಹಾದಿ ಹಿಡಿಯಿತು. ಬ್ಯಾಡ್ ಫಾರ್ಮ್ ಸುಳಿಗೆ ಸಿಲುಕಿ ಒದ್ದಾಡಿದ್ರು. ಟೀಮ್ ಇಂಡಿಯಾದ ನಾಯಕತ್ವದ ವಿಚಾರದಲ್ಲಿ ಹೈಡ್ರಾಮಾನೇ ನಡೆದು ಬಿಡ್ತು. ಬೇಸರದಲ್ಲಿ ಟೆಸ್ಟ್ ಕ್ಯಾಪ್ಟೆನ್ಸಿಗೆ ದಿಢೀರ್ ಗುಡ್ ಬೈ ಹೇಳಿದ್ರು. ಈ ಅವಧಿಯಲ್ಲಿ ಹಲವು ಅವಮಾನ ಎದುರಿಸಿದ ವಿರಾಟ್, ಪುಟಿದೇಳುವ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ರು. ಅವತ್ತು ಮತ್ತೆ ಕೊಹ್ಲಿ ಬೆನ್ನಿಗೆ ನಿಂತಿದ್ದೆ ಮಹೇಂದ್ರ ಸಿಂಗ್ ಧೋನಿ.
ನಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ, ನನಗೆ ಒಬ್ಬ ಒಬ್ಬ ವ್ಯಕ್ತಿಯಿಂದ ಮಾತ್ರ ಸಂದೇಶ ಬಂದಿತ್ತು. ನಾನು ಈ ಹಿಂದೆ ಆ ವ್ಯಕ್ತಿಯೊಂದಿಗೆ ಆಡಿದ್ದೆ. ಅವರೇ MS ಧೋನಿ. ತುಂಬಾ ಜನರ ಬಳಿಕ ನನ್ನ ಫೋನ್ ನಂಬರ್ ಇದೆ. ತುಂಬಾ ಜನ ಟಿವಿಗಳಲ್ಲಿ ಕೂತು ಸಲಹೆಗಳನ್ನ ನೀಡ್ತಾರೆ. ಅವರ್ಯಾರಿಂದಲೂ ನನಗೆ ಒಂದು ಸಂದೇಶ ಬರಲಿಲ್ಲ-ವಿರಾಟ್ ಕೊಹ್ಲಿ
ಇದನ್ನೂ ಓದಿ:ದ್ರಾವಿಡ್ ಪುತ್ರ ಅಂಡರ್-19 ತಂಡಕ್ಕೆ ಆಯ್ಕೆ; ಆದರೆ ಸಮಿತ್ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..
ಧೋನಿ ನಿರ್ಗಮನದ ಬಳಿಕ ನಾಯಕರಾದ ವಿರಾಟ್, ಮಾಡ್ರನ್ ಡೇ ಲೆಜೆಂಡ್ ಆಗಿ ಬೆಳೆದರು. ಇವತ್ತಿಗೂ ಧೋನಿ ಮೇಲಿನ ಗೌರವ ವಿರಾಟ್ಗೆ ಕಡಿಮೆಯಾಗಿಲ್ಲ. ಕೊಹ್ಲಿ ಮೇಲಿನ ಪ್ರೀತಿ ಧೋನಿಗೂ ಕಡಿಮೆಯಾಗಿಲ್ಲ. ಈಗ ಐಪಿಎಲ್ ವೇಳೆ ಮುಖಾಮುಖಿಯಾಗುವ ಈ ಐಕಾನಿಕ್ ಪ್ಲೇಯರ್ಗಳು ಆತ್ಮೀಯವಾಗಿ ಮಾತನಾಡ್ತಾರೆ. ಸಲುಗೆಯಿಂದ ಒಬ್ಬರ ಹೆಗಲ ಮೇಲೆ ಒಬ್ಬರು ಕೈಹಾಕಿ ನಗ್ತಾರೆ. ಹಾಸ್ಯ ಚಟಾಕಿಯನ್ನೇ ನಕ್ಕು ನಲೀತಾರೆ. ಇದನ್ನ ನೋಡೋದು ಅಭಿಮಾನಿಗಳ ಪಾಲಿಗಂತೂ ಹಬ್ಬವೇ.
ಇವರಿಬ್ಬರು ಜೊತೆಯಾಗಿ ಈಗ ಆಡದೇ ಇರಬಹುದು. ವರ್ಷ ಕಳೆದಂತೆ ಇವರಿಬ್ಬರ ಬಾಂಡಿಂಗ್ ಅಂತೂ ಹೆಚ್ಚು ಬಲಿಷ್ಟವಾಗ್ತಿದೆ. ಗೆಳತನ ಅನ್ನೋ ಪದಕ್ಕೆ ಅರ್ಥದಂತಿರೋ ಇವರಿಬ್ಬರ ಭಾಂದವ್ಯದ ಮೇಲೆ ಯಾರ ಕಣ್ಣೂ ಬೀಳದಿರಲಿ.
ಇದನ್ನೂ ಓದಿ:ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ 7 ತಿಂಗಳ ತುಂಬು ಗರ್ಭಿಣಿ; ಯಾರಿವರು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್