newsfirstkannada.com

ಕೊಹ್ಲಿ ವಿರುದ್ಧ ಮತ್ತೆ ನವೀನ್ ಉಲ್ ಹಕ್ ಆಕ್ರೋಶ; ಹೊರಬಿತ್ತು ಮತ್ತೊಂದು ವಿಡಿಯೋ

Share :

Published August 29, 2024 at 2:23pm

Update August 29, 2024 at 2:25pm

    2023ರ ಐಪಿಎಲ್​ನಲ್ಲಿ ಕೊಹ್ಲಿ ಜೊತೆ ಕಿತ್ತಾಡಿದ್ದ ನವೀನ್

    2023ರ ಏಕದಿನ ವಿಶ್ವಕಪ್‌ನಲ್ಲಿ ಇಬ್ಬರು ಸ್ನೇಹಿತರಂತೆ ಕಾಣಿಸಿಕೊಂಡ್ರು

    ಕೊಹ್ಲಿ, ನವೀನ್ ಮಧ್ಯೆ ಈಗ ಆಗಿದ್ದೇನು? ಏನಿದು ವಿಡಿಯೋ

ಅಫ್ಘಾನಿಸ್ತಾನದ ಸ್ಟಾರ್ ವೇಗಿ ನವೀನ್-ಉಲ್-ಹಕ್ ಐಪಿಎಲ್ 2023ರಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಕಿತ್ತಾಡಿ ಸುದ್ದಿಯಾಗಿದ್ದರು. 2023ರ ಏಕದಿನ ವಿಶ್ವಕಪ್‌ನಲ್ಲಿ ಇಬ್ಬರು ಸ್ನೇಹಿತರಂತೆ ಕಾಣಿಸಿಕೊಂಡರು. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ನವೀನ್ ಉಲ್ ಹಕ್ ಮತ್ತೊಮ್ಮೆ ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರೀ ಹರಿದಾಡುತ್ತಿದೆ. ವಾಸ್ತವವಾಗಿ.. ವಿಡಿಯೋವನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್​​ ಫ್ರಾಂಚೈಸಿ ಬಾರ್ಬಡೋಸ್ ರಾಯಲ್ಸ್ ಹಂಚಿಕೊಂಡಿದೆ. ಈ ಟೂರ್ನಿಯಲ್ಲಿ ನವೀನ್ ಬಾರ್ಬಡೋಸ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ:RCB ಫ್ಯಾನ್ಸ್​ಗೆ ಶಾಕ್ ಕೊಟ್ಟ ಕೆಎಲ್ ರಾಹುಲ್.. ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ..!

ವಿಡಿಯೋದಲ್ಲಿ ವಿರಾಟ್ ಕೊಹ್ಲಿಯನ್ನು ಎಲ್ಲೆಂದರಲ್ಲಿ ನೋಡಬಹುದು. ನವೀನ್ ತಮ್ಮ ಮೊಬೈಲ್‌ನಲ್ಲಿ ಚಿಕ್ಕ ವೀಡಿಯೊ ವೀಕ್ಷಿಸುತ್ತಿದ್ದಾರೆ. ಅಲ್ಲಿ ಕೊಹ್ಲಿಯನ್ನು ನೋಡುತ್ತಾರೆ. ಕೊಹ್ಲಿಯನ್ನು ಮತ್ತೆ ಮತ್ತೆ ನೋಡಿದ ನವೀನ್ ಮೊಬೈಲ್ ಸ್ವಿಚ್ ಆಫ್ ಮಾಡಿ ಎದ್ದು ಬೇರೆಡೆ ಹೋಗುತ್ತಾರೆ. ಈ ಮಧ್ಯೆ ‘ಬೆನ್ ಸ್ಟೋಕ್ಸ್’ ಹೆಸರಿನ ಪೋಸ್ಟರ್ ನೋಡ್ತಾರೆ. ಇದು ಕೂಡ ಕಿಂಗ್ ಕೊಹ್ಲಿಯನ್ನು ನೆನಪಿಸಿರಬಹುದು.
ಅಲ್ಲಿಂದ ಹೋಟೆಲ್ ಕೊಠಡಿಗೆ ಹೋಗ್ತಾರೆ. ಅಲ್ಲಿ ನಾನು ಯಾವ ಚಾನಲ್‌ನಲ್ಲಿ CPL ಅನ್ನು ವೀಕ್ಷಿಸಬಹುದು? ಎಂದು ಪ್ರಶ್ನೆ ಮಾಡ್ತಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಚಾನಲ್ ಸಂಖ್ಯೆ 18 ಎಂದು ಹೇಳಲಾಗುತ್ತದೆ. ವಿರಾಟ್ ಜೆರ್ಸಿ ಸಂಖ್ಯೆಯೂ 18 ಆಗಿದೆ. ಅದಕ್ಕೆ ಇಲ್ಲಿಗೆ ‘ಇದನ್ನು ನಿಲ್ಲಿಸಿ, ಹೊಸದನ್ನು ಹುಡುಕಿ’ ಎನ್ನುತ್ತಾರೆ.

ಇದನ್ನೂ ಓದಿ:ಕೈಕೊಟ್ಟ ಸಿರಾಜ್, ಜಡೇಜಾ.. ಬಾಂಗ್ಲಾ ಸರಣಿ ಕನಸು ಛಿದ್ರಗೊಳ್ಳುವ ಆತಂಕ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ವಿರುದ್ಧ ಮತ್ತೆ ನವೀನ್ ಉಲ್ ಹಕ್ ಆಕ್ರೋಶ; ಹೊರಬಿತ್ತು ಮತ್ತೊಂದು ವಿಡಿಯೋ

https://newsfirstlive.com/wp-content/uploads/2024/08/KOHLI-NAVEEN.jpg

Load More