newsfirstkannada.com

ಕಿಂಗ್ ಕೊಹ್ಲಿ-ಬಾಬರ್​ ಈ ಇಬ್ಬರಲ್ಲಿ ಯಾರು ಬೆಸ್ಟ್​.. ವಿರಾಟ್ ಬ್ಯಾಟಿಂಗ್ ಮುಂದೆ ಪಾಕ್​ ಕ್ಯಾಪ್ಟನ್ ಠುಸ್..!​

Share :

24-08-2023

    ಪಾಕ್​-ಭಾರತದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯದ್ದೇ ಮೇಲುಗೈ

    ಭಾರತದ ವಿರುದ್ಧ ಪಂದ್ಯಗಳಲ್ಲಿ ಬಾಬರ್​ ಬ್ಯಾಟಿಂಗ್ ಡಲ್​

    ಪಾಕ್​ ವಿರುದ್ಧ ಕಿಂಗ್​ ಕೊಹ್ಲಿ ಆರ್ಭಟ ಹೇಗಿರುತ್ತೆ ಗೊತ್ತಾ?

ಕೊಹ್ಲಿ VS ಬಾಬರ್​​ ಇಬ್ಬರಲ್ಲಿ ಯಾರು ಬೆಸ್ಟ್​..? ಈ ಪ್ರಶ್ನೆ ಕ್ರಿಕೆಟ್​ ವಲಯದಲ್ಲಿ ಸದಾ ಚರ್ಚೆಯಲ್ಲಿರುತ್ತೆ. ಈ ವರೆಗೆ ಇದಕ್ಕೆ ಫುಲ್​ ಸ್ಟಾಫ್​ ಬೀಳೋ ಉತ್ತರ ಸಿಕ್ಕಿಲ್ಲ. ಕೆಲವರು​ ಬಾಬರ್​​ ಕಿಂಗ್​ ಅಂದ್ರೆ, ಹಲವರು ಕಿಂಗ್​ ಕೊಹ್ಲಿ ಅಂತಿದ್ದಾರೆ. ಹಾಗಾದ್ರೆ, ಯಾರು ಬೆಸ್ಟ್​..?

ಏಷ್ಯಾಕಪ್​ ಕದನಕ್ಕೆ ವೇದಿಕೆ ಸಜ್ಜಾಗ್ತಿದ್ದಂತೆ, ಇಂಡೊ- ಪಾಕ್​ ಕದನದ ಕಾವು ಹೆಚ್ಚಾಗ್ತಿದೆ. ಬದ್ಧ ವೈರಿಗಳ ನಡುವಿನ ಕಾದಾಟಕ್ಕೆ ಇಡೀ ವಿಶ್ವ ಕಾಯ್ತಿದೆ. ಅದ್ರಲ್ಲೂ ಬಾಬರ್​ ಅಝಂ, ವಿರಾಟ್​​ ಕೊಹ್ಲಿ ಫ್ಯಾನ್ಸ್​​ ಅಂತೂ ತುದಿಗಾಲಲ್ಲಿ ನಿಂತಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಬಾಬರ್ ಅಝಂ

ಕೊಹ್ಲಿ VS ಬಾಬರ್​​.. ಯಾರು ರಿಯಲ್​ ಕಿಂಗ್​.?

KING IS ALWAYS KING.. ಅನ್ನೋ ಮಾತಿದ್ಯಲ್ಲ.. ಅದೇ ಇದಕ್ಕೆ ಉತ್ತರ.. ಅಂದ್ರೆ, ವಿರಾಟ್​ ಕೊಹ್ಲಿಯೇ ರಿಯಲ್​ ಕಿಂಗ್​. ಬಾಬರ್​ ಅಝಂ ಒಬ್ಬ ಬೆಸ್ಟ್​ ಬ್ಯಾಟ್ಸ್​​ಮನ್​. ಹಾಗಂತ ಕೊಹ್ಲಿ ಜೊತೆಗೆ ಬಾಬರ್​ ಅಝಂ COMPARISON ಯಾಕೋ ಸರಿಯಾಗಲ್ಲ.

ಬಿಗ್​​ ಫೈಟ್​​ಗಳಲ್ಲಿ ಬಾಬರ್​ ಠುಸ್​, ಕೊಹ್ಲಿ ಸಿಂಹ ಘರ್ಜನೆ.!

ಇಂಡೋ -ಪಾಕ್​ ನಡುವಿನ ಪಂದ್ಯ ಅಂದ್ರೆ, ಮೈದಾನ ರಣರಂಗ, ಆಟಗಾರರೆಲ್ಲಾ ಸೈನಿಕರು, ಬ್ಯಾಟ್​ & ಬಾಲ್​ ವೆಪನ್​ಗಳು ಅಷ್ಟೇ. ಇಲ್ಲಿ 2 ತಂಡಗಳಿಗೂ ಗೆಲುವೇ ಅಲ್ಟಿಮೇಟ್​ ಗುರಿ. ಆಫ್​ ಫೀಲ್ಡ್​ನ ಎಕ್ಸ್​​ಪೆಕ್ಟೇಶನ್​ ಆಟಗಾರರನ್ನ ಒತ್ತಡಕ್ಕೆ ಸಿಲುಕಿಸಿರುತ್ತೆ. ತಂಡ ಸಂಕಷ್ಟಕ್ಕೆ ಸಿಲುಕಿದ್ರೆ, ಕೈ ಕಾಲೇ ಆಡಲ್ಲ. ಆದ್ರೆ, ವಿರಾಟ್​ ಕೊಹ್ಲಿ ವಿಚಾರದಲ್ಲಿ ಹಾಗಲ್ಲ. ಒತ್ತಡ ಹೆಚ್ಚಾದಷ್ಟೂ ರನ್​ ಹೊಳೆ ಹರಿಸ್ತಾರೆ. ಆದ್ರೆ, ಬಾಬರ್​ ಮಾತ್ರ ಪೆವಿಲಿಯನ್​ ಪರೇಡ್​​ ನಡೆಸ್ತಾರೆ.

ವಿಶ್ವಕಪ್​ – 2021 ಭಾರತ-ಪಾಕ್ ಹಣಾಹಣಿ

ವಿಶ್ವಕಪ್​ 2021ರಲ್ಲಿ ಟೀಮ್​ ಇಂಡಿಯಾ ಪಾಕ್​ ಎದುರಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋಲುಂಡಿತು. 52 ಎಸೆತ ಎದುರಿಸಿ 68 ರನ್​ ಸಿಡಿಸಿದ ಬಾಬರ್​​ ಮ್ಯಾಚ್​ ವಿನ್ನರ್​​ ಆದ್ರು. ಹಾಗಿದ್ರೂ, ಕೊಹ್ಲಿನೇ ಇಲ್ಲಿ ಗ್ರೇಟ್​​. ಯಾಕಂದ್ರೆ, ಈ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿದಾಗ ಟೀಮ್​ ಇಂಡಿಯಾ, 3 ವಿಕೆಟ್​ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತ್ತು. ಆ ಒತ್ತಡದ ನಡುವೆ ಆಸರೆಯಾದ ಕೊಹ್ಲಿ 57 ರನ್​ ಸಿಡಿಸಿದ್ರು.

ಏಷ್ಯಾಕಪ್​ 2022 ಕೊಹ್ಲಿ ಮತ್ತೆ ಪಾಕ್​ಗೆ ಟಕ್ಕರ್

ಏಷ್ಯಾಕಪ್​ 2022ರ ಗ್ರೂಪ್​ ಸ್ಟೇಜ್​ ಪಂದ್ಯದಲ್ಲಿ ಕೊಹ್ಲಿ ಮತ್ತೆ ಪಾಕ್​ಗೆ ಟಕ್ಕರ್​ ಕೊಟ್ರೆ, ಬಾಬರ್​ ಠುಸ್​ ಪಟಾಕಿಯಾದ್ರು. ಕೊಹ್ಲಿ 35 ರನ್​ ಸಿಡಿಸಿದ್ರೆ, ಬಾಬರ್​ ಆಟ ಜಸ್ಟ್​​ 10 ರನ್​ಗಳಿಗೆ ಅಂತ್ಯವಾಯ್ತು.. ಪಾಕ್​​ ಸೋಲಿಗೆ ಗುರಿಯಾಯ್ತು.

ಏಷ್ಯಾಕಪ್​ 2022ರಲ್ಲಿ ಕೊಹ್ಲಿಯದ್ದೇ ಕಾರು ಬಾರು

2022ರ ಏಷ್ಯಾಕಪ್​ ಟೂರ್ನಿಯ ಸೂಪರ್​​ ಸಿಕ್ಸ್​​ ಪಂದ್ಯದಲ್ಲಿ 2ನೇ ಬಾರಿ ಮುಖಾಮುಖಿ ಆದಾಗ್ಲೂ ಕೊಹ್ಲಿಯದ್ದೇ ಕಾರು ಬಾರು. ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ 44 ಎಸೆತ ಎದುರಿಸಿ 60 ರನ್​ ಸಿಡಿಸಿದ್ರೆ, ಬಾಬರ್​ ಅಝಂ ಜಸ್ಟ್​ 10 ರನ್​ಗಳಿಸಿ ಪೆವಿಲಿಯನ್​ ಸೇರಿದ್ರು.

ಭಾರತದ ವಿರುದ್ಧ ಬಾಬರ್ ಔಟ್ ಆದ ಕ್ಷಣ

ವಿಶ್ವಕಪ್​ 2022 ಬಾಬರ್​ ಡಕೌಟ್

2022ರ ಟಿ20 ವಿಶ್ವಕಪ್​ ಟೂರ್ನಿಯಲ್ಲೂ ವಿರಾಟ್​ ಕೊಹ್ಲಿ ಘರ್ಜಿಸಿದ ಪರಿಯನ್ನ ನಿಮಗೆ ಎಕ್ಸ್​​ಪ್ಲೇನ್​ ಮಾಡೋ ಆಗತ್ಯವಿಲ್ಲ. ಈ ಪಂದ್ಯದಲ್ಲಿ ಬಾಬರ್​ ಅಝಂ ಡಕೌಟ್​​ ಆಗಿದ್ರೆ, ಸಿಂಗಲ್​ ಹ್ಯಾಂಡೆಡ್ಲಿ ಕೊಹ್ಲಿ ಪಂದ್ಯವನ್ನ ಗೆಲ್ಲಿಸಿದ್ರು. ಅವತ್ತು ಕೊಹ್ಲಿ ಆಡಿದ ಇನ್ನಿಂಗ್ಸ್ ಅನ್ನ, ಕ್ರಿಕೆಟ್​ ಇತಿಹಾಸದ​ ಒನ್​ ಆಫ್​ ಬೆಸ್ಟ್​ ಇನ್ನಿಂಗ್ಸ್​ ಅಂದ್ರೂ ತಪ್ಪಾಗಲ್ಲ.

ಇದಿಷ್ಟೇ ಅಲ್ಲ, ನಾಕೌಟ್​​ ಪಂದ್ಯಗಳ ಅಂಕಿ-ಅಂಶಗಳನ್ನ ನೋಡಿದ್ರೆ, ಅಲ್ಲೂ ವಿರಾಟ್​ ಕೊಹ್ಲಿಯದ್ದೇ ಮೇಲುಗೈ. ಈವರೆಗೆ ಆದ ಮುಖಾಮುಖಿಗಳಲ್ಲಿ ಕೊಹ್ಲಿಯೇ ದರ್ಬಾರ್​ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ ಬಾಬರ್​ -ವಿರಾಟ್​ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಈ ಫೈಟ್​ನಲ್ಲಿ ಏನಾಗುತ್ತೆ ಕಾದು ನೋಡೋಣ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್ ಕೊಹ್ಲಿ-ಬಾಬರ್​ ಈ ಇಬ್ಬರಲ್ಲಿ ಯಾರು ಬೆಸ್ಟ್​.. ವಿರಾಟ್ ಬ್ಯಾಟಿಂಗ್ ಮುಂದೆ ಪಾಕ್​ ಕ್ಯಾಪ್ಟನ್ ಠುಸ್..!​

https://newsfirstlive.com/wp-content/uploads/2023/07/KOHLI_BABAR_BATTING.jpg

Load More