ರೋಹಿತ್ಗೆ ಕೊಹ್ಲಿಯ ಬಿಗಿದಪ್ಪುಗೆಯ ಗಿಫ್ಟ್
ಜೋಡೆತ್ತಿನ ಸೆಲೆಬ್ರೇಷನ್ಗೆ ಫ್ಯಾನ್ಸ್ ಖುಷ್
ರೋಹಿತ್ಗೆ ಕಿಂಗ್ ಕೊಹ್ಲಿಯ ಕ್ಯಾಪ್ಟನ್ಸಿ ಟಿಪ್ಸ್..!
ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ. ಇಬ್ಬರು ಟೀಮ್ ಇಂಡಿಯಾದ ಪಿಲ್ಲರ್ಸ್. ಒಬ್ಬ ಮಾಜಿ ನಾಯಕ, ಮತ್ತೊಬ್ಬ ಹಾಲಿ ನಾಯಕ. ಕೊಹ್ಲಿ, ರೋಹಿತ್ ಸಂಬಂಧ, ಬೂದಿ ಮುಚ್ಚಿದ ಕೆಂಡಂದಂತಿದೆ ಎಂದೇ ಹೇಳಲಾಗ್ತಿತ್ತು. ಇವರಿಬ್ಬರ ಕೋಲ್ಡ್ವಾರ್ ಸುದ್ದಿ ಚರ್ಚೆಗೆ ಬರುತ್ತಲೇ ಇರುತ್ತೆ. ಅದ್ರಲ್ಲೂ ಕೊಹ್ಲಿಯಿಂದ ಕ್ಯಾಪ್ಟನ್ಸಿ ಕಿತ್ತುಕೊಂಡು, ರೋಹಿತ್ಗೆ ನೀಡಿದಾಗಂತೂ ಈ ಸುದ್ದಿ ಜ್ವಾಲಾಮುಖಿಯಂತೆ ಹಬ್ಬಿತ್ತು. ಆದ್ರೀಗ ಇವರಿಬ್ಬರ ಕೋಲ್ಡ್ವಾರ್ಗೆ ಬ್ರೇಕ್ ಬಿದ್ದು, ಹಲವು ದಿನಗಳೇ ಕಳೆದಿವೆ.
ಹಲ್ಲು ಕಿತ್ತ ಹಾವಿನಂತೆ ಬುಸು ಗುಡುತ್ತಿದ್ದ ಇವರಿಬ್ಬರ ಕೋಲ್ಡ್ವಾರ್ಗೆ ಬ್ರೇಕ್ ಬಿದ್ದಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ನಾನೊಂದು ತೀರ.. ನೀನೊಂದು ತೀರಾ ಅಂತಿದ್ದ ಇವರು ಜೊತೆಯಾಗಿದ್ದಾರೆ. ಟೀಮ್ ಇಂಡಿಯಾದ ಜೋಡೆತ್ತುಗಳ ಬಾಂಡಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳ ಮನವಂತೂ ಡಬಲ್ ಖುಷ್ ಆಗಿದೆ.
ಆನ್ಫೀಲ್ಡ್ನಲ್ಲಿ ಜೋಡೆತ್ತುಗಳೇ ಅಟ್ರಾಕ್ಷನ್..!
ಏಷ್ಯಾಕಪ್ನಲ್ಲಿ ನಿಜಕ್ಕೂ ಎಲ್ಲರ ಕಣ್ಣು ಕುಕ್ಕಿದ್ದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಬ್ಬಿಕೊಂಡಿದ್ದು. ಶನಕ ವಿಕೆಟ್ ಪತನದಿಂದ ಎಷ್ಟು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಂತೋಷವಾಯ್ತೋ ಇಲ್ವೋ. ಶನಕ ಕ್ಯಾಚ್ ಹಿಡಿದ ಬಳಿಕ ರೋಹಿತ್ ಶರ್ಮಾರನ್ನ ಕಿಂಗ್ ಕೊಹ್ಲಿ ತಬ್ಬಿಕೊಂಡಿ ಸೆಲೆಬ್ರೇಟ್ ಮಾಡಿದ ಪರಿಯಂತೂ ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ಮಂದಹಾಸವನ್ನೇ ನೀಡ್ತು. ಇದು ರೋಹಿತ್ ಶರ್ಮಾ ಹಾಗೂ ಕೊಹ್ಲಿಯ ಬಾಂಧವ್ಯಕ್ಕಿಡಿದಿದ್ದ ಕೈಗನ್ನಡಿಯಾಗಿತ್ತು.
ಆನ್ ಫೀಲ್ಡ್ & ಆಫ್ ದಿ ಫೀಲ್ಡ್ನಲ್ಲಿ ಪರಸ್ಪರ ಬೆಂಬಲ
ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೊಹ್ಲಿ, ಕ್ಯಾಪ್ಟನ್ಸಿ ವಿಚಾರದಲ್ಲಿ ಮೂಗಿ ತೂರಿಸಿದಿಲ್ಲ. ಲಂಕಾ ವಿರುದ್ಧದ ಸೂಪರ್-4 ಮ್ಯಾಚ್ನಲ್ಲಿ ವಿರಾಟ್, ರೋಹಿತ್ಗೆ ಬೆನ್ನಲುವಾಗಿ ನಿಂತರು. ಕೆಲವೊಂದು ಡಿಸಿಷನ್ನಲ್ಲಿ ರೋಹಿತ್, ಕೊಹ್ಲಿಯ ಟಿಪ್ಸ್ ಪಡೆದಿದ್ದು ಕಣ್ಣಿಗೆ ಕಾಣುತ್ತಿತ್ತು.
ಆಪ್ ದಿ ಫೀಲ್ಡ್ನಲ್ಲೂ ಜೊತೆ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಹಾಗೂ ಕೊಹ್ಲಿ ಜೊತೆಯಾಗಿ ಚರ್ಚಿಸಿಯೇ ಫೈನಲ್ ಡಿಸಿಷನ್ ತೆಗೆದುಕೊಳ್ತಿದ್ದಾರೆ. ಇದು ರೋಹಿತ್ ಆ್ಯಂಡ್ ಕೊಹ್ಲಿ ನಡುವಿನ ದೋಸ್ತಿಯನ್ನೇ ಪ್ರತಿಬಿಂಬಿಸುತ್ತಿದೆ. ವೈಮನಸ್ಸಿಲ್ಲ ಎಂಬ ಸ್ಪಷ್ಟ ಸಂದೇಶವನ್ನೇ ರವಾನಿಸ್ತಿದೆ.
ಸ್ವಿಮ್ಮಿಂಗ್ಪೂಲ್ನಲ್ಲಿ ಕೊಹ್ಲಿ, ರೋಹಿತ್ ಮಸ್ತ್ ಡಾನ್ಸ್
ಪಾಕ್ ವಿರುದ್ಧ ಹೈವೋಲ್ಟೇಜ್ ಮ್ಯಾಚ್ ಗೆದ್ದ ಬಳಿಕ ಸ್ವಿಮ್ಮಿಂಗ್ಪೂಲ್ನಲ್ಲಿ ಹಿಟ್ಮ್ಯಾನ್ ರೋಹಿತ್, ವಿರಾಟ್ ಜೊತೆಯಾಗಿಯೇ ಕಾಣಿಸಿಕೊಂಡ್ರು. ಸ್ವಿಮ್ಮಿಂಗ್ಪೂಲ್ನಲ್ಲಿ ಸಖತ್ ಎಂಜಾಯ್ ಮಾಡಿದ ಈ ಜೋಡಿ ಡ್ಯಾನ್ಸ್ ಮಾಡಿಯೂ ಸಂಭ್ರಮಿಸಿದೆ. ಇದು ಇವರಿಬ್ಬರ ದೋಸ್ತಿಗೆ ಬೆಸ್ಟ್ ಎಕ್ಸಾಂಪಲ್.
.
2022ರ ಟಿ20 ವಿಶ್ವಕಪ್ನ ಪಾಕ್ ವಿರುದ್ಧದ ಪಂದ್ಯದ ಬಳಿಕ ರೋಹಿತ್, ವಿರಾಟ್ ಕೊಹ್ಲಿಯನ್ನ ಎತ್ತಿದ್ದು ಕಣ್ಣಿಗೆ ಕಟ್ಟಿದಂತೆಯೇ ಇದೆ. ಕೊಹ್ಲಿಯನ್ನ ಕೈಬಿಡ್ತಿರಾ ಎಂದು ಸುದ್ದಿಗೋಷ್ಠಿಯಲ್ಲಿ ಎದುರಾಗಿದ್ದ ಪ್ರಶ್ನೆಗೆ ರೋಹಿತ್ ನೀಡಿದ ಉತ್ತರವಂತೂ ಮರೆಯುವಂತಿಲ್ಲ. ಇದೆಲ್ಲವೂ ಇವರಿಬ್ಬರ ನಡುವಿನ ಸ್ನೇಹಕ್ಕೆ ಹಿಡಿದ ಕೈಗನ್ನಡಿ ಅನ್ನೋದನ್ನ ಮರೆಯುವಂತಿಲ್ಲ. ಒಟ್ನಲ್ಲಿ ಅದೇನೇ ಆಗಲಿ.. ಕೊನೆಯ ಏಕದಿನ ವಿಶ್ವಕಪ್ ಆಡಲು ಸಜ್ಜಾಗಿರುವ ಈ ಜೋಡೆತ್ತುಗಳು, 15 ವರ್ಷಗಳ ಕಾಲ ಹಲವು ರೋಚಕ ಹಾಗೂ ಮರೆಯಲಾಗದ ಕ್ಷಣಗಳನ್ನ ಜೊತೆಯಾಗಿ ಕಟ್ಟಿಕೊಟ್ಟಿದ್ದಾರೆ. ಅವಿಸ್ಮರಣೀಯ ಗೆಲುವಿಗಳನ್ನ ನೀಡಿದ್ದಾರೆ. ಇಂಥಹ ದೋಸ್ತಿಗಳಿಗೆ ಏಕದಿನ ವಿಶ್ವಕಪ್ ಗೆಲುವಿನ ಕಿರೀಟ ದಕ್ಕಲಿ ಅನ್ನೋದೆ ಕ್ರಿಕೆಟ್ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್