newsfirstkannada.com

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್.. ನಿವೃತ್ತಿ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ಬಿಟ್ಟು ಹೋಗ್ತಾರಾ?

Share :

Published July 6, 2024 at 1:47pm

  ‘ಭಾರತದಲ್ಲಿ ಇದ್ದರೇ ಸಾಮಾನ್ಯರಂತೆ ಬದುಕೋಕೆ ಆಗೋದಿಲ್ಲ’

  ವಿಜಯಯಾತ್ರೆ ಆದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ವಿರಾಟ್​ ಕೊಹ್ಲಿ!

  ಭಾರತ ಬಿಡ್ತಾರಾ, ಅನುಮಾನ ಹುಟ್ಟಿಸಿದ ಕಿಂಗ್​ ಕೊಹ್ಲಿಯ ನಡೆ

T20 ಇಂಟರ್​ನ್ಯಾಷನಲ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ವಿರಾಟ್​ ಕೊಹ್ಲಿ, ನಿವೃತ್ತಿ ನಂತರದ ಜೀವನಕ್ಕೆ ಪ್ಲಾನ್​ ರೂಪಿಸ್ತಿದ್ದಾರಾ? ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಲು ಮುಂದಾಗಿದ್ದಾರಾ? ಹೀಗೊಂದು ಅನುಮಾನ ಹುಟ್ಟಿದೆ. ವಿಜಯೋತ್ಸವ ಮುಗಿದ ಮರುದಿನವೇ, ವಿರಾಟ್​ ಕೊಹ್ಲಿಯ ನಡೆ ಈ ಅನುಮಾನದ ಹುಟ್ಟಿಗೆ ಕಾರಣವಾಗಿದೆ. ಅಷ್ಟಕ್ಕೂ, ಕೊಹ್ಲಿ ಮಾಡಿದ್ದೇನು?

ಇದನ್ನೂ ಓದಿ: KRS, ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಈ ಜಲಾಶಯದಿಂದ ಶೀಘ್ರದಲ್ಲೇ ಶುಭಸುದ್ದಿ..!

ಬಾರ್ಬಡೋಸ್​​ನಲ್ಲಿ ಭಾರತದ ಭಾವುಟವನ್ನ ಹೆಮ್ಮೆಯಿಂದ ಹಾರಿಸಿದ್ದ ಟೀಮ್​ ಇಂಡಿಯಾ ಕ್ರಿಕೆಟಿಗರು ತಾಯ್ನಾಡಿಗೆ ವಾಪಾಸ್ಸಾಗಿದ್ದಾರೆ. ವಿಶ್ವ ಗೆದ್ದ ವೀರರನ್ನ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಮರೀನ್​ಡ್ರೈವ್​ನಿಂದ ವಾಂಖೆಡೆವರೆಗೆ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ನಡುವೆ ನಡೆದ ಎಂದಿಗೂ ಮರೆಯಲಾಗದ ವಿಜಯಯಾತ್ರೆ, ಆ ಬಳಿಕ ಐಕಾನಿಕ್​ ವಾಂಖೆಡೆಯಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ.. ಇಡೀ ವಿಶ್ವದ ಗಮನ ಸೆಳೆದಿದೆ. ಭಾರತೀಯ ಅಭಿಮಾನಿಗಳ ಅಭಿಮಾನ, ಪ್ರೀತಿಯನ್ನ ಕಂಡು ಕ್ರಿಕೆಟ್​ ಲೋಕವೇ ನಿಬ್ಬೆರಗಾಗಿದೆ.

ಇದನ್ನೂ ಓದಿ: ಡಿವೈಡರ್​ಗೆ ಬೈಕ್​ ಡಿಕ್ಕಿ; ರಾಜಕಾಲುವೆಗೆ ಬಿದ್ನಾ ಡೆಲಿವರಿ ಬಾಯ್? ಬದುಕಿದನೋ, ಸಾವನ್ನಪ್ಪಿದನೋ? ನಿಗೂಢ!

ರಾತ್ರಿ ಸಂಭ್ರಮಾಚರಣೆಯಲ್ಲಿ.. ಬೆಳಗ್ಗೆ ಏರ್​ಪೋರ್ಟ್​ನಲ್ಲಿ.!

ವಿಶ್ವಕಪ್​ ಗೆದ್ದ ರಣಕಲಿಗಳನ್ನ ಅದ್ಧೂರಿಯಾಗಿ ಸ್ವಾಗತಿಸಿ ಇನ್ನೂ 12 ಗಂಟೆ ಕಳೆದಿರಲಿಲ್ಲ. ಮುಂಬೈನಲ್ಲಿ ನಡೆದ ಸಂಭ್ರಮದಲ್ಲಿ ಭಾಗಿಯಾಗಿದ್ದ ಫ್ಯಾನ್ಸ್​ ಇನ್ನು ಮನೆ ತಲುಪಿದ್ರೋ ಇಲ್ವೋ? ಕ್ರಿಕೆಟರ್ಸ್​ ನಿದ್ದೆ ಜಾರಿದ್ರೋ, ಇಲ್ವೋ.? ಅದಾಗಲೇ ವಿರಾಟ್​ ಕೊಹ್ಲಿ ಮತ್ತೆ ಬ್ಯಾಗ್​ ಪ್ಯಾಕ್​ ಮಾಡಿಕೊಂಡು ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ್ರು. ನಿನ್ನೆ, ಬೆಳಗಿನ ಜಾವವೇ ಮುಂಬೈನ ಛತ್ರಪತಿ ಶಿವಾಜಿ ಏರ್​​ಪೋರ್ಟ್​ನಿಂದ ವಿರಾಟ್​ ಕೊಹ್ಲಿ, ವಿದೇಶಕ್ಕೆ ಹಾರಿದ್ದಾರೆ.

ವಿದೇಶದಲ್ಲೇ ಬೀಡು ಬಿಟ್ಟ ‘ವಿರುಷ್ಕಾ’ ದಂಪತಿ.!

ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ರಜೆ ಪಡೆದುಕೊಂಡ ವಿರಾಟ್​ ಕೊಹ್ಲಿ ನೇರವಾಗಿ ಲಂಡನ್​ಗೆ ಹಾರಿದ್ರು. ಅದಕ್ಕೂ ಮುನ್ನವೇ ಅನುಷ್ಕಾ ಶರ್ಮಾ ಲಂಡನ್​ನಲ್ಲಿ ಬೀಡು ಬಿಟ್ಟಿದ್ರು. ಅನುಷ್ಕಾ ಮಗ ಅಕಾಯ್​ ಜನ್ಮ ನೀಡಿದ್ದೂ ಕೂಡ ಅಲ್ಲೇ.! ಅಕಾಯ್​ ಹುಟ್ಟಿನ ಬಳಿಕವೂ ಕೆಲ ತಿಂಗಳು ವಿರುಷ್ಕಾ ಜೋಡಿ ಅಲ್ಲೇ ವಾಸವಾಗಿತ್ತು. ಆಮೇಲೆ ಐಪಿಎಲ್​ ವೇಳೆ ಕೊಹ್ಲಿ ಭಾರತಕ್ಕೆ ಆಗಮಿಸಿದ್ರೆ, ನಂತರದಲ್ಲಿ ಭಾರತಕ್ಕೆ ಬಂದಿದ್ದ ಅನುಷ್ಕಾ ಮತ್ತೆ ವಾಪಸ್​​ ಲಂಡನ್​ಗೆ ತೆರಳಿದ್ರು.

ಕಳೆದ ಕೆಲ ತಿಂಗಳಿಂದ ಲಂಡನ್​​ನಲ್ಲೇ ಹೆಚ್ಚು ವಾಸ.!

ಕಳೆದ ಕೆಲ ತಿಂಗಳಿನಿಂದ ವಿರುಷ್ಕಾ ಜೋಡಿ ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ. ಡಿಸೆಂಬರ್ 2023ರಲ್ಲಿ, ಕುಟುಂಬದೊಂದಿಗೆ ಸಮಯ ಕಳೆಯಲು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡು ಕೊಹ್ಲಿ ಯುಕೆಗೆ ಹಾರಿದ್ರು. ಈ ವರ್ಷದ ಫೆಬ್ರವರಿಯಲ್ಲೂ, ಕೊಹ್ಲಿ ಮತ್ತೆ ಲಂಡನ್‌ನಲ್ಲಿ ತಮ್ಮ ಮಗಳು ವಮಿಕಾ ಜೊತೆಗೆ ರೆಸ್ಟೋರೆಂಟ್​ನಲ್ಲಿ ಕಾಣಿಸಿಕೊಂಡಿದ್ರು. ಇನ್ನು, ಕಳೆದ ತಿಂಗಳು ನಡೆದ ಇಂಡೋ-ಪಾಕ್​ ವಿಶ್ವಕಪ್​ ಪಂದ್ಯದ ವೇಳೆ ಅನುಷ್ಕಾ, ನ್ಯೂಯಾರ್ಕ್​ಗೆ ಬಂದಿದ್ರು. ಕೆಲ ದಿನ ವಿರಾಟ್​ ಕೊಹ್ಲಿ ಜೊತೆಗಿದ್ರು. ಆದ್ರೆ, ಟೀಮ್​ ಇಂಡಿಯಾ ವೆಸ್ಟ್​ ಇಂಡೀಸ್​ಗೆ ಟ್ರಾವೆಲ್​ ಮಾಡ್ತಿದ್ದಂತೆ, ಅನುಷ್ಕಾ ಲಂಡನ್​ಗೆ ಪ್ರಯಾಣ ಬೆಳೆಸಿದ್ರು. ಫೈನಲ್​ ಪಂದ್ಯ ಗೆದ್ದಾಗಲೂ ಅನುಷ್ಕಾ ಇರಲಿಲ್ಲ.

ಪತ್ನಿ ಮಕ್ಕಳನ್ನ ಬಿಟ್ಟಿರಲಾಗದೇ ವಿರಾಟ್​ ಒದ್ದಾಟ.!

ಒಂದೆಡೆ ಅನುಷ್ಕಾ ಲಂಡನ್​ನಲ್ಲಿ ವಾಸ್ತವ್ಯ ಹೂಡಿದ್ರೆ, ವಿರಾಟ್​ ಕೊಹ್ಲಿ ಪತ್ನಿ ಮಕ್ಕಳನ್ನ ಬಿಟ್ಟಿರಲಾಗದೇ ಒದ್ದಾಡ್ತಿದ್ದಾರೆ. ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ, ವಿಡಿಯೋ ಕಾಲ್​ ಮಾಡಿ ಪತ್ನಿ-ಮಕ್ಕಳೊಂದಿಗೆ ವಿರಾಟ್​ ಖುಷಿ ಹಂಚಿಕೊಂಡಿದ್ರು. ಬಾರ್ಬಡೋಸ್​​ನಲ್ಲಿ ಚಂಡಮಾರುತ ಸುಳಿಯಲ್ಲಿ ಸಿಲುಕಿಕೊಂಡಾಗಲೂ ಕೂಡ ವಿಡಿಯೋ ಕಾಲ್​ ಮಾಡಿ ಪತ್ನಿಗೆ ತೋರಿಸಿದ್ರು. ಮೊನ್ನೆ ನಡೆದ ವಿಜಯೋತ್ಸವದ ಸಂಭ್ರಮದಲ್ಲೂ ಕೊಹ್ಲಿ, ವಿಡಿಯೋ ಕಾಲ್​ನಲ್ಲೇ ಹೆಚ್ಚು ಬ್ಯುಸಿಯಾಗಿದ್ರು.

ಇದನ್ನೂ ಓದಿ: ಮೊಬೈಲ್​ ಚಾರ್ಜಿಂಗ್​​ ಹಾಕುವಾಗ ಹುಷಾರ್​​.. ಪಿಜಿಯಲ್ಲಿ ವಿದ್ಯಾರ್ಥಿ ಸಾವು

ಭಾರತ ಬಿಟ್ಟು ವಿದೇಶದಲ್ಲಿ ಸೆಟಲ್​ ಆಗ್ತಾರಾ ವಿರಾಟ್​.?

ವಿರಾಟ್​ ಕಳೆದ ಕೆಲ ತಿಂಗಳಿಂದ ಆಗಾಗ ಯುಕೆ ತೆರಳ್ತಾ ಇರೋದ್ರಿಂದ ಕೊಹ್ಲಿ ವಿದೇಶದಲ್ಲಿ ಸೆಟಲ್​ ಆಗ್ತಾರಾ ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಕಳೆದ ಕೆಲ ತಿಂಗಳಿನಿಂದಲಂತೂ ಅನುಷ್ಕಾ ಮಕ್ಕಳೊಂದಿಗೆ ಲಂಡನ್​ನಲ್ಲೇ ನೆಲೆಸಿದ್ದಾರೆ. ಇದೀಗ ವಿಜಯೋತ್ಸವದ ಬೆನ್ನಲ್ಲೇ ವಿರಾಟ್​ ಭಾರತದಿಂದ ಮತ್ತೆ ವಿದೇಶಕ್ಕೆ ಹಾರಿದ್ದು, ಕೊಹ್ಲಿ ಫಾರಿನ್​ನಲ್ಲಿ ಸೆಟಲ್​​ ಆಗೋ ಲೆಕ್ಕಾಚಾರದಲ್ಲಿದ್ದಾರಾ.? ಎಂಬ ಟಾಕ್​ ಶುರುವಾಗಿದೆ. ಟಿ20 ಇಂಟರ್​ನ್ಯಾಷನಲ್​ಗೆ ಗುಡ್​ ಬೈ ಹೇಳಿರೋ ಕೊಹ್ಲಿ, 2-3 ವರ್ಷಗಳಲ್ಲಿ ಎಲ್ಲ ಮಾದರಿಗೆ ಗುಡ್​ ಬೈ ಹೇಳೋ ಸಾಧ್ಯತೆಯಿದೆ. ಹೀಗಾಗಿ ನಿವೃತ್ತಿ ನಂತರದ ಜೀವನಕ್ಕೆ ಪ್ಲಾನ್​ ನಡೆಸ್ತಿದ್ದಾರಾ ಎಂಬ ಅನುಮಾನ ಹುಟ್ಟಿದೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್ ಇವರೇ​.. ಈ ಯುವ ಬ್ಯಾಟ್ಸ್​​ಮನ್ಸ್​ಗೆ ಇದೆ ಆ ಖದರ್

ಕಳೆದ ಕೆಲ ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿರಾಟ್​ ಕೊಹ್ಲಿ, ನನಗೆ ಸಾಮಾನ್ಯರಂತೆ ಜೀವನ ನಡೆಸೋದು ಇಷ್ಟ. ಭಾರತದಲ್ಲಿದ್ರೆ ಅದು ಸಾಧ್ಯವಾಗಲ್ಲ. ವಿದೇಶದಲ್ಲಿ ನಾವು ಸಾಮಾನ್ಯರಂತೆ ಬದುಕಬಹುದು ಎಂದು ಹೇಳಿಕೊಂಡಿದ್ರು. ಕೊಹ್ಲಿ ಈ ಹಿಂದೆ ಆಡಿದ ಮಾತುಗಳು ಮತ್ತು ಸದ್ಯ ವಿದೇಶದಲ್ಲೇ ಹೆಚ್ಚು ಕಾಲ ಕಳೆಯಲು ಮುಂದಾಗ್ತಿರೋ ರೀತಿ. ಇವೆರಡನ್ನ ಗಮನಿಸಿದ್ರೆ, ನಿವೃತ್ತಿ ನಂತರ ವಿದೇಶದಲ್ಲಿ ಜೀವನ ರೂಪಿಸಿಕೊಳ್ಳೋ ಪ್ಲಾನ್​ ಮಾಡ್ತಿದ್ದಾರೆ ಅನ್ನೂ ಅನುಮಾನ ಮತ್ತಷ್ಟು ಬಲವಾಗ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್.. ನಿವೃತ್ತಿ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ಬಿಟ್ಟು ಹೋಗ್ತಾರಾ?

https://newsfirstlive.com/wp-content/uploads/2024/07/VIRAT_ANUSHKA.jpg

Load More