newsfirstkannada.com

ಈ ಯುವ ಪ್ಲೇಯರ್ಸ್​ಗಾಗಿ ನಂಬರ್- 3 ಪ್ಲೇಸ್​ ತ್ಯಾಗ ಮಾಡ್ತಾರಾ ವಿರಾಟ್‌ ಕೊಹ್ಲಿ..?

Share :

06-08-2023

    ಈಗಾಗಲೇ ಈ ಯುವ ಆಟಗಾರರನ್ನು ಆಡಿಸಿ ಪ್ರಯೋಗ

    ಮುಂದಿನ 3 ತಿಂಗಳು ಟೀಮ್ ಇಂಡಿಯಾಗೆ ಬಹಳ ಮುಖ್ಯ

    ರನ್ ಮಷಿನ್​​ ವಿರಾಟ್​ ತ್ಯಾಗಮಯಿ ಆಗುತ್ತಿರುವುದು ಏಕೆ..?

ನಂಬರ್​- 3 ಸ್ಲಾಟ್​​​.. ಕಿಂಗ್ ಕೊಹ್ಲಿಯ ಫೇವರಿಟ್​​​​​ ಸ್ಲಾಟ್​​​. ಕ್ರಮಾಂಕ ಮೂರಲ್ಲಿ ರನ್​ ಗುಡ್ಡೆ ಹಾಕಿರೋ ಕೊಹ್ಲಿ ಏಷ್ಯಾಕಪ್​​​​-ಒನ್ಡೇ ವಿಶ್ವಕಪ್​​ನಲ್ಲಿ ಸ್ಲಾಟ್​​​​​ -3 ತ್ಯಾಗ ಮಾಡ್ತಾರಾ? ಕ್ರಿಕೆಟ್ ವಲಯದಲ್ಲಿ ಈ ಬಗ್ಗೆ ಬಿಗ್ ಡಿಬೇಟ್ ನಡೆಯುತ್ತಿದೆ. ಅಷ್ಟಕ್ಕೂ ರನ್ ಮಷಿನ್​​ ತ್ಯಾಗಮಯಿ ಆಗ್ತಿರೋದಾದ್ರು ಏಕೆ?.

ಮುಂದಿನ 3 ತಿಂಗಳು ಟೀಮ್ ಇಂಡಿಯಾಗೆ ವೆರಿ ಕ್ರೂಷಿಯಲ್​​​. ಆಗಸ್ಟ್​​​-ಸೆಪ್ಟೆಂಬರ್​​ನಲ್ಲಿ ಏಷ್ಯಾಕಪ್ ನಡೆದ್ರೆ ಅಕ್ಟೋಬರ್​​​-ನವೆಂಬರ್​​ನಲ್ಲಿ ಏಕದಿನ ವಿಶ್ವಕಪ್​ ನಡೆಯಲಿದೆ. ಇದಕ್ಕಾಗಿ ಮೆನ್​​ ಇನ್​ ಬ್ಲೂ ಪಡೆ ಭರ್ಜರಿ ಸಿದ್ಧತೆ ಆರಂಭಿಸಿದೆ. 2 ಬಿಗ್ ಈವೆಂಟ್​​ಗಳಿಗೆ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಫಿಟ್ ಆಗದಿದ್ರೆ ಕಿಂಗ್ ಕೊಹ್ಲಿ ತಮ್ಮ ಫೇವರಿಟ್​​​​ ಸ್ಲಾಟ್​​​​​​-3 ಅನ್ನ ತ್ಯಾಗ ಮಾಡ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

ವಿರಾಟ್ ಕೊಹ್ಲಿ

ನಂ.3 ಸ್ಲಾಟ್ ತ್ಯಾಗ ಮಾಡ್ತಾರಾ ಕಿಂಗ್ ಕೊಹ್ಲಿ..?

ಏಷ್ಯಾಕಪ್​​​-ಏಕದಿನ ವಿಶ್ವಕಪ್​ ಸನಿಹದಲ್ಲಿ ಕೆ.ಎಲ್ ರಾಹುಲ್​​​​​ ಹಾಗೂ ಶ್ರೇಯಸ್ ಅಯ್ಯರ್​ ಇಂಜುರಿ ಭಾರತಕ್ಕೆ ದೊಡ್ಡ ಸೆಟ್ ಬ್ಯಾಕ್ ಆಗಿದೆ. ಇಬ್ಬರು ಕೀ ಪ್ಲೇಯರ್ಸ್​ ಬಿಗ್ ಈವೆಂಟ್​​ನಲ್ಲಿ ಆಡ್ತಾರಾ ಇಲ್ವೋ ಪ್ರಶ್ನೆ ಕಾಡ್ತಿದೆ. ರಾಹುಲ್​​​ ಹಂಡ್ರೆಡ್ ಪರ್ಸೆಂಟ್​​​ ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಈ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ. ಶ್ರೇಯಸ್ ಚೇತರಿಕೆಗೆ ಇನ್ನಷ್ಟು ಸಮಯ ಬೇಕಿದೆ ಎಂದು ಹೇಳಲಾಗ್ತಿದೆ. ಒಂದು ವೇಳೆ ಸ್ಟಾರ್​​ ಆಟಗಾರರಿಬ್ಬರು ಮಹತ್ವದ ಟೂರ್ನಿಗಳಿಗೆ ಅಲಭ್ಯರಾದ್ರೆ ಕಿಂಗ್ ಕೊಹ್ಲಿಯ ಸ್ಲಾಟ್​​​​-3ಗೆ ಕುತ್ತು ಬರಲಿದೆ.

ಇಬ್ಬರು ಫಿಟ್ ಆಗದಿದ್ರೆ ಯಾರು ಬ್ಯಾಕ್​​ಅಪ್ಸ್​​​..?

ಏಷ್ಯಾಕಪ್​​​-ವಿಶ್ವಕಪ್​​ಗೂ ರಾಹುಲ್ ಹಾಗೂ ಶ್ರೇಯಸ್ ಫುಲ್​ ಫಿಟ್ ಆಗಲಿ ಎಂದು ಇಂಡಿಯನ್ ಟೀಮ್​ ಮ್ಯಾನೇಜ್​ಮೆಂಟ್​ ಪ್ರಾರ್ಥಿಸ್ತಿದೆ. ಹಾಗೊಂದು ವೇಳೆ ಆಗದಿದ್ದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್​ಕೋಚ್ ರಾಹುಲ್ ದ್ರಾವಿಡ್​ ಬ್ಯಾಕ್​​​ಅಪ್​ ಆಟಗಾರರನ್ನ ರೆಡಿ ಮಾಡಿದ್ದಾರೆ. ವೆಸ್ಟ್​ಇಂಡೀಸ್ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್​ ಹಾಗೂ ಸಂಜು ಸ್ಯಾಮ್ಸನ್ ರನ್ನ ಆಡಿಸಿ ಪ್ರಯೋಗ ಮಾಡಿದ್ದಾರೆ.

ಸ್ಕೈಗೆ ಲೋವರ್ ಆರ್ಡರ್​​ನಲ್ಲಿ ಆಡಿದ ಅನುಭವಿದೆ. ವಿಂಡೀಸ್ ವಿರುದ್ಧ ಕೊನೆ 2 ಪಂದ್ಯಗಳಲ್ಲಿ ಕ್ರಮಾಂಕ 6 ರಲ್ಲಿ ಆಡಿದ್ರು. ಇನ್ನು ವಿಕೆಟ್ ಕೀಪರ್​​ ಕಮ್ ಬ್ಯಾಟ್ಸ್​​ಮನ್​ ಸ್ಯಾಮ್ಸನ್​​​​ ಒನ್ಡೆ ರೆಕಾರ್ಡ್​ ಅದ್ಭುತವಾಗಿದೆ. ನಂ.4 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಕೆಪಾಸಿಟಿ ಹೊಂದಿದ್ದಾರೆ.

KL ರಾಹುಲ್ ಮತ್ತು ಶ್ರೇಯಸ್ ಅಯ್ಯರ್

ರಾಹುಲ್​​-ಶ್ರೇಯಸ್​​​ಗಾಗಿ ತ್ಯಾಗಮಯಿ ಆಗ್ತಾರಾ ವಿರಾಟ್​​..?

ಒಂದು ವೇಳೆ ರಾಹುಲ್​​-ಶ್ರೇಯಸ್​​​ ಏಷ್ಯಾಕಪ್ ಟೂರ್ನಿಗೆ ಫಿಟ್​ ಆಗದೇ ಹೋದರೆ ಟೀಮ್ ಇಂಡಿಯಾದ ಬ್ಯಾಟಿಂಗ್​​ ಆರ್ಡರ್ ಕಂಪ್ಲೀಟ್ ಬದಲಾಗಲಿದೆ. ಇಶಾನ್ ಕಿಶನ್ ಆಡಿದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಗ ಶುಭ್​​ಮನ್ ಗಿಲ್​​ 3 ಕ್ರಮಾಂಕದಲ್ಲಿ ಆಡಬೇಕಾಗುತ್ತೆ. ಒಂದು ವೇಳೆ ಮ್ಯಾನೇಜ್​​ಮೆಂಟ್​​ ಗಿಲ್​ರನ್ನ ಮೂರರಲ್ಲಿ ಆಡಿಸಿದ್ರೆ ಕಿಂಗ್ ಕೊಹ್ಲಿ ಸ್ಲಾಟ್​​​​ ಬಿಟ್ಟುಕೊಟ್ಟು ಕೆಳಕ್ರಮಾಂಕದಲ್ಲಿ ಆಡಬೇಕಾಗುತ್ತೆ. ಇದು ಕಷ್ಟವೆನಿಸಿದ್ರೂ ತಂಡಕ್ಕಾಗಿ ಕೊಹ್ಲಿ ಸ್ಲಾಟ್​​​​-3 ಅನ್ನ ತ್ಯಾಗ ಮಾಡಲೇಬೇಕಾಗುತ್ತೆ.

ಟೀಮ್ ಇಂಡಿಯಾ ಮುಂದಿರೋ ಬೇರೆ ಆಯ್ಕೆಗಳೇನು..?

ಬದಲಾವಣೆಗೆ ಕೈಹಾಕದೇ ಕೊಹ್ಲಿಯನ್ನ ನಂ.3 ಸ್ಲಾಟ್​​ನಲ್ಲೇ ಆಡಿಸಿದ್ರೆ ಆಗ ಹಾರ್ದಿಕ್​ ಪಾಂಡ್ಯ 4ನೇ ಸ್ಥಾನಕ್ಕೆ ಬಡ್ತಿ ಪಡಿಯಬೇಕು. ವೈಸ್​ ಕ್ಯಾಪ್ಟನ್​​ಗೆ​​​​​ ಐಪಿಎಲ್​ ಹಾಗೂ ಭಾರತ ಪರ 4ನೇ ಕ್ರಮಾಂಕದಲ್ಲಿ ಆಡಿದ ಅನುಭವಿದೆ. ರೋಹಿತ್​ ಜೊತೆ ಗಿಲ್​​​ ಓಪನ್ ಮಾಡಿದ್ರೆ ಸೂರ್ಯ ಅಥವಾ ಸ್ಯಾಮ್ಸನ್​​​ ಪೈಕಿ ಒಬ್ಬರು ಸ್ಲಾಟ್​​​-6 ರಲ್ಲಿ ಕಣಕ್ಕಿಳಿಬೇಕಾಗುತ್ತೆ.

ರಾಹುಲ್​​​-ಶ್ರೇಯಸ್​ ಫಿಟ್ನೆಸ್ ಮೇಲೆ ಕಿಂಗ್ ಕೊಹ್ಲಿಯ ಸ್ಲಾಟ್​​ ಡಿಸೈಡ್ ಆಗಲಿದೆ. ಮಾಡ್ರನ್ ಕ್ರಿಕೆಟ್​ ದೊರೆ ತ್ಯಾಗಮಯಿ ಅನ್ನಿಸಿಕೊಳ್ತರಾ? ಇಲ್ವ ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಆನ್ಸರ್ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಈ ಯುವ ಪ್ಲೇಯರ್ಸ್​ಗಾಗಿ ನಂಬರ್- 3 ಪ್ಲೇಸ್​ ತ್ಯಾಗ ಮಾಡ್ತಾರಾ ವಿರಾಟ್‌ ಕೊಹ್ಲಿ..?

https://newsfirstlive.com/wp-content/uploads/2023/08/VIRAT_KOHLI-8.jpg

Load More