newsfirstkannada.com

×

IPL 2025: ಕಪ್​​ ಗೆಲ್ಲೋ ನಿರೀಕ್ಷೆಯಲ್ಲಿದ್ದ ಆರ್​​​ಸಿಬಿಗೆ ಬಿಗ್​ ಶಾಕ್​​ ಕೊಟ್ಟ ಕೊಹ್ಲಿ

Share :

Published September 16, 2024 at 4:37pm

Update September 16, 2024 at 5:25pm

    ಭಾರತ ತಂಡದ ಮಾಜಿ ಕ್ಯಾಪ್ಟನ್​​ ವಿರಾಟ್ ಕೊಹ್ಲಿಗೆ ಬ್ರಿಟಿಷ್‌ ಪೌರತ್ವ?

    ಸದ್ಯದಲ್ಲೇ ಭಾರತ ತೊರೆದು ಲಂಡನ್​ಗೆ ಶಿಫ್ಟ್​ ಆಗ್ತಾರಾ ವಿರಾಟ್​ ಕೊಹ್ಲಿ?

    ಬ್ರಿಟಿಷ್‌ ಪೌರತ್ವದ ಸುದ್ದಿ ಬೆನ್ನಲ್ಲೇ ಆರ್​​​ಸಿಬಿ ಅಭಿಮಾನಿಗಳಿಗೆ ಬಿಗ್​ ಶಾಕ್​​​

ಭಾರತ ತಂಡದ ಮಾಜಿ ಕ್ಯಾಪ್ಟನ್​​ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಲಂಡನ್‌ಗೆ ಶಿಫ್ಟ್ ಆಗಲಿದ್ದಾರೆ ಅನ್ನೋ ವದಂತಿಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಟಿ20 ವಿಶ್ವಕಪ್ ಗೆದ್ದ ಬಳಿಕ ಕೊಹ್ಲಿ ಮುಂಬೈನಿಂದ ಲಂಡನ್‌ಗೆ ತೆರಳಿದ್ದಾರೆ. ಯಾವುದಾದ್ರೂ ಟೂರ್ನಮೆಂಟ್​ ಇದ್ದಾಗ ಲಂಡನ್​​ನಿಂದಲೇ ಕೊಹ್ಲಿ ಭಾರತಕ್ಕೆ ಟ್ರಾವೆಲ್​ ಮಾಡುತ್ತಿದ್ದಾರೆ. ಹಾಗಾಗಿ ಈ ಚರ್ಚೆ ಜೋರಾಗಿದೆ.

ಕೊಹ್ಲಿ ಪತ್ನಿ ಅನುಷ್ಕಾ ಮತ್ತವರ ಮಕ್ಕಳಾದ ಅಕಾಯ್, ವಾಮಿಕಾ ಲಂಡನ್​​ನಲ್ಲೇ ಇದ್ದಾರೆ. ಸದ್ಯ ಕೊಹ್ಲಿ ಆಗಾಗ ಲಂಡನ್​ಗೆ ಹೋಗಿ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಕುಟುಂಬ ಲಂಡನ್​​ನಲ್ಲೇ ನೆಲೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ವಿರಾಟ್​​ ಐಪಿಎಲ್​​ ಆಡೋದು ಡೌಟಾ?

ಕೊಹ್ಲಿ ಬ್ರಿಟಿಷ್ ಪ್ರಜೆಯಾದರೆ, ಐಪಿಎಲ್ 2025ರಲ್ಲಿ ಭಾಗವಹಿಸಲು ಕಷ್ಟ ಆಗಬಹುದು. ಇಂಡಿಯನ್​ ಪ್ರೀಮಿಯರ್​​ ಲೀಗ್​ ಬಿಸಿಸಿಐ ನಿಯಂತ್ರಣದಲ್ಲಿದ್ದು, ಈ ಟೂರ್ನಿಯಲ್ಲಿ ಭಾಗಿಯಾಗಲು ನಿರ್ದಿಷ್ಟ ನಿಯಮಗಳು ಇವೆ. ಪೌರತ್ವಕ್ಕಿಂತ ಹೆಚ್ಚಾಗಿ ಪ್ರಾತಿನಿಧ್ಯದ ದೇಶದ ಆಧಾರದ ಮೇರೆಗೆ ಐಪಿಎಲ್​ ಆಡಬೇಕಾಗುತ್ತದೆ. ಬ್ರಿಟನ್​​ ಪ್ರಜೆಯಾದ್ರೂ ಕೊಹ್ಲಿ ಕ್ರಿಕೆಟ್​​ನಲ್ಲಿ ಭಾರತ ತಂಡವನ್ನೇ ಪ್ರತಿನಿಧಿಸಿದ್ರೆ ಐಪಿಎಲ್​​ ಆಡಲು ಕಷ್ಟ ಆಗುವುದಿಲ್ಲ. ಅವರು ಭಾರತವನ್ನು ಪ್ರತಿನಿಧಿಸದೆ ಹೋದಲ್ಲಿ ಐಪಿಎಲ್​ ಆಡುವುದು ಕಷ್ಟವಾಗಲಿದೆ ಎಂದು ವರದಿಯಾಗಿದೆ.

ಕೊಹ್ಲಿ ವಿದೇಶಿ ಪೌರತ್ವ ಪಡೆಯುವುದು ಹೇಗೆ?

ವಿರಾಟ್​ ಕೊಹ್ಲಿ ಬ್ರಿಟಿಷ್ ಪೌರತ್ವ ಪಡೆಯಲು ಆನ್​ಲೈನ್​ ಅರ್ಜಿ ಸಲ್ಲಿಸಬೇಕು. ಈ ಫಾರ್ಮ್​​ಗೆ 80 ಪೌಂಡ್​ಗಳು ನೀಡಬೇಕು. ಈ ಪ್ರಕ್ರಿಯೆಯಲ್ಲಿ ಅಗತ್ಯವಿರೋ ವೈಯಕ್ತಿಕ ಮಾಹಿತಿ ಮತ್ತು ಬಯೋಮೆಟ್ರಿಕ್ ಡೇಟಾ ಒದಗಿಸಬೇಕು.

ಇದನ್ನೂ ಓದಿ: ಧೋನಿ ಫ್ಯಾನ್ಸ್​ಗೆ ಶುರುವಾಯ್ತು ಢವಢವ.. ಬಿಸಿಸಿಐ ಕೋರ್ಟ್​ನಲ್ಲಿ ತಲಾ IPL ಭವಿಷ್ಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPL 2025: ಕಪ್​​ ಗೆಲ್ಲೋ ನಿರೀಕ್ಷೆಯಲ್ಲಿದ್ದ ಆರ್​​​ಸಿಬಿಗೆ ಬಿಗ್​ ಶಾಕ್​​ ಕೊಟ್ಟ ಕೊಹ್ಲಿ

https://newsfirstlive.com/wp-content/uploads/2024/08/VIRAT-KOHLI-1-1.jpg

Load More