ಹೇಗಿತ್ತು ಗೊತ್ತಾ ಪಾಕ್ ವಿರುದ್ಧ ವಿರಾಟ್ ಆರ್ಭಟ..?
‘ವಿರಾಟ ರೂಪ’ ಕಂಡು ಬಳಲಿ ಬೆಂಡಾದ ಪಾಕಿಸ್ತಾನ
ಸಚಿನ್ ತೆಂಡುಲ್ಕರ್ ಹಿಂದಿಕ್ಕಿದ ವಿರಾಟ್ ಕೊಹ್ಲಿ..!
ಮಳೆಯ ಕಾಟಕ್ಕೆ ಬೇಸತ್ತರೂ ಪಂದ್ಯ ನೋಡಲು ಕಾದು ಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ, ಕಿಂಚಿತ್ತೂ ಮೋಸವಾಗಲಿಲ್ಲ. ಯಾರ ಆಟಕ್ಕಾಗಿ ಅಭಿಮಾನಿಗಳು ಕಾದಿದ್ರೋ ಆ ಭರ್ಜರಿ ಧಮಾಕಾ ಸಿಕ್ಕಿದೆ. ಕೊಲಂಬೋಗೆ ಕೊಹ್ಲಿಯೇ ಕಿಂಗ್ ಅನ್ನೋದು ಮತ್ತೆ ಪ್ರೂವ್ ಆಯ್ತು. ಬದ್ಧವೈರಿ ಪಾಕಿಸ್ತಾನಕ್ಕೆ ವಿರಾಟ ರೂಪ ದರ್ಶನವೂ ಆಗಿದೆ.
‘ವಿರಾಟ ರೂಪ’ ಕಂಡು ಬಳಲಿ ಬೆಂಡಾದ ಪಾಕಿಸ್ತಾನ
ಇಂಡೋ-ಪಾಕ್ ಪಂದ್ಯ ನೋಡಲು ಕಾದು ಕಾದು ಬೇಸರಗೊಂಡಿದ್ದ ಅಭಿಮಾನಿಗಳಿಗೆ, ಪಂದ್ಯ ಪುನಾರಂಭ ಆದ ಮೇಲೆ ಸಿಕ್ಕಿದ್ದು, ಭರ್ಜರಿ ಮನರಂಜನೆ. ಹೈವೋಲ್ಟೆಜ್ ಕದನದಲ್ಲಿ ಎಲ್ಲರ ಕಣ್ಣಿದ್ದಿದ್ದೇ, ಕಿಂಗ್ ವಿರಾಟ್ ಕೊಹ್ಲಿ ಮೇಲೆ! ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ರೂ ಕೊಹ್ಲಿ ಆಟವನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿದ್ದರು. ಫ್ಯಾನ್ಸ್ ಇಟ್ಟಿದ್ದ ನಿರೀಕ್ಷೆಯನ್ನು ಕೊಹ್ಲಿ, ಹುಸಿಗೊಳಿಸಲಿಲ್ಲ. ಪಾಕಿಸ್ತಾನಕ್ಕೆ ವಿರಾಟರೂಪ ದರ್ಶನ ಮಾಡಿಸಿದರು.
ಮಹತ್ವದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ರೌದ್ರಾವತಾರ
ಮೊದಲ ದಿನದಾಟದಲ್ಲಿ ಸೇಫ್ ಗೇಮ್ ಮೊರೆ ಹೋಗಿದ್ದ ಕೊಹ್ಲಿ, ನಿನ್ನೆಯ ದಿನದಾಟದ ಆರಂಭದಲ್ಲೂ ತಾಳ್ಮೆಯ ಆಟವಾಡಿದ್ರು. ಎಚ್ಚರಿಕೆಯ ತಂತ್ರ ಅನುಸರಿಸಿದ ಕೊಹ್ಲಿ, ಕ್ರಿಸ್ನಲ್ಲಿ ಸೆಟ್ ಆದ ಕೂಡಲೇ ರೌದ್ರಾವತಾರ ತಾಳಿದರು. ಆ ಬಳಿಕ ಹರಿದಿದ್ದು, ರನ್ ಹೊಳೆ. ಬೌಂಡರಿಗಳನ್ನು ಸಿಡಿಸಿ ಕೊಹ್ಲಿ ಆಬ್ಬರಿಸುತ್ತಿದ್ದರೆ, ದಿಕ್ಕೇ ತೋಚದೆ ಪಾಕ್ ಪಡೆ, ಕಂಗಾಲಾಗಿತ್ತು.
ಅರ್ಧಶತಕದಿಂದ ಶತಕಕ್ಕೆ ಜಸ್ಟ್ 29 ಎಸೆತ
ವಿರಾಟ್ ಕೊಹ್ಲಿಯ ರಣಾರ್ಭಟ ಹೇಗಿತ್ತು ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ್ದು 55 ಎಸೆತಗಳಲ್ಲಿ. ಹಾಫ್ ಸೆಂಚುರಿಯಿಂದ ಸೆಂಚುರಿಗೆ ತಲುಪಿದ್ದು ಜಸ್ಟ್ 29 ಎಸೆತಗಳಲ್ಲಿ. ಅಂದ್ರೆ ಮಾಡ್ರನ್ ಡೇ ಕ್ರಿಕೆಟ್ ದೊರೆ ಶತಕ ಸಾಧನೆ ಮಾಡಿದ್ದು ಕೇವಲ 84 ಎಸೆತಗಳಲ್ಲಿ.
ವಿರಾಟ್ ಕೊಹ್ಲಿ ಇನ್ನಿಂಗ್ಸ್
ಪಂದ್ಯದಲ್ಲಿ 94 ಎಸೆತಗಳನ್ನು ಎದುರಿಸಿದ ಕೊಹ್ಲಿ, ಅಜೇಯ 122 ರನ್ ಸಿಡಿಸಿದರು. 129.79ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ, 9 ಬೌಂಡರಿ, 3 ಸಿಕ್ಸರ್ ಸಿಡಿಸಿದರು.
ಕೊಲಂಬೋಗೆ ಕೊಹ್ಲಿಯೇ ಕಿಂಗ್.. ಡೌಟೇ ಬೇಡ
ಪಾಕಿಸ್ತಾನ ವಿರುದ್ಧ ಅಬ್ಬರದ ಶತಕ ಸಿಡಿಸಿದ ಕೊಹ್ಲಿ, ಕೊಲಂಬೋಗೆ ನಾನೇ ಕಿಂಗ್ ಅನ್ನೋದನ್ನು ಮತ್ತೆ ಪ್ರೂವ್ ಮಾಡಿದ್ರು. ಪ್ರೇಮದಾಸ ಮೈದಾನದಲ್ಲಿ ಸತತ 4ನೇ ಶತಕ ಸಿಡಿಸಿದ ಅಪೂರ್ವ ಸಾಧನೆ ಮಾಡಿದ್ರು. ಇಷ್ಟೇ ಅಲ್ಲ.. ಕೊಲಂಬೋ ಮೈದಾನದಲ್ಲಿ ರನ್ಗಳಿಕೆಯ ಸರಾಸರಿ ಲೆಕ್ಕಾಚಾರದಲ್ಲಿ ಕೊಹ್ಲಿ ಕಿಂಗ್. ಶ್ರೀಲಂಕಾದ ದಿಗ್ಗಜ ಆಟಗಾರರೂ ಕೂಡ ಕೊಹ್ಲಿಯ ಆರ್ಭಟದ ಮುಂದೆ ಸೈಡ್ಲೈನ್ ಆಗಿದ್ದಾರೆ.
ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಈವರೆಗೆ 9 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ 641 ರನ್ಗಳಿಸಿದ್ದಾರೆ. 128.20ರ ಸರಾಸರಿಯಲ್ಲಿ ರನ್ಗಳಿಸಿರೋ ಕೊಹ್ಲಿ, 4 ಶತಕ, 1 ಅರ್ಧಶತಕ ಸಿಡಿಸಿದ್ದಾರೆ.
ಸಚಿನ್ ತೆಂಡುಲ್ಕರ್ ಹಿಂದಿಕ್ಕಿದ ವಿರಾಟ್..!
ಪಾಕಿಸ್ತಾನ ವಿರುದ್ಧದ ಕದನದಲ್ಲಿ ಸಚಿನ್ ತೆಂಡುಲ್ಕರ್ರ ಮತ್ತೊಂದು ದಾಖಲೆಯನ್ನೂ ಕೊಹ್ಲಿ ಬ್ರೇಕ್ ಮಾಡಿದರು. ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 13 ಸಾವಿರ ರನ್ ಪೂರೈಸಿದ ಮಹತ್ವದ ದಾಖಲೆಯನ್ನು ವಿರಾಟ್ ಕೊಹ್ಲಿ ಕಬ್ಜ ಮಾಡಿದರು. ಇಷ್ಟು ದಿನ ಈ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಲ್ಲಿತ್ತು. ಸಚಿನ್ 321 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ರೆ ಕೊಹ್ಲಿ ಜಸ್ಟ್ 267 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಮಳೆ ಕಾಟದಿಂದ ಬೇಸತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಕಿಂಗ್ ಕೊಹ್ಲಿ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡದ್ದಂತೂ ಸುಳ್ಳಲ್ಲ. ಒಟ್ಟಿನಲ್ಲಿ ನಿನ್ನೆ ಪಾಕಿಸ್ತಾನ ಪಡೆಯ ಬೆವರಿಳಿಸಿರುವ ವಿರಾಟ್, ಇವತ್ತು ಮತ್ತೆ ಸಿಂಹಳೀಯರ ಬೇಟೆಯಾಡಿದ್ರೂ ಅಚ್ಚರಿ ಪಡುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್