newsfirstkannada.com

Kohli: ಚಿನ್ನಸ್ವಾಮಿಯಲ್ಲಿ 4 ‘ಚಿನ್ನ’ದಂತ ಶತಕ; 7 ವರ್ಷಗಳಲ್ಲಿ 7 ಶತಕಗಳ ವೈಭವ ಮೆರೆದ ವಿರಾಟ್​​

Share :

22-05-2023

    IPL ಟೆರಿಟರಿಗೆ ವಿರಾಟ್ ಕೊಹ್ಲಿ ಅಧಿಪತಿ..!

    ಚಿನ್ನಸ್ವಾಮಿಯಲ್ಲಿ ಕೊಹ್ಲಿ ಸೆಂಚುರಿ  ಶೋ..!

    ಖುಷಿ ತಾಳಲಾರದೇ ಪ್ಲೈಯಿಂಗ್​ ಕಿಸ್ ಕೊಟ್ಟ ಅನುಷ್ಕಾ ಶರ್ಮಾ

ಸೆಂಚುರಿ ಸ್ಪೆಶಲಿಸ್ಟ್​​. ಶತಕಗಳ ಸಾಮ್ರಾಟ. ದಾಖಲೆಗಳ ಒಡೆಯ. ಅದು ಮತ್ಯಾರು ಅಲ್ಲ. ಒನ್ ಆ್ಯಂಡ್ ಒನ್ಲಿ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಇರೋದೆ ದಾಖಲೆ ದಮನ ಮಾಡೋಕೆ ಅನ್ನೋ ಮಾತಿದೆ. ಅದು ಹಂಡ್ರೆಂಡ್​​ ಪರ್ಸಂಟ್​ ನಿಜ. ವಿರಾಟ್ ಐಪಿಎಲ್​​​ ಕಾ ಬಾದ್​​ಷಾ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.

ರಾಕಿಬಾಯ್ ಕೆಜಿಎಫ್​​​ ಟೆರಿಟರಿಗೆ ಅಧಿಪತಿಯಾದ್ರೆ ಐಪಿಎಲ್​ ಟೆರಿಟರಿಗೆ ವಿರಾಟ್ ಕೊಹ್ಲಿನೇ ಸುಲ್ತಾನ್​​​.! ವಿಶ್ವ ಕ್ರಿಕೆಟ್​​ನ ರೂಲರ್​ ಈಗ ಐಪಿಎಲ್​​​​​​ ಸಾಮ್ರಾಜ್ಯವನ್ನ ಸಂಪೂರ್ಣ ಕಬ್ಜಾ ಮಾಡಿದ್ದಾರೆ.

IPL ಟೆರಿಟರಿಗೆ ವಿರಾಟ್ ಕೊಹ್ಲಿ ಅಧಿಪತಿ..!

ಅಬ್ಬಬ್ಬಾ ಅದೇ ಟೆರರ್​ ಬ್ಯಾಟಿಂಗ್ ಅಂತೀರ? ನಿಜಕ್ಕೂ ಚಿಂದೀನೆ ಬಿಡಿ..ಕಿಂಗ್ ಕೊಹ್ಲಿ ಅಂದ್ರೆ ಸುಮ್ಮನೇನಾ ಹೇಳಿ. ಸಿಡಿಗುಂಡಿನಂತೆ ಗುಡುಗಿದ ವಿರಾಟ್ ನಾಲ್ಕೇ ದಿನದಲ್ಲಿ ಮತ್ತೊಂದು ಶತಕ ಸಿಡಿಸಿ ರಾರಾಜಿಸಿದ್ರು.

ಚಿನ್ನಸ್ವಾಮಿಯಲ್ಲಿ ಕೊಹ್ಲಿ ಸೆಂಚುರಿ  ಶೋ..!

ರನ್​​             –        101

ಎಸೆತ           –        61

ಸ್ಟ್ರೈಕ್​ರೇಟ್​ –        165.57

4/6             –        13/01

ಗುಜರಾತ್ ಬೌಲರ್​​ಗಳಿಗೆ ಅಕ್ಷರಶಃ ನರಕ ದರ್ಶನ ಮಾಡಿದ ಕೊಹ್ಲಿ ಕೇವಲ 61 ಎಸೆತಗಳಲ್ಲಿ ಸ್ಪೋಟಕ ಶತಕ ಬಾರಿಸಿದ್ರು. ಅದು 165.57ರ ಸ್ಟ್ರೈಕ್​ರೇಟ್​​ನಲ್ಲಿ. ಇವರ ಇನ್ನಿಂಗ್ಸ್​​ನಲ್ಲಿ 1 ಸಿಕ್ಸ್, 13 ಬೌಂಡ್ರಿಗಳು ಮೂಡಿ ಬಂದ್ವು.

ಈ ಭರ್ಜರಿ ಸೆಂಚುರಿಯೊಂದಿಗೆ ಕಿಂಗ್ ಕೊಹ್ಲಿ ಐಪಿಎಲ್ ಹಿಸ್ಟರಿಯಲ್ಲಿ ಅತ್ಯಧಿಕ 7ನೇ ಶತಕ ಸಿಡಿಸಿದಂತಾಗಿದೆ. ಆ ಮೂಲಕ ಕ್ರಿಸ್ ಗೇಲ್​​​​​ ದಾಖಲೆಯನ್ನ ಪುಡಿಗಟ್ಟಿದ್ದಾರೆ.

IPL ನಲ್ಲಿ ಗರಿಷ್ಠ ಶತಕ..!

ಆಟಗಾರರು           –        ಶತಕಗಳು

ಕೊಹ್ಲಿ                    –        07

ಕ್ರಿಸ್ ಗೇಲ್​            –        06

ಜೋಶ್​ ಬಟ್ಲರ್      –        05

ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ 7 ಶತಕ ಹೊಡೆದ್ರೆ, ಕ್ರಿಸ್ ಗೇಲ್ 6 ಹಾಗೂ ಜೋಶ್ ಬಟ್ಲರ್​ 5 ಶತಕ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ.

ಕಿಂಗ್ ಕೊಹ್ಲಿ ಚಿನ್ನಸ್ವಾಮಿ ಅಂಗಳದಲ್ಲಿ ಸೆಂಚುರಿ ಸಿಡಿಸಿದ್ದೇ ತಡ ಪತ್ನಿ ಅನುಷ್ಕಾ ಶರ್ಮಾ ಸಂತೋಷಕ್ಕೆ ಪಾರವೇ ಇರ್ಲಿಲ್ಲ. ಇದೇ ಖುಷಿಯಲ್ಲಿ ಸ್ಟ್ಯಾಂಡ್​ನಿಂದಲೇ ಮುದ್ದಿನ ಗಂಡನಿಗೆ ಪ್ಲೈಯಿಂಗ್​ ಕಿಸ್​​ ಕೊಟ್ಟರು.

ಚಿನ್ನಸ್ವಾಮಿಯಲ್ಲಿ ‘ಚಿನ್ನ’ದಂತ 4 ಶತಕ

ಕೊಹ್ಲಿ ದಾಖಲಿಸಿರೋ 7 ಶತಗಳ ಪೈಕಿ 4 ಸೆಂಚುರೀಸ್​ ನೆಚ್ಚಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಮೂಡಿ ಬಂದಿವೆ. ಇನ್ನು ಒಟ್ಟು ಶತಕಗಳು ಜಸ್ಟ್​ 7 ವರ್ಷಗಳ ಅವಧಿಯಲ್ಲಿ ಮೂಡಿ ಬಂದಿವೆ ಅನ್ನೋದು ವಿಶೇಷ.

2016 ರಲ್ಲಿ ಶುರುವಾದ ಕೊಹ್ಲಿಯ ಸೆಂಚುರಿ ದರ್ಬಾರ್​​​, ಅದೇ ವರ್ಷ ಬರೋಬ್ಬರಿ 4 ಶತಕಗಳನ್ನ ಹೊಡೆದು ಸೈ ಅನ್ನಿಸಿಕೊಂಡ್ರು. 5ನೇ ಶತಕ 2019 ರಲ್ಲಿ ಮೂಡಿ ಬಂದಿತ್ತು. ಇನ್ನು 6 ಮತ್ತು 7ನೇ ಶತಕ ಪ್ರಸಕ್ತ ಸೀಸನ್​​​ನಲ್ಲೇ ಬಾರಿಸಿದ್ದಾರೆ.

ಎನಿವೇ ಕೊಹ್ಲಿ ಇರೋದೆ ದಾಖಲೆಗಳನ್ನ ದಮನ ಮಾಡೋದಕ್ಕೆ ಅನ್ನೋ ಟಾಕ್ಸ್ ಕ್ರಿಕೆಟ್ ಪಡಸಾಲೆಯಲ್ಲಿದೆ. ಆ ಮಾತಿನಂತೆ ವಿರಾಟ್ ದಾಖಲೆಗಳ ಮೇಲೆ ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಳ್ತಿದ್ದಾರೆ. ರಿಯಲಿ ಕಿಂಗ್ ಕೊಹ್ಲಿ, ಸೆಂಚುರಿ ಸ್ಪೆಶಲಿಸ್ಟೇ ಹೌದು ಬಿಡಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Load More