ಕಿವೀಸ್ ಬೌಲರ್ಸ್ ಗಲಿಬಿಲಿ.. ಕಾರಣ ಕಿಂಗ್ ಕೊಹ್ಲಿ..
ಪ್ರೆಶರ್ ಅಂದ್ರೆ ಪ್ರಾಣ.. ಚೇಸಿಂಗ್ ಅಂದ್ರೆ ಜೀವ
ಕೊಹ್ಲಿಯ ಆಟವೇ ಅಭಿಮಾನಿಗಳ ಭರವಸೆ
ಟಾರ್ಗೆಟ್ ಎಷ್ಟೇ ದೊಡ್ಡದಿರಲಿ. ಎದುರಾಳಿ ಯಾರೇ ಇರಲಿ. ಎಂಥ ಪ್ರೆಶರ್ ಗೇಮ್ ಆಗಿರಲಿ. ಎಷ್ಟೇ ದೊಡ್ಡ ಬಿಗ್ ಟೂರ್ನಮೆಂಟ್ ಆಗಿರಲಿ.. ಕೊಹ್ಲಿ ಕಣದಲ್ಲಿದ್ರೆ ಗೆಲುವು ನಮ್ಮದೇ. ಅಸಂಖ್ಯ ಅಭಿಮಾನಿಗಳ ಮನದ ಈ ಮಾತು ನಿನ್ನೆ ಮತ್ತೆ ಪ್ರೂವ್ ಆಯ್ತು. ಧರ್ಮಶಾಲಾದಲ್ಲಿ ಕಿಂಗ್ ದರ್ಬಾರ್ ನಡೆಸಿಯೇ ಬಿಟ್ಟರು.
ನಿನ್ನೆಯ ಇಂಡೋ-ಕಿವೀಸ್ ಫೈಟ್ ಟೀಮ್ ಇಂಡಿಯಾದ ಪ್ರತಿಷ್ಟೆಯ ಕದನವಾಗಿತ್ತು. 2019 ಸೆಮೀಸ್ ಸೋಲಿನ ಸೇಡು ಮಾತ್ರವಲ್ಲ. 2003ರಿಂದ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಿಲ್ಲ ಎಂಬ ಅಪಖ್ಯಾತಿಗೆ ಫುಲ್ ಸ್ಟಾಪ್ ಇಡಲು ಟೀಮ್ ಇಂಡಿಯಾ ಪಣ ತೊಟ್ಟಿತ್ತು. ಇಟ್ಟ ಗುರಿ, ತೊಟ್ಟ ಪಣವನ್ನು ತಲುಪೇ ಬಿಡ್ತು. ಇದ್ರ ಹಿಂದಿನ ಕಲೆಗಾರ ಕೊಹ್ಲಿ.
ಕಿವೀಸ್ ಬೌಲರ್ಸ್ ಗಲಿಬಿಲಿ.. ಕಾರಣ ಕಿಂಗ್ ಕೊಹ್ಲಿ
273 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭವನ್ನೇ ಪಡೀತು. ಆದರೆ ಧಿಡೀರ್ ಸಂಕಷ್ಟಕ್ಕೆ ಸಿಲುಕಿತು. ಅತಿರಥ ಮಹಾರಥರು ಪೆವಿಲಿಯನ್ ಪರೇಡ್ ನಡೆಸಿದ್ರು. ಆಗ ತಂಡದ ಕೈ ಹಿಡಿದಿದ್ದು ಒನ್ಸ್ ಅಗೇನ್ ಚೇಸ್ ಮಾಸ್ಟರ್, ಟೀಮ್ ಇಂಡಿಯಾ ಪಾಲಿನ ಸಂಕಷ್ಟಹರ ಕಿಂಗ್ ಕೊಹ್ಲಿ.
ಧರ್ಮಶಾಲಾದಲ್ಲಿ ದರ್ಬಾರ್ ನಡೆಸಿದ ಕಿಂಗ್
ನಿನ್ನೆ ಧರ್ಮಶಾಲಾದಲ್ಲಿ ಕಿಂಗ್ ಕೊಹ್ಲಿ ಅಕ್ಷರಶಃ ನಡೆಸಿದ್ದು ದರ್ಬಾರ್. ವಿರಾಟ್ ಕೊಹ್ಲಿಯ ಆಟಕ್ಕೆ ನ್ಯೂಜಿಲೆಂಡ್ ಪಡೆ ಬೆಚ್ಚಿ ಬಿತ್ತು.. ಇನ್ನಿಂಗ್ಸ್ನಲ್ಲಿ ಕೇವಲ ಬೌಂಡರಿ- ಸಿಕ್ಸರ್ಗಳ ಅಬ್ಬರ ಮಾತ್ರ ಇರಲಿಲ್ಲ. ತಾಳ್ಮೆ ಮಂತ್ರವನ್ನೂ ಕೊಹ್ಲಿ ಪಠಿಸಿದ್ರು. ಸಿಂಗಲ್, ಟೂಡಿ.. ಪ್ರತಿಯೊಂದು ರನ್ಗಳಿಸಿದಾಗಲೂ ಗೆಲ್ಲುವ ಗುರಿ ಸ್ಪಷ್ಟವಾಗಿ ಗೊತ್ತಾಗ್ತಿತ್ತು.
ಹಿಮಾಚಲದಲ್ಲಿ ವಿರಾಟ್ ವಿರೋಚಿತ ಹೋರಾಟ
ಟೀಮ್ ಇಂಡಿಯಾದ ಗೆಲುವಿಗೆ ಟೊಂಕ ಕಟ್ಟಿ ನಿಂತ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಬೌಲರ್ಗಳ ಮೇಲೆ ಸವಾರಿ ಮಾಡಿದ್ರು. ಕೊಹ್ಲಿ ಆಟ ನ್ಯೂಜಿಲೆಂಡ್ ಪಾಳೆಯಕ್ಕೆ ಟೆನ್ಶನ್ ತಂದಿಟ್ರೆ, ಫ್ಯಾನ್ಸ್ಗಂತೂ ಸಖತ್ ಟ್ರೀಟ್ ಸಿಗ್ತು. ಸೆಂಚುರಿ ಸಿಡಿಸಲಿಲ್ಲ ನಿಜ. ಆದ್ರೆ ಆ ವಿರೋಚಿತ ಹೋರಾಟ ನೂರು ಶತಕಗಳಿಗೆ ಸಮವಾಗಿತ್ತು. 104 ಎಸೆತಗಳನ್ನ ಎದುರಿಸಿದ ವಿರಾಟ್ ಕೊಹ್ಲಿ 8 ಮನಮೋಹಕ ಬೌಂಡರಿ, 2 ಭರ್ಜರಿ ಸಿಕ್ಸರ್ ಸಿಡಿಸಿದ್ರು. 95 ರನ್ಗಳ ಸಾಲಿಡ್ ಇನ್ನಿಂಗ್ಸ್ ಕಟ್ಟಿದ್ರು.
ಪ್ರೆಶರ್ ಅಂದ್ರೆ ಪ್ರಾಣ..ಚೇಸಿಂಗ್ ಅಂದ್ರೆ ಜೀವ
ನಿನ್ನೆಯ ಇನ್ನಿಂಗ್ಸ್ ವಿರಾಟ್ ಕೊಹ್ಲಿಗೆ ಹೇಳಿ ಮಾಡಿಸಿದಂತಿತ್ತು. ಗೆಲ್ಲಲೇಬೇಕು ಅನ್ನೋ ಒತ್ತಡ ಒಂದಾದ್ರೆ ತಾನೇ ಮಾಡಿದ ತಪ್ಪಿಗೆ ಸೂರ್ಯ ಕುಮಾರ್ ರನೌಟ್ ಆದ ಕೊರಗು ಇನ್ನೊಂದೆಡೆ. ಈ ಒತ್ತಡವನ್ನು ರನ್ಮಷೀನ್ ಸಮರ್ಥವಾಗಿ ನಿಭಾಯಿಸಿದ್ರು. ಸಕ್ಸಸ್ಫುಲ್ ಚೇಸ್ ಮಾಡಿ ಚೇಸಿಂಗ್ ಮಾಸ್ಟರ್ ಅನ್ನೋದನ್ನು ಮತ್ತೊಮ್ಮೆ ನಿರೂಪಿಸಿದರು.
ಕೊಹ್ಲಿಯ ಆಟವೇ ಅಭಿಮಾನಿಗಳ ಭರವಸೆ
5 ಪಂದ್ಯ, 340 ರನ್, ಬರೋಬ್ಬರಿ 170 ಸರಾಸರಿ, 1 ಸೆಂಚುರಿ, 3 ಹಾಫ್ ಸೆಂಚುರಿ. ಇದು ವಿರಾಟ್ ಕೊಹ್ಲಿಯ ಈ ಟೂರ್ನಿಯ ಟ್ರ್ಯಾಕ್ ರೆಕಾರ್ಡ್. ಟೂರ್ನಿಯ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿರುವ ವಿರಾಟ್ ಕೊಹ್ಲಿ ಸದ್ಯ ಕೊಟ್ಯಂತರ ಅಭಿಮಾನಿಗಳ ಭರವಸೆಯಾಗಿದ್ದಾರೆ. ಕೊಹ್ಲಿಯ ರೆಡ್ ಹಾಟ್ ಫಾರ್ಮ್ ನೋಡಿ ಚಾಂಪಿಯನ್ ಪಟ್ಟ ನಮ್ದೇ ಎಂದು ಫ್ಯಾನ್ಸ್ ಹೇಳ್ತಿದ್ದಾರೆ. ಅಭಿಮಾನಿಗಳ ಕನಸನ್ನು ಕೊಹ್ಲಿ ಈಡೇರಿಸಲಿ ಅನ್ನೋದೇ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್