newsfirstkannada.com

ಯೋ-ಯೋ ಟೆಸ್ಟ್​; ಜಸ್ಟ್​ ಪಾಸ್ ಆದ ಫಿಟ್ನೆಸ್ ಹೀರೋ ವಿರಾಟ್ ಕೊಹ್ಲಿ.. ಫ್ಯಾನ್ಸ್​ಗೆ ಬೇಸರ ​​​​​​​​​​​​​​​​​​

Share :

25-08-2023

  ಫಿಟ್ನೆಸ್​ನಲ್ಲಿ ವಿರಾಟ್​ ಕೊಹ್ಲಿ ಕುಗ್ಗುತ್ತಿರುವುದು ನಿಜನಾ..?

  ವಿಶ್ವಕಪ್​​ ಬಳಿಕ 1 ಫಾರ್ಮೆಟ್​ನಿಂದ ಕೊಹ್ಲಿ ಔಟ್​ ಫಿಕ್ಸ್.!

  ಯೋ-ಯೋ ಟೆಸ್ಟ್​ನಲ್ಲಿ ಕೊಹ್ಲಿ ಪಾಸ್​​, ಫ್ಯಾನ್ಸ್​ಗೆ ಬೇಸರ

ವಿರಾಟ್​ ಕೊಹ್ಲಿ, ಫಿಟ್ನೆಸ್​​ಗೆ ಬ್ರಾಂಡ್ ಅಂಬಾಸಿಡರ್. ವಿರಾಟ್​ ಕೊಹ್ಲಿ ಜಸ್ಟ್​ ಬ್ಯಾಟಿಂಗ್ ಐಕಾನ್​ ಮಾತ್ರವಲ್ಲ, ಫಿಟ್ನೆಸ್​​ನ ಐಕಾನ್​ ಕೂಡ. ಈ ಫಿಟ್ನೆಸ್​ಗಾಗಿ​ ಕೊಹ್ಲಿಯನ್ನ ಜನ ಫಾಲೋ ಮಾಡ್ತಾರೆ. ಆದ್ರೀಗ ಏಷ್ಯಾಕಪ್​ಗೂ ಮುನ್ನ ಫಿಟ್ನೆಸ್​​ ಟೆಸ್ಟ್​ ಪಾಸ್​ ಮಾಡಿರುವ ಕೊಹ್ಲಿ​, ಯೋ ಯೋ ಟೆಸ್ಟ್​​ನಲ್ಲಿ ಮಾಡಿರುವ ಸ್ಕೋರ್ ಹೇಳಿಕೊಳ್ಳುವಂತಿಲ್ಲ.

ವಿರಾಟ್​ ಕೊಹ್ಲಿ.. ಮಾಡ್ರನ್ ಡೇ ಕ್ರಿಕೆಟ್​ನ ಬಾಸ್. ಬ್ಯಾಟಿಂಗ್​ನಲ್ಲಿ ಅಸಾಧ್ಯವಾದ ದಾಖಲೆಗಳನ್ನೆಲ್ಲ ಬರೆದಿರುವ ಕಿಂಗ್​ ಕೊಹ್ಲಿಗೆ, ವಿಶ್ವಾದಂತ್ಯ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದು ಜಸ್ಟ್​ ಬ್ಯಾಟಿಂಗ್​ಗೆ ಮಾತ್ರವೇ ಸಿಮೀತವಾಗಿಲ್ಲ. ಫಿಟ್ನೆಸ್​​ ವಿಚಾರದಲ್ಲೂ ವಿರಾಟ್​ ಕೊಹ್ಲಿಯನ್ನ ಫಾಲೋ ಮಾಡೋ ಕ್ರಿಕೆಟಿಗರು, ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಟೀಮ್ ಇಂಡಿಯಾದಲ್ಲಿ ಫಿಟ್ನೆಸ್​​ ಕ್ರಾಂತಿಯನ್ನೇ ಹುಟ್ಟುಹಾಕಿರುವ ಕೊಹ್ಲಿ, ನಿಜಕ್ಕೂ ಫಿಟ್ನೆಸ್​​ ಕಾ ಬ್ರಾಂಡ್​ ಅಂಬಾಸಿಡರ್. ಆದ್ರೀಗ ಇದೇ ಬ್ರಾಂಡ್ ಅಂಬಾಸಿಡರ್​​​ನ ಫಿಟ್ನೆಸ್​​​​​​​​​​​​​​​​​​ ಕಳೆಗುಂದಿದೆ.

ವಿರಾಟ್ ಕೊಹ್ಲಿ

ಫಿಟ್ನೆಸ್ ಎಂದಾಕ್ಷಣ ವಿರಾಟ್​ ಕೊಹ್ಲಿ ನಾಮಸ್ಮರಣೆ ಮಾಡ್ತಿದ್ದ ಮಂದಿ, ಇನ್ಮುಂದೆ ಬೇರೊಬ್ಬರ ನಾಮಸ್ಮರಣೆ ಮಾಡಬೇಕಾದ ಅನಿವಾರ್ಯತೆ ಶ್ರೀಘ್ರದಲ್ಲೇ ಎದುರಾಗಲಿದ್ಯಾ ಎಂಬ ಅನುಮಾನ ಈಗ ಹುಟ್ಟಿದೆ. ಇದಕ್ಕೆಲ್ಲ ಕಾರಣ ಏಷ್ಯಾಕಪ್​ ಕ್ಯಾಂಪ್​ನಲ್ಲಿ ನಡೆದ ಯೋ ಯೋ ಟೆಸ್ಟ್​.

ಯೋ-ಯೋ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ ಪಾಸ್..!

ಏಷ್ಯಾಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ, 6 ದಿನಗಳ ಕ್ಯಾಂಪ್​​​​​​ ನಡೆಸುತ್ತಿದ್ದು. ಈ ಕ್ಯಾಂಪ್ ಆರಂಭಕ್ಕೂ ಮುನ್ನ ಆಟಗಾರರು ಫಿಟ್ನೆಸ್​​ ಪರೀಕ್ಷೆ ಎದುರಿಸಿದ್ದಾರೆ. ಕಳೆದ 2 ಸರಣಿಗಳಿಂದ ವಿಶ್ರಾಂತಿಯಲ್ಲಿ​ದ್ದ ಕೊಹ್ಲಿ, ಸಹಜವಾಗೇ ಯೋ ಯೋ ಫಿಟ್ನೆಸ್​​ ಟೆಸ್ಟ್​ಗೆ ಒಳಪಟ್ಟಿದ್ದು, 17.2 ಅಂಕಗಳೊಂದಿಗೆ ಪಾಸ್ ಆಗಿದ್ದಾರೆ. ಕೊಹ್ಲಿ ಫಿಟ್ನೆಸ್ ಟೆಸ್ಟ್​ನಲ್ಲಿ ಪಾಸ್​ ಆದ್ರೂ, ಬೇಸರ ಮಾತ್ರ ಕಾಡ್ತಿದೆ. ಇದಕ್ಕೆ ಕಾರಣ ಫಿಟ್ನೆಸ್​ ಟೆಸ್ಟ್​ನಲ್ಲಿ ಕೊಹ್ಲಿ ಮಾಡಿರೋ ಸ್ಕೋರ್​.

ಯೋ-ಯೋ ಟೆಸ್ಟ್​ನಲ್ಲಿ ಕಿಂಗ್​ ಕೊಹ್ಲಿ ಜಸ್ಟ್​ ಪಾಸ್..!

ಯೋ-ಯೋ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ, ನಿಜಕ್ಕೂ ಆಗಿರೋದು ಜಸ್ಟ್​ ಪಾಸ್. ಇದಕ್ಕೆ ಕಾರಣ ಟೀಮ್ ಇಂಡಿಯಾದ ಫಿಟೆಸ್ಟ್​ ಕ್ರಿಕೆಟರ್​ ಕೊಹ್ಲಿ, ಈ ಹಿಂದೆ ಮಾಡಿದ್ದ ಯೋ-ಯೋ ಸ್ಕೋರ್​. ಈ ಹಿಂದಿನ ಯೋ ಯೋ ಟೆಸ್ಟ್​ನಲ್ಲಿ ಗರಿಷ್ಠ 19 ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದ ಕೊಹ್ಲಿ, ಈಗ ಕೇವಲ 17.2 ಅಂಕಗಳೊಂದಿಗೆ ಉತ್ತೀರ್ಣಗೊಂಡಿರುವುದು ನಿಜಕ್ಕೂ ಸರಿತಕ್ಕದ್ದಲ್ಲ. ಯಾಕಂದ್ರೆ, ಯೋ-ಯೋ ಟೆಸ್ಟ್​ನ ಪಾಸಿಂಗ್ ಮಾರ್ಕ್ಸ್​ 16.1 ಆಗಿದೆ. ಹೀಗಾಗಿ ಫಿಟ್ನೆಸ್​ನಲ್ಲಿ ವಿರಾಟ್​, ಕುಗ್ಗುತ್ತಿರುವುದು ಸ್ಪಷ್ಟವಾಗಿದೆ.

ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್ ಹಾಗೂ ಸಿರಾಜ್

ಏಷ್ಯಾಕಪ್​-ವಿಶ್ವಕಪ್​ ಟೂರ್ನಿಯೇ ಕೊಹ್ಲಿ​​ ಟಾರ್ಗೆಟ್..!

ಸದ್ಯ ಏಷ್ಯಾಕಪ್​​​​ ಕ್ಯಾಂಪ್​ನಲ್ಲಿ ತಯಾರಿ ಆರಂಭಿಸಿರುವ ವಿರಾಟ್​​, ಮುಂದಿನ ಟಾರ್ಗೆಟ್ ಜಸ್ಟ್​ ಎರಡೇ 2 ಟಾರ್ಗೆಟ್.. ಒಂದು ಆಗಸ್ಟ್​ 30 ರಿಂದ ಆರಂಭ ಆಗುವ ಏಷ್ಯಾಕಪ್ ಟೂರ್ನಿ, ಮಗದೊಂದು ಅಕ್ಟೋಬರ್​ 5ರಿಂದ ಶುರುವಾಗಲಿರುವ ಮೆಗಾ ಏಕದಿನ ವಿಶ್ವಕಪ್ ಟೂರ್ನಿ. ಈ 2 ಮಹಾ ಸಮರಗಳು ಕೊಹ್ಲಿ ಪಾಲಿಗೆ ಮೋಸ್ಟ್​ ಇಂಪಾರ್ಟೆಂಟ್​​. ಯಾಕಂದ್ರೆ, ಈಗಾಗಲೇ 35ರ ಅಸುಪಾಸಿನಲ್ಲಿರುವ ವಿರಾಟ್​, ವಿಶ್ವಕಪ್ ಟೂರ್ನಿ ಬಳಿಕ ಏಕದಿನ ಅಥವಾ ಟಿ20 ಫಾರ್ಮೆಟ್​ನಿಂದ ದೂರ ಸರಿಯೋದು ಕನ್ಫರ್ಮ್​..

ಒಂದೆಡೆ ವಿಶ್ವಕಪ್​ ಬಳಿಕ ಕೊಹ್ಲಿ, ವೈಟ್​ ಬಾಲ್​ ಕ್ರಿಕೆಟ್​ನಿಂದ ದೂರ ಉಳಿಯಬೇಕು ಅನ್ನೋ ಕೂಗಿದೆ. ಇದ್ರ ನಡುವೆ ಈಗ ನೋಡಿದ್ರೆ ಫಿಟ್​ನೆಸ್​ ಕೂಡ ಕುಂದುತಾ ಇದೆ. ಹೀಗಾಗಿ ಫಾರ್ಮ್​​ ಉಳಿಸಿಕೊಂಡರೂ, ಭವಿಷ್ಯದಲ್ಲಿ ಯಾವೂದಾದರೂ ಒಂದು ಫಾರ್ಮೆಟ್​ನಿಂದ ದೂರ ಸರಿಯೋ ಸಾಧ್ಯತೆ ದಟ್ಟವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಯೋ-ಯೋ ಟೆಸ್ಟ್​; ಜಸ್ಟ್​ ಪಾಸ್ ಆದ ಫಿಟ್ನೆಸ್ ಹೀರೋ ವಿರಾಟ್ ಕೊಹ್ಲಿ.. ಫ್ಯಾನ್ಸ್​ಗೆ ಬೇಸರ ​​​​​​​​​​​​​​​​​​

https://newsfirstlive.com/wp-content/uploads/2023/07/KOHLI_WORKOUT_3.jpg

Load More