ಕೊಹ್ಲಿ ಕ್ರಿಕೆಟ್ಗೆ ಡೆಬ್ಯು ಮಾಡಿ 15 ವರ್ಷ ಕಂಪ್ಲೀಟ್..!
ವಿರಾಟ್ ಝೀರೋ to ಹೀರೋ ಆಗಿದ್ದೆ ರೋಚಕ..!
15 ವರ್ಷ..ಯೂನಿಕ್ ರೆಕಾರ್ಡ್ಸ್.. ದಿ ಲೆಜೆಂಡ್ ಪಟ್ಟ..!
ಕಿಂಗ್ ಕೊಹ್ಲಿಯ ಬ್ಯಾಟಿಂಗ್ ದರ್ಬಾರ್ ಕಣ್ತುಂಬಿಕೊಳ್ಳೋದು ಹಬ್ಬ. ಮನೋಜ್ಞ ಆಟದಿಂದ ಕೋಟ್ಯಾನುಕೋಟಿ ಫ್ಯಾನ್ಸ್ ಸಂಪಾದಿಸಿದ್ದಾರೆ. ಇಂತಹ ಅಭಿಮಾನಿಗಳ ಒಡೆಯ ಕ್ರಿಕೆಟ್ಗೆ ಡೆಬ್ಯು ಮಾಡಿ 15 ವರ್ಷ ಪೂರೈಸಿದೆ. ಈ ಅವಧಿಯಲ್ಲಿನ ಮಾಡ್ರನ್ ಕ್ರಿಕೆಟ್ ದೊರೆಯ ಜರ್ನಿ ಬಲು ರೋಚಕ.
ಕ್ರಿಕೆಟ್ ಜಗತ್ತನ್ನ ಆವರಿಸಿರುವ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯು ಮಾಡಿ 15 ವರ್ಷ ಕಂಪ್ಲೀಟ್ ಆಗಿದೆ. ಶೂನ್ಯದಿಂದಲೇ ಕೆರಿಯರ್ ಶುರುಮಾಡಿ ಗ್ರೇಟೆಸ್ಟ್ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ. ದಿ ಲೆಜೆಂಡ್, ಯಂಗ್ಸ್ಟರ್ಸ್ ರೋಲ್ಮಾಡೆಲ್, ಕ್ರಿಕೆಟ್ ಅಂಬಾಸಿಡರ್, ದಾಖಲೆಯ 76 ಶತಕ, ಅದೆಷ್ಟೋ ದಾಖಲೆಗಳು ಕಿಂಗ್ ಕೊಹ್ಲಿ ಹೆಸರಿನಲ್ಲಿವೆ. ಇದಕ್ಕಿಂತ ಯುನಿಕ್ ರೆಕಾರ್ಡ್ಸ್ ವಿರಾಟ್ ಹೆಸರಿನಲ್ಲಿವೆ.
ಇದೇನು ಅಂತಾ ಕನ್ಫ್ಯೂಷನ್ ಆಗಬಹುದು. ಶಾಕ್ ಕೂಡ ಆಗಬಹುದು. ಆದ್ರೂ ಇದು ಸತ್ಯ. ಕಿಂಗ್ ಕೊಹ್ಲಿ 15 ವರ್ಷಗಳ ಕ್ರಿಕೆಟ್ ಜರ್ನಿಯ 22 ಯಾರ್ಡ್ಸ್ ನಲ್ಲಿ ಬರೋಬ್ಬರಿ 510 ಕಿ.ಮೀ ಓಡಿ ಎಲ್ಲರ ಹುಬ್ಬೇರಿಸಿದ್ದಾರೆ. ಇಲ್ಲಿವರೆಗೆ RUNNING BETWEEN WICKETS ನಲ್ಲಿ ಕಿಂಗ್ ಕೊಹ್ಲಿ ತನಗಾಗಿ ಬರೋಬ್ಬರಿ 276.57 ಕಿ.ಮೀ ಓಡಿದ್ದು 13748 ರನ್ ಕಲೆ ಹಾಕಿದ್ದಾರೆ. ಬೇರೆಯವರ ಜೊತೆ 233.48 ಕಿ.ಮೀ ಓಡಿ 11606 ರನ್ ಬಾರಿಸಿದ್ದಾರೆ. ಒಟ್ಟಾರೆ RUNNING BETWEEN WICKETS ನಲ್ಲಿ ಕೊಹ್ಲಿ 510.04 ಕಿ. ಮೀ ಓಡಿ 25354 ರನ್ ಕೊಳ್ಳೆ ಹೊಡೆದಿದ್ದಾರೆ.
ಆಡಿದ್ದು 83 ಮೈದಾನಗಳಲ್ಲಿ..
ರನ್ ಮಾಸ್ಟರ್ ವಿರಾಟ್ ಕೊಹ್ಲಿ 15 ವರ್ಷಗಳ ವೃತ್ತಿ ಜೀವನದಲ್ಲಿ ಒಟ್ಟು 83 ಸ್ಟೇಡಿಯಂಗಳಲ್ಲಿ ಆಡಿದ್ದು 46 ಶತಕಗಳ ಸರಮಾಲೆ ಕಟ್ಟಿದ್ದಾರೆ. ಕೊಹ್ಲಿ ಬಿಟ್ಟರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 53 ಮೈದಾನಗಳಲ್ಲಿ ಆಡಿದ ಖ್ಯಾತಿ ಹೊಂದಿದ್ದಾರೆ.
ಚೇಸಿಂಗ್ಗೆ ‘ಕಿಂಗ್’ ಈ ವಿರಾಟ್..!
ಕ್ರಿಕೆಟ್ ದುನಿಯಾದಲ್ಲಿ ಚೇಸಿಂಗ್ ಪಂಟರ್ ಅನ್ನೋರು ಇದ್ರೆ ಅದು ಒನ್ ಆ್ಯಂಡ್ ಓನ್ಲಿ ಕೊಹ್ಲಿ ಮಾತ್ರ. ಚೇಸಿಂಗ್ ವೇಳೆ 33 ಏಕದಿನ ಇನ್ನಿಂಗ್ಸ್ಗಳಿಂದ 61.76 ಎವರೇಜ್ನಲ್ಲಿ 1853 ರನ್ ಚಚ್ಚಿದ್ದಾರೆ. 9 ಶತಕಗಳನ್ನ ಸಿಡಿಸಿ ಸೈ ಅನ್ನಿಸಿಕೊಂಡಿದ್ದಾರೆ.
ಎದುರಾಳಿಗಳ ತವರಿನಲ್ಲಿ ವಿರಾಟ ಘರ್ಜನೆ
ಎದುರಾಳಿಗಳ ತವರಿನಲ್ಲಿ ಕಿಂಗ್ ಕೊಹ್ಲಿ ಸಿಂಹಘರ್ಜನೆ ನಡೆಸಿದ್ದಾರೆ. ಆಡಿದ 9 ದೇಶಗಳಲ್ಲೂ ಏಕದಿನ ಮಾದರಿಯಲ್ಲಿ ಸೆಂಚುರಿ ಬಾರಿಸಿದ ಸಾಧನೆ ಮಾಡಿದ್ದಾರೆ. ಇನ್ನು ಟೆಸ್ಟ್ನಲ್ಲಿ ಬಾಂಗ್ಲಾದೇಶ ಹೊರತಪಡಿಸಿ ಉಳಿದ ಎಲ್ಲಾ ದೇಶಗಳ ವಿರುದ್ಧವು ಶತಕ ಮೂಡಿ ಬಂದಿದೆ.
ಒಟ್ಟಿನಲ್ಲಿ 15 ವರ್ಷಗಳಲ್ಲಿ ವಿರಾಟ್ ನಿಜವಾಗಿಯೂ ವಿರಾಟರೂಪವನ್ನೇ ತೋರಿಸಿದ್ದಾರೆ. ಮೇಲಿನ ಯುನಿಕ್ ರೆಕಾರ್ಡ್ಸ್ ಅದನ್ನು ಸಾರಿ ಸಾರಿ ಹೇಳುತ್ತಿವೆ. ಕಿಂಗ್ ಕೊಹ್ಲಿಯ ಸಿಂಹಘರ್ಜನೆ ಮುಂದೆಯೂ ಹೀಗೆ ಮರುಕಳಿಸಲಿ. ಅಭಿಮಾನಿಗಳನ್ನ ಮನರಂಜನೆಯ ಉನ್ಮಾದದ ಅಲೆಯಲ್ಲಿ ತೇಲುವಂತೆ ಮಾಡುವಂತಾಗಲಿ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್