newsfirstkannada.com

6,6,4,4,4,4,4,4; ಫೈನಲ್​​ ಪಂದ್ಯದಲ್ಲಿ ಬರೋಬ್ಬರಿ 76 ರನ್​ ಸಿಡಿಸಿದ ಕಿಂಗ್​ ಕೊಹ್ಲಿ!

Share :

Published June 29, 2024 at 9:40pm

    ಕ್ಯಾಪ್ಟನ್​​ ರೋಹಿತ್​ ಶರ್ಮಾ ಔಟಾದ ಬಳಿಕ ಸಂಕಷ್ಟಕ್ಕೆ ಸಿಲುಕಿದ ಟೀಮ್​ ಇಂಡಿಯಾ

    ರಿಷಭ್​​​ ಪಂತ್​​ ಕ್ಯಾಚ್​​ ಕೊಟ್ಟ ಮೇಲೆ ಬಂದ ಅಕ್ಷರ್​ ಪಟೇಲ್​ನಿಂದ ಸ್ಫೋಟಕ ಆಟ

    ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಸ್ಫೋಟಕ ಬ್ಯಾಟಿಂಗ್​ ಮಾಡಿದ ವಿರಾಟ್​ ಕೊಹ್ಲಿ..!

ಬಾರ್ಬಡೋಸ್‌ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆಯುತ್ತಿರೋ 2024ರ ಟಿ20 ವಿಶ್ವಕಪ್​​ ಫೈನಲ್ ಹೈವೋ​ಲ್ಟೇಜ್​ ಪಂದ್ಯದಲ್ಲಿ ಸೌತ್​ ಆಫ್ರಿಕಾ, ಟೀಮ್​ ಇಂಡಿಯಾ ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಟೀಮ್​ ಇಂಡಿಯಾ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಏಡನ್​ ಮರ್ಕ್ರಮ್​​ ನಾಯಕತ್ವದ ಸೌತ್​ ಆಫ್ರಿಕಾ ಬೌಲಿಂಗ್​ ಮಾಡುತ್ತಿದೆ.

ಟೀಮ್​ ಇಂಡಿಯಾದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಎಂದಿನಂತೆ ಅಬ್ಬರಿಸಲು ಮುಂದಾದ್ರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್​ ಶುರು ಮಾಡಿದ ರೋಹಿತ್​​​ ಕೇಶವ್​ ಮಹಾರಾಜ್​​ ಬೌಲಿಂಗ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಫೋರ್​ ಚಚ್ಚಿದ್ರು. ಬಳಿಕ ಮತ್ತೊಂದು ಬೌಂಡರಿ ಬಾರಿಸಲು ಹೋಗಿ ರೋಹಿತ್​ ಕ್ಯಾಚ್​​​ ಕೊಟ್ಟರು.

ತಾನು ಆಡಿದ 3 ಬಾಲ್​ನಲ್ಲಿ 2 ಫೋರ್​ ಸಮೇತ 9 ರನ್​​​ ಗಳಿಸಿ ಪೆವಿಲಿಯನ್​ಗೆ ತೆರಳಿದ್ರು. ಐಸಿಸಿ ಮೆಗಾ ಟೂರ್ನಮೆಂಟ್​​ನಲ್ಲಿ ಸಿಕ್ಕ ಅವಕಾಶವನ್ನೂ ಕೈ ಚೆಲ್ಲಿದ ರೋಹಿತ್​ ಶರ್ಮಾ ಎಂದು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಪಂತ್​ನಿಂದ ಬೇಜವಾಬ್ದಾರಿ ಆಟ..!

ಇನ್ನೊಂದೆಡೆ ಆರಂಭಿಕ ಆಘಾತಕ್ಕೆ ಸಿಲುಕಿದ ಟೀಮ್​ ಇಂಡಿಯಾಗೆ ಆಸರೆ ಆಗಬೇಕಿದ್ದ ರಿಷಭ್​ ಪಂತ್​​ ಬೇಜವಾಬ್ದಾರಿಯಿಂದ ಬ್ಯಾಟಿಂಗ್​ ಮಾಡಿದ್ರು. ರೋಹಿತ್​ ಔಟಾದ ಬೆನ್ನಲ್ಲೇ ಕ್ರೀಸ್​ಗೆ ಬಂದ ಪಂತ್​​ ಕೇಶವ್​​ ಮಹಾರಾಜ್​ ಬೌಲಿಂಗ್​ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಕ್ಯಾಚ್​​ ನೀಡಿದ್ರು. ಈ ವಿಚಾರಕ್ಕೆ ಸಿಟ್ಟಿಗೆದ್ದಿರೋ ಟೀಮ್​ ಇಂಡಿಯಾ ಫ್ಯಾನ್ಸ್​​ ಪಂತ್​ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ನೀನು ದೊಡ್ಡ ಫ್ರಾಡ್​​. ನಿನಗೆ ಅವಕಾಶ ನೀಡಿದ ಬಿಸಿಸಿಐಗೆ ನಾಚಿಕೆ ಆಗಬೇಕು. ಇಂಪಾರ್ಟೆಂಟ್​ ಪಂದ್ಯಗಳಲ್ಲಿ ಆಡದೆ ಮೋಸ ಮಾಡುತ್ತಿರೋ ನಿನಗೂ ನಾಚಿಕೆ ಆಗಬೇಕು ಎಂದು ಪಂತ್​ ವಿರುದ್ಧ ಫ್ಯಾನ್ಸ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಬ್ಬರಿಸಿದ ಅಕ್ಷರ್​ ಪಟೇಲ್​​..!

ಸಾಲು ಸಾಲು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ಅಕ್ಷರ್​ ಪಟೇಲ್​ ಬಲ ತುಂಬಿದ್ರು. ಭಾರೀ ಒತ್ತಡದ ಮಧ್ಯೆ ಕೊಹ್ಲಿಗೆ ಸಾಥ್​​ ನೀಡಿ ಸಿಕ್ಸರ್​​ಗಳ ಸುರಿಮಳೆಗೈದರು. ತಾನು ಆಡಿದ 31 ಬಾಲ್​ನಲ್ಲಿ 4 ಭರ್ಜರಿ ಸಿಕ್ಸರ್​​, 1 ಫೋರ್​ ಸಮೇತ 47 ರನ್​ ಚಚ್ಚಿದ್ರು. ಕೊನೆಗೆ ಡಿಕಾಕ್​ನಿಂದ ರನೌಟ್​ ಆದ್ರು. ಇವರ ಸ್ಟ್ರೈಕ್​ ರೇಟ್​​ 150ಕ್ಕೂ ಹೆಚ್ಚು ಇತ್ತು.

ಟೀಮ್​ ಇಂಡಿಯಾ ಸೇವಿಯರ್​ ಕೊಹ್ಲಿ..!

ಓಪನರ್​ ಆಗಿ ಬಂದಿದ್ದ ಕೊಹ್ಲಿ ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಬ್ಯಾಟ್​ ಬೀಸಿದ್ರು. ಒತ್ತಡದ ಮಧ್ಯೆ ಕೂಡ ಸ್ಟ್ರೈಕ್​ ರೊಟೇಟ್​ ಮಾಡುತ್ತಾ ವಿಕೆಟ್​ ಬೀಳಿಸದೆ ಅತ್ಯುತ್ತಮ ಆಟ ಆಡಿದ್ರು. ತಾನು ಆಡಿದ 59 ಬಾಲ್​ನಲ್ಲಿ 2 ಭರ್ಜರಿ ಸಿಕ್ಸರ್​​, ಬ್ಯಾಕ್​ ಟು ಬ್ಯಾ 6 ಫೋರ್​​ ಸಮೇತ 76 ರನ್​​​ ಸಿಡಿಸಿದ್ರು.

ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6,6,4,4,4,4,4,4; ಫೈನಲ್​​ ಪಂದ್ಯದಲ್ಲಿ ಬರೋಬ್ಬರಿ 76 ರನ್​ ಸಿಡಿಸಿದ ಕಿಂಗ್​ ಕೊಹ್ಲಿ!

https://newsfirstlive.com/wp-content/uploads/2024/06/Kohli-Batting.jpg

Load More