ಇಂಟರ್ನ್ಯಾಷನಲ್ಗೆ ಸೆಲೆಕ್ಟ್ ಆಗಿಲ್ಲ, ಆಗ್ಲೇ ಕೊಹ್ಲಿ ಬೇಕು
ಕೊಹ್ಲಿ ಲೈಫ್ಸ್ಟೈಲ್ ಆ್ಯಟಿಟ್ಯೂಡ್ಗೆ ಫ್ಯಾನ್ ಬೇಸ್ ಇದೆ
ಮಹಿಳಾ ಆಟಗಾರ್ತಿಗೆ ವಿಶೇಷ ಆಸೆಯಿದೆ, ಆ ಆಸೆ ಏನು?
ವಿರಾಟ್ ಕೊಹ್ಲಿ.. ವಿಶ್ವದ ಮೋಸ್ಟ್ ಪಾಪ್ಯುಲರ್ ಸ್ಪೋರ್ಟ್ಸ್ ಪರ್ಸನಾಲಿಟಿ. ಆನ್ ಫೀಲ್ಡ್ನ ಯಶಸ್ಸು, ಆಫ್ ದ ಪೀಲ್ಡ್ನ ಜೀವನದಿಂದ ಅಪರಿಮಿತ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಕೊಹ್ಲಿ ಲೈಫ್ಸ್ಟೈಲ್ ಹಾಗೂ ಆ್ಯಟಿಟ್ಯೂಡ್ಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಭಾರತದಲ್ಲಿನ ಬಹುತೇಕ ಯಂಗ್ಸ್ಟರ್ಗೆ ಕಿಂಗ್ ಕೊಹ್ಲಿ ರೋಲ್ ಮಾಡೆಲ್ ಆಗಿದ್ದಾರೆ.
ಇದನ್ನೂ ಓದಿ: ಆ ವಿಚಾರಕ್ಕೆ ನೋ ಎಂದ ಪ್ರಿಯಕರ.. ಖಾಸಗಿ ಅಂಗದ ಮೇಲೆ ಚಾಕುವಿನಿಂದ ಪ್ರಿಯತಮೆ ಹಲ್ಲೆ!
ಕೊಹ್ಲಿ ಆಟಕ್ಕೆ ಕ್ಲೀನ್ ಬೋಲ್ಡ್ ಆದ ಮಹಿಳಾ ಮಣಿಗಳಿಗಂತೂ ಬರವೇ ಇಲ್ಲ. ಕ್ರಿಕೆಟ್ ಲೋಕದಲ್ಲೂ ಹಲವು ಆಟಗಾರ್ತಿಯರಿಗೆ ಕೊಹ್ಲಿ ಅಂದ್ರೆ ಪ್ರಾಣ. ಭಾರತ ಮಾತ್ರವಲ್ಲ.. ವಿದೇಶಿ ಆಟಗಾರ್ತಿಯರು ಕೂಡ ಕೊಹ್ಲಿಗೆ ಫಿದಾ ಆದವರಿದ್ದಾರೆ. ಇಂಥವರ ಸಾಲಿಗೆ ಹೊಸ ಸೇರ್ಪಡೆ ಈ ಜಾರಾ ಜೇಟ್ಲಿ. ಈಕೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಯ ಕನಸು ಕಾಣ್ತಿರೋ ಕ್ರಿಕೆಟರ್. ಈ ಮಹಿಳಾ ಕ್ರಿಕೆಟರ್ಗೆ ಒಂದು ವಿಶೇಷ ಆಸೆಯಿದೆ. ಆ ಆಸೆ ಏನು?.
ಇದನ್ನೂ ಓದಿ: ಕುಸ್ತಿ ಅಖಾಡದಿಂದ ರಾಜಕೀಯಕ್ಕೆ ವಿನೇಶ್ ಫೋಗಟ್.. ಎಲೆಕ್ಷನ್ನಲ್ಲಿ ಬಬಿತಾ ಫೋಗಟ್ ವಿರುದ್ಧ ಸೈ ಅಂತಾರಾ?
ಕೊಹ್ಲಿ ಆಟಕ್ಕೆ ಮನಸೋತ 22 ವರ್ಷದ ಕಿವೀಸ್ ಆಟಗಾರ್ತಿ..!
ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿದ ವಿರಾಟ್ನ, ಲೆಕ್ಕ ಇಲ್ಲದಷ್ಟು ಮಂದಿ ಇಷ್ಟ ಪಡ್ತಾರೆ. ವಿದೇಶಿ ಆಟಗಾರ್ತಿಯರು ಸಹ ಹುಚ್ಚರಂತೆ ಆರಾಧಿಸ್ತಾರೆ. ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಅವರೆಲ್ಲರಿಗೂ ವಿರಾಟ್ ಜೊತೆ ಒಂದೇ ಒಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನೋ ಕನಸು ಇದೆ. ನ್ಯೂಜಿಲೆಂಡ್‌ನ ಯುವ ಆಟಗಾರ್ತಿ ಜಾರಾ ಜೇಟ್ಲಿಯದ್ದು ಕೂಡ ಅದೇ ಆಸೆ. ಸಂದರ್ಶನವೊಂದರಲ್ಲಿ ಜಾರಾ ಜೇಟ್ಲಿ, ತಮ್ಮ ಮನದಾಳದ ಆಸೆ ಬಿಚ್ಚಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ಈ ಜನರೇಷನ್ನ ಶ್ರೇಷ್ಠ ಕ್ರಿಕೆಟಿಗ. ನನಗೆ ಒಂದು ಬಾರಿ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಲು ಆಸೆಯಿದೆ. ವಿರಾಟ್ ಕೊಹ್ಲಿ ಜೊತೆ ಒಂದು ಫೋಟೋ ತೆಗೆದುಕೊಂಡು ಅದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುತ್ತೇನೆ. ಇದೇ ನನ್ನ ಗುರಿ.
ಜಾರಾ ಜೇಟ್ಲಿ, ಕಿವೀಸ್ ಆಟಗಾರ್ತಿ
ಯಾರು ಜಾರಾ ಜೇಟ್ಲಿ..? ಹಿನ್ನೆಲೆ ಏನು..?
22 ವರ್ಷದ ಈ ಸುರ ಸುಂದರಿ ಜಾರಾ, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ನೀಡಿಲ್ಲ. ಸದ್ಯ ನ್ಯೂಜಿಲೆಂಡ್ ದೇಶಿ ಕ್ರಿಕೆಟ್ನಲ್ಲಿ ಮಿಂಚು ಹರಿಸ್ತಿದ್ದಾರೆ. ಮಹಿಳಾ ಸೂಪರ್ ಸ್ಮ್ಯಾಶ್ ಟೂರ್ನಿಯಲ್ಲಿ ವೆಲ್ಲಿಂಗ್ಟನ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಈಕೆಯ ಮಾತ್ರ ಮಹತ್ವದ್ದು. ಆಫ್ ಸ್ಪಿನ್ ಬೌಲಿಂಗ್ ಜೊತೆ ಬ್ಯಾಟಿಂಗ್ ಮಾಡಬಲ್ಲ ಜಾರಾ ಫೀಲ್ಡಿಂಗ್ ಮಾಡೋದ್ರಲ್ಲೂ ಎತ್ತಿದ ಕೈ.
ಇಂಟ್ರೆಸ್ಟಿಂಗ್ ಅಂದ್ರೆ, ಈಕೆ ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿಲ್ಲ. ಆದ್ರೂ, ನ್ಯೂಜಿಲೆಂಡ್ನಲ್ಲಿ ಮೋಸ್ಟ್ ಪ್ಯಾಪುಲರ್ ಕ್ರಿಕೆಟರ್ ಆಗಿ ಆಯ್ಕೆಯಾದ ಹೆಗ್ಗಳಿಕೆ ಈಕೆಯದ್ದು. 2020ರಲ್ಲಿ ನ್ಯೂಜಿಲೆಂಡ್‌ನ ಅತ್ಯಂತ ಜನಪ್ರಿಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಸಖತ್ ಕಿಕ್ ನೀಡುತ್ತೆ ಈಕೆಯ ಸೆಲೆಬ್ರೇಷನ್!
ಈಕೆ ಬ್ಯೂಟಿಗಿಂತ, ವಿಕೆಟ್ ಪಡೆದಾಗ ಮಾಡೋ ಸೆಲಬ್ರೇಷನ್ ಸಖತ್ ಕಿಕ್ ನೀಡುತ್ತೆ. ಆನ್ಫೀಲ್ಡ್ನಲ್ಲಿ ಸಖತ್ ಆಕ್ಟೀವ್ ಆಗಿರುವ ಈ ಸುರ ಸುಂದರಿ, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಎಂಗೇಜ್ ಆಗಿ ಇರ್ತಾರೆ.
ಇದನ್ನೂ ಓದಿ: ಇಂದು ಕೂಡ ಧಾರಾಕಾರ ಮಳೆ.. 4 ಜಿಲ್ಲೆಗಳಿಗೆ ಅಲರ್ಟ್; ಮನೆಗಳಿಗೆ ನುಗ್ಗಿದ ನೀರು, ಬೆಳೆ ಎಲ್ಲ ಜಲಾವೃತ
ವಿರಾಟ್ಗೆ ಮ್ಯಾರೇಜ್ ಪ್ರಪೋಸಲ್ ಇಟ್ಟಿದ್ದ ವ್ಯಾಟ್..!
22 ವರ್ಷದ ಜಾರಾ ಜೇಟ್ಲಿ ಮಾತ್ರವಲ್ಲ. ಇಂಗ್ಲೆಂಡ್ ಆಟಗಾರ್ತಿ ಡೇನಿಯಲ್ ವ್ಯಾಟ್ ಕೂಡ ವಿರಾಟ್ಗೆ ಕಟ್ಟಾ ಅಭಿಮಾನಿ. ಅಷ್ಟೇ ಅಲ್ಲ, 2014ರಲ್ಲಿ ವಿರಾಟ್ ಕೊಹ್ಲಿಗೆ ಓಪನ್ ಆಗಿ ಪ್ರಪೋಸ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ರು.
ಪಾಕಿಸ್ತಾನದ ಕೈನತ್ ಇಮ್ತಿಯಾಜ್, ಇಂಗ್ಲೆಂಡ್ನ ಕ್ಯಾಥರೀನ್ ಬ್ರಂಟ್ಗೆ ವಿರಾಟ್ ಕೊಹ್ಲಿಯೇ ಸ್ಪೂರ್ತಿ. ಕ್ರಿಕೆಟ್ ಆಟಗಾರ್ತಿಯರೇ ಅಲ್ಲ.. ಕಿಂಗ್ ಕೊಹ್ಲಿಗೆ ಮನಸೋತ ಬಾಲಿವುಡ್ ಬೆಡಗಿಯರ ದೊಡ್ಡ ಬಳಗವೂ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ