newsfirstkannada.com

ಅನುಷ್ಕಾ ಶರ್ಮಾ ಜೊತೆ ಸಪ್ತಪದಿ ತುಳಿಯುವ ಮೊದಲು ಕೊಹ್ಲಿ ಮದುವೆ ಕನಸು ಹೇಗಿತ್ತು ಗೊತ್ತಾ..?

Share :

13-09-2023

    ವಿರಾಟ್ ಕೊಹ್ಲಿ ಮ್ಯಾರೆಜ್ ಸಿಕ್ರೇಟ್ ರಿವೀಲ್

    ಬಾಲ್ಯದಲ್ಲಿ ವಿರಾಟ್​​ ಕೊಹ್ಲಿಗೆ ಎರಡು ಆಸೆ

    ಕೊಟ್ಟ ಮಾತಿನಂತೆ ನಡೆದುಕೊಂಡ ಕಿಂಗ್ ಕೊಹ್ಲಿ

ವಿರಾಟ್​ ಕೊಹ್ಲಿ ಬಾಲಿವುಡ್​​ ಬೆಡಗಿ ಅನುಷ್ಕಾ ಶರ್ಮಾರನ್ನ ವಿವಾಹವಾಗಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಕೊಹ್ಲಿ ಮದುವೆಯಾದ್ರೆ ಹಿರೋಯಿನ್​​ ಅನ್ನೇ ಮದುವೆಯಾಗ್ತೀನಿ ಅಂತಾ ಕ್ರಿಕೆಟ್​ ಫೀಲ್ಡ್​ಗೆ ಇಳಿಯೋಕೆ ಮುನ್ನವೇ ಕನಸು ಕಂಡಿದ್ರು.

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​​ ಕೊಹ್ಲಿ ಜಗತ್ತನ್ನೇ ಗೆದ್ದಿರುವ ವೀರ. ತನ್ನ ಮನಮೋಹಕ ಆಟದಿಂದ ವಿಶ್ವ ಕ್ರಿಕೆಟ್​ ಲೋಕದ ಸುಲ್ತಾನನ ಪಟ್ಟಕ್ಕೆ ಹೇಗೆ ಏರಿದ್ದಾರೋ ಹಾಗೆ ತನ್ನ ಮನಮೋಹಕ ಆಟದಿಂದಲೇ ಅಸಂಖ್ಯ ಅಭಿಮಾನಿಗಳ ಮನವನ್ನೂ ಕದ್ದಿದ್ದಾರೆ. ಕೊಹ್ಲಿಯನ್ನು ಇಷ್ಟ ಪಡೋ ಮಹಿಳಾ ಮಣಿಗಳಿಗೆ ಲೆಕ್ಕವೇ ಇಲ್ಲ. ಕೊಹ್ಲಿ ಕ್ಲೀನ್​ ಬೋಲ್ಡ್​ ಆಗಿದ್ದು ಮಾತ್ರ ಬಾಲಿವುಡ್​ ಬೆಡಗಿ ಅನುಷ್ಕಾ ಶರ್ಮಾಗೆ. ಕೊಹ್ಲಿ ಅನುಷ್ಕಾರನ್ನ ಲವ್​ ಮಾಡಿ ಮದುವೆಯಾಗಿ ಈಗ ಮಗುವೂ ಆಗಿದೆ. ಇದೀಗ ಮ್ಯಾರೇಜ್​ ಸೀಕ್ರೆಟ್​​ ರಿವೀಲ್​ ಆಗಿದ್ದು, ಚಿಕ್ಕ ವಯಸ್ಸಿನಲ್ಲಿ ಕೊಹ್ಲಿ ಕಂಡಿದ್ದ ಕನಸೊಂದು ಎಲ್ಲರ ಗಮನ ಸೆಳೆದಿದೆ.

ಬಾಲ್ಯದಲ್ಲಿ ವಿರಾಟ್​​ ಕೊಹ್ಲಿಗೆ 2 ಆಸೆಗಳಿದ್ವಂತೆ. ಒಂದು ದೊಡ್ಡ ಕ್ರಿಕೆಟರ್​ ಆಗಬೇಕು ಅನ್ನೋದಾದ್ರೆ, ಇನ್ನೊಂದು ಹೀರೋಯಿನ್​ನ ಮದುವೆಯಾಗಬೇಕು ಅನ್ನೋದು ಇನ್ನೊಂದು. ಬಾಲ್ಯದಲ್ಲಿ ಒಂದು ದಿನ ಮದನ್​ ಲಾಲ್​ ಕ್ರಿಕೆಟ್​ ಅಕಾಡೆಮಿಯ ಬಳಿ ಅಭ್ಯಾಸ ನಡೆಸುತ್ತಿದ್ದ ವೇಳೆ, ಯಾವುದೋ ಸಿನಿಮಾದ ಹೀರೋಯಿನ್​ನ ದೊಡ್ಡ ಪೋಸ್ಟರ್​ ಅಂಟಿಸಿದ್ದರಂತೆ. ಅದನ್ನ ನೋಡಿದ ಕೊಹ್ಲಿ, ಅಲ್ಲಿದ್ದ ಒಬ್ಬರಿಗೆ ನಾನು ಮುಂದೆ ದೊಡ್ಡ ಕ್ರಿಕೆಟರ್​ ಆದ ಬಳಿಕ ದೊಡ್ಡ ಹಿರೋಯಿನ್​ನ ಮದುವೆಯಾಗ್ತೀನಿ ಅಂದಿದ್ರಂತೆ.

ಅಂದು ಹೇಳಿದ ಮಾತಿನಂತೆ ಕೊಹ್ಲಿ ಇಂದು, ವಿಶ್ವದ ಶ್ರೇಷ್ಠ ಕ್ರಿಕೆಟರ್​ ಕೂಡ ಆಗಿದ್ದಾರೆ. ಬಾಲಿವುಡ್​ ಬೆಡಗಿ ಅನುಷ್ಕಾರನ್ನ ಮದುವೆಯಾಗಿದ್ದಾರೆ. ಕನಸು ಕಾಣೋದು ಮಾತ್ರವಲ್ಲ. ಹಾರ್ಡ್​​ವರ್ಕ್​, ಡೆಡಿಕೇಶನ್​, ಡಿಟರ್ಮಿನೇಶನ್​ ಇದ್ರೆ, ಯಾವ ಕನಸನ್ನಾದ್ರೂ ನನಸು ಮಾಡಿಕೊಳ್ಳಬಹುದು ಅನ್ನೋದಕ್ಕೆ ಕೊಹ್ಲಿ ಬೆಸ್ಟ್​ ಎಕ್ಸಾಂಪಲ್​.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅನುಷ್ಕಾ ಶರ್ಮಾ ಜೊತೆ ಸಪ್ತಪದಿ ತುಳಿಯುವ ಮೊದಲು ಕೊಹ್ಲಿ ಮದುವೆ ಕನಸು ಹೇಗಿತ್ತು ಗೊತ್ತಾ..?

https://newsfirstlive.com/wp-content/uploads/2023/09/VIRAT-7.jpg

Load More