newsfirstkannada.com

ಸೆಮಿಸ್​ನಲ್ಲಿ ವಿರಾಟ್‌​ ವೈಲೆಂಟ್.. ನಿರ್ಣಾಯಕ ಪಂದ್ಯದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ; ಕಿಂಗ್ ರೆಕಾರ್ಡ್ಸ್ ಏನು?

Share :

Published June 27, 2024 at 3:25pm

    ಸೆಮೀಸ್​ ​ಫೈಟ್​​​ನಲ್ಲಿ 'ಫೈಟರ್'​​ ತೋರಿಸ್ತಾರೆ ಅಸಲಿ ಖದರ್!

    ವಿರಾಟ್ ಇಲ್ಲಿವರೆಗೆ ಹೇಗೆ ಆಡಿದ್ರು ಅನ್ನೋದನ್ನ ಮರೆತು ಬಿಡಿ

    ಕೊಹ್ಲಿ ನಿರ್ಣಾಯಕ ಹಂತದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ

ಟಿ20 ವಿಶ್ವಕಪ್ ಇಂದು ಮದಗಜಗಳ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಬಲಿಷ್ಠ ಭಾರತ, ಮಾಜಿ ಚಾಂಪಿಯನ್​​ ಇಂಗ್ಲೆಂಡ್​​ ತಂಡವನ್ನ ಎದುರಿಸಲಿದೆ. ಕಿಂಗ್ ಕೊಹ್ಲಿ ಫಾರ್ಮ್​ ಬಗ್ಗೆ ಫ್ಯಾನ್ಸ್ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ವಿರಾಟ್ ಇಲ್ಲಿತನಕ ಹೇಗೆ ಆಡಿದ್ರು ಅನ್ನೋದನ್ನ ಮರೆತು ಬಿಡಿ. ಇಂದು ಮಾತ್ರ ವಿರಾಟ್​​​ ಆರ್ಭಟಿಸೋದು ಪಕ್ಕಾ. ಅದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ಕಾವೇರಿ ಒಡಲು ಬಗೆದು ಲೂಟಿಗೆ ಸ್ಕೆಚ್​.. ನ್ಯೂಸ್​ ಫಸ್ಟ್​ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್​, ಭೂಗಳ್ಳ ಶಾಕ್..!

ಕಿಂಗ್​ ಕೊಹ್ಲಿ.. ಈ ಅಗ್ರಜ ಬ್ಯಾಟ್ಸ್​​ಮನ್​​ ಪ್ರಸಕ್ತ ಟಿ20 ವಿಶ್ವಕಪ್​ನ ಗ್ರೂಪ್ ಸ್ಟೇಜ್ ಹಾಗೂ ಸೂಪರ್​​​-8 ನಲ್ಲಿ ಹೇಗೆ ಆಡಿದ್ರೂ ಅನ್ನೋದನ್ನ ಬಿಟ್ಟು ಬಿಡಿ. ಇಂದು ಇಂಗ್ಲೆಂಡ್​​​ ವಿರುದ್ಧ ನಡೆಯುವ ಸೆಮಿಫೈನಲ್​​ ಫೈಟ್​​ನಲ್ಲಿ ವಿರಾಟ್, ವಿರಾಟರೂಪ ತೋರಿಯೇ ತೋರಿರ್ಸಾರೆ. ಯಾಕಂದ್ರೆ ಕೊಹ್ಲಿ ನಾಕೌಟ್​​ ಸ್ಪೆಷಲಿಸ್ಟ್​​​​​. ನಿರ್ಣಾಯಕ ಹಂತದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ. ಏನಿದ್ರೂ ಅಬ್ಬರಕ್ಕೆ ಹೆಸರುವಾಸಿ. ಇದಕ್ಕೆ ಬೆಸ್ಟ್​​ ಎಕ್ಸಾಂಪಲ್​ ಇಲ್ಲಿವೆ ನೋಡಿ.

ಇದನ್ನೂ ಓದಿ: ಟಾಸ್ ಗೆದ್ದು ತಪ್ಪು ನಿರ್ಣಯ ತೆಗೆದುಕೊಂಡ ರಶೀದ್ ಖಾನ್.. ಕೋಚ್ ಮುಂದೆ ಹೋಗಿ ಗಳಗಳನೇ ಕಣ್ಣೀರಿಟ್ಟ ನಾಯಕ..!

ಕೊಹ್ಲಿ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ದಕ್ಷಿಣ ಆಫ್ರಿಕಾ!

ಅದು 2014 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಮಿಫೈನಲ್​​​ ಪಂದ್ಯ. ಭಾರತ ಗೆಲ್ಲಲು 173 ರನ್​ ಗಳಿಸಬೇಕಿತ್ತು. ಕಿಂಗ್ ಕೊಹ್ಲಿ ರೌದ್ರಾವತಾರ ತಾಳಿದ್ರು. ಬಲಿಷ್ಠ ಆಫ್ರಿಕಾ ಬೌಲಿಂಗ್ ಕೋಟೆಯನ್ನ ಧ್ವಂಸಗೊಳಿಸಿದ್ದ ವಿರಾಟ್, ಸ್ಫೋಟಕ 77 ರನ್ ಚಚ್ಚಿ, ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ರು.

189 ಸ್ಟ್ರೈಕ್​​​ರೇಟ್​​​.. ಸ್ಫೋಟಕ 82 ರನ್​​​.. ವಿಂಡೀಸ್ ಹೈರಾಣ..!

2016ರ ಟಿ20 ವಿಶ್ವಕಪ್​ನಲ್ಲಿ ಭಾರತ ಹಾಗೂ ವೆಸ್ಟ್​ಇಂಡೀಸ್​ ತಂಡಗಳು ಮುಖಾಮುಖಿಯಾಗಿದ್ವು. ಈ ಸೆಮಿಫೈನಲ್​​​​​ ಕಾಳಗದಲ್ಲಿ ಕೊಹ್ಲಿ ಪರಾಕ್ರಮ ಮೆರೆದಿದ್ರು. 189ರ ಸ್ಟ್ರೈಕ್​​ರೇಟ್​​ನಲ್ಲಿ ಬಿರುಸಿನ 89 ರನ್ ಗಳಿಸಿ ತಂಡಕ್ಕೆ ಆಪತ್ಬಾಂಧವರಾಗಿದ್ರು.

ಇದನ್ನೂ ಓದಿ: ನ್ಯೂಸ್ ​ಫಸ್ಟ್ ಇಂಫ್ಯಾಕ್ಟ್​; ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು

ಅಡಿಲೇಡ್​ನಲ್ಲಿ ಆಂಗ್ಲರಿಗೆ ವಿರಾಟ್ ದುಸ್ವಪ್ನ..!

2022ರ ಟಿ20 ವಿಶ್ವಕಪ್​ನಲ್ಲಿ ಕಿಂಗ್ ಕೊಹ್ಲಿ ಬ್ಯಾಟ್​​ ಮತ್ತೆ ಘರ್ಜಿಸಿತ್ತು. ಓಪನರ್ಸ್​ ಫೇಲ್ಯೂರ್ ಮಧ್ಯೆ ಕೆಚ್ಚದೆಯ ಇನ್ನಿಂಗ್ಸ್ ಕಟ್ಟಿದ ವಿರಾಟ್​ ಅರ್ಧಶತಕದೊಂದಿಗೆ ಇಂಗ್ಲೆಂಡ್​​ ಬೌಲರ್​ಗಳ ಬೆವರಿಳಿಸಿದ್ರು. ಭಾರತ ಈ ಪಂದ್ಯವನ್ನ ಕೈಚೆಲ್ಲಿದ್ರೂ, ವಿರಾಟ್ ಟಾಪ್ ಕ್ಲಾಸ್​​ ಇನ್ನಿಂಗ್ಸ್ ಕಟ್ಟಿ ಎಲ್ಲರ ದಿಲ್ ಗೆದ್ರು.

ಮಿರ್​​​​ಪುರ್​​ನಲ್ಲಿ ಸಿಂಹಳೀಯರಿಗೆ ‘ವಿರಾಟರೂಪ’ದರ್ಶನ

ಇನ್ನು 2014ರ ಫೈನಲ್ ಅಖಾಡದಲ್ಲಿ ಕೊಹ್ಲಿ ಕಟ್ಟಿದ ಅಗ್ರೆಸ್ಸಿವ್​​​​​​ ಇನ್ನಿಂಗ್ಸ್ ಅನ್ನ ಯಾರೊಬ್ಬರು ಮರೆಯಲು ಸಾಧ್ಯವಿಲ್ಲ. ಶ್ರೀಲಂಕಾ ಬೌಲರ್​ಗಳನ್ನ ಧೂಳಿಪಟ ಮಾಡಿದ್ದ ಕೊಹ್ಲಿ 58 ಎಸೆತಗಳಲ್ಲಿ ಸಿಡಿಲಬ್ಬರದ 77 ರನ್ ಗಳಿಸಿ ಶೈನ್ ಆಗಿದ್ರು. ಇಷ್ಟಾದ್ರು ಭಾರತಕ್ಕೆ ಜಯ ಒಲಿಯಲಿಲ್ಲ. ಕಿಂಗ್ ಕೊಹ್ಲಿಯ ಟಿ20 ವಿಶ್ವಕಪ್​​ನ ನಾಕೌಟ್​​​ ರನ್​ ಭರಾಟೆ ಜೋರಿದೆ. ನಿರ್ಣಾಯಕ ಹಂತದ ಪಂದ್ಯಗಳಲ್ಲಿ ತಂಡಕ್ಕೆ ಬೆನ್ನೆಲುಗಾಗಿ ನಿಲ್ಲುವ ವಿರಾಟ್​ ಇಂದು ಕೂಡ ಫೇಲ್ಯೂರ್ ಮೆಟ್ಟಿನಿಂತು, ಆಂಗ್ಲ ಅಟ್ಟಹಾಸಕ್ಕೆ ಬ್ರೇಕ್ ಹಾಕಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೆಮಿಸ್​ನಲ್ಲಿ ವಿರಾಟ್‌​ ವೈಲೆಂಟ್.. ನಿರ್ಣಾಯಕ ಪಂದ್ಯದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ; ಕಿಂಗ್ ರೆಕಾರ್ಡ್ಸ್ ಏನು?

https://newsfirstlive.com/wp-content/uploads/2024/06/VIRAT_KOHLI_2.jpg

Load More