ಯೋ-ಯೋ ಟೆಸ್ಟ್ ಮುಗಿಸಿದ ವಿರಾಟ್ ಕೊಹ್ಲಿ
ಕಿಂಗ್ ಕೊಹ್ಲಿಯನ್ನು ಕಂಡು ಅಚ್ಚರಿಗೊಂಡ ಕ್ರಿಕೆಟ್ ಪ್ರಿಯರು
ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಾಗಿ ಯೋ-ಯೋ ಟೆಸ್ಟ್
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿದ್ದಾರೆ. ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಸಂಬಂಧಿಸಿ ಯೋ-ಯೋ ಟೆಸ್ಟ್ ಮುಗಿಸಿದ್ದಾರೆ. ಈ ಸಂತಸದ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಯೋ-ಯೋ ಟೆಸ್ಟ್ನಲ್ಲಿ ತಾವು ಪಡೆದ ಅಂಕಗಳನ್ನ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಭಯಾನಕ ಕೋನ್ಗಳ ನಡುವೆಯು ಯೋ ಟೆಸ್ಟ್ ಮುಗಿಸಿದ್ದೇನೆ. 17.2 ಅಂಕ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಲ್ಲಿ ಕಿಂಗ್ ಕೊಹ್ಲಿ ಹವಾ!@imVkohli#ViratKohli #AsiaCup2023 #Bengaluru #Karnataka #NewsFirstKannada pic.twitter.com/uSxaR6UgCb
— NewsFirst Kannada (@NewsFirstKan) August 24, 2023
ಅಂದಹಾಗೆಯೇ ಕೊಹ್ಲಿ ಮಾತ್ರವಲ್ಲ, ಭಾರತದ ತಂಡದ ಆಟಗಾರರು ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿನ ನ್ಯಾಷನಲ್ ಅಕಾಡೆಮಿಗೆ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ.
ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಇದರ ನಿಮಿತ್ತ ಟೀಂ ಇಂಡಿಯಾದ ಆಟಗಾರರು ಕರ್ನಾಟಕದ ರಾಜಧಾನಿಗೆ ಬಂದಿಳಿದಿದ್ದಾರೆ. ಇಲ್ಲಿ ಟ್ರೈನಿಂಗ್ ಪಡೆದ ಬಳಿಕ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ.
ಆಗಸ್ಟ್ 30ರಿಂದ ಶ್ರೀಲಂಕಾ ಮತ್ತು ಪಾಕಿಸ್ತಾನ ಜಂಟಿ ಆತಿಥ್ಯದಲ್ಲಿ ಏಪ್ಯಾಕಪ್ ಟೂರ್ನಿ ನಡೆಯಲಿಕ್ಕಿದೆ. ಸೆಪ್ಟೆಂಬರ್ 2ರಂದು ಪಾಕಿಸ್ತಾನದ ಜೊತೆಗೆ ಟೀಂ ಇಂಡಿಯಾದ ಕಲಿಗಳು ಸೆಣೆಸಾಡಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ