newsfirstkannada.com

ವಿರಾಟ್ ಕೊಹ್ಲಿಯ ಒಂದು ಇನ್​ಸ್ಟಾಗ್ರಾಮ್ ಪೋಸ್ಟ್​​ಗೆ ಬರೋಬ್ಬರಿ​ 11.14 ಕೋಟಿ ರೂ. ಸಂಭಾವನೆ

Share :

12-08-2023

    2022ರಲ್ಲಿ ಇನ್​ಸ್ಟಾ​ಗ್ರಾಮ್​​ನಿಂದ ಗಳಿಸಿದ ಆದಾಯ ಎಷ್ಟು?

    ರೊನಾಲ್ಡೊ-ಮೆಸ್ಸಿಗೆ ಟಕ್ಕರ್​​ ಕೊಡಲು ಸಜ್ಜಾದ ಕೊಹ್ಲಿ..!

    ಕೊಹ್ಲಿ ಬಿಟ್ಟರೆ ಭಾರತದ ಯಾವ ಕ್ರಿಕೆಟರ್​ಗೆ ಹೆಚ್ಚು ಹಣ?

ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಮ್​​ನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಸಾಕು ಕೋಟಿ ಕೋಟಿ ಹಣ ಜೇಬಿಗಿಳಿಸ್ತಾರೆ. ವರ್ಷ ಕಳೆದಂತೆ ವಿರಾಟ್ ಇನ್​ಸ್ಟಾ ಸಂಭಾವನೆ ಏರಿಕೆ ಆಗಿದ್ದು, ಫುಟ್ಬಾಲ್ ದಿಗ್ಗಜರಾದ ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿಗೆ ಸೆಡ್ಡು ಹೊಡೆಯಲು ವಿರಾಟ್ ಸಜ್ಜಾಗಿದ್ದಾರೆ.

ವಿರಾಟ್ ಕೊಹ್ಲಿ..! ಮಾಡ್ರನ್ ಕ್ರಿಕೆಟ್ ದೊರೆ ಮಾತ್ರವಲ್ಲ. ರಿಚೆಸ್ಟ್​​ ಅಥ್ಲೀಟ್​ ಕೂಡ. ಕಿಂಗ್ ಕೊಹ್ಲಿ ಕ್ರಿಕೆಟ್​ನಿಂದ ಎಷ್ಟು ದುಡ್ಡು ಗಳಿಸ್ತಾರೋ, ಅದಕ್ಕಿಂತ ಎರಡು ಪಟ್ಟು ದುಡ್ಡನ್ನು ಆಫ್​ ದಿ ಫೀಲ್ಡ್​​ನಲ್ಲಿ ಗಳಿಸ್ತಾರೆ. ನಿಮಗೆ ಗೊತ್ತಿರ್ಲಿ. ಸೋಷಿಯಲ್ ಮೀಡಿಯಾದಿಂದಲೇ ನೂರಾರು ಕೋಟಿ ರೂಪಾಯಿ ಹಣ ವಿರಾಟ್ ಖಜಾನೆ ಸೇರುತ್ತೆ. ಅದ್ರಲ್ಲೂ ಇನ್​​ಸ್ಟಾಗ್ರಾಮ್​ ಲೋಕಕ್ಕೆ ಕೊಹ್ಲಿ ಅಧಿಪತಿ. ಯಾಕಂದ್ರೆ ಇನ್​ಸ್ಟಾದಿಂದ ರನ್ ಮಷೀನ್ ಪಡೆಯುವ ಸಂಭಾವನೆ ಕೇಳಿದ್ರೆ ಎಂತವರು ಬೆರಗಾಗ್ತಾರೆ.

ಇನ್​ಸ್ಟಾಗ್ರಾಮ್​ ಲೋಕಕ್ಕೆ ಕಿಂಗ್ ಕೊಹ್ಲಿನೇ ಬಾಸ್​​​..!

ವಿರಾಟ್ ಕೊಹ್ಲಿ ಮೇನಿಯಾ ಅಂದ್ರೆ ಸುಮ್ನೇನಾ ಹೇಳಿ? ವಿರಾಟ್ ನಿಜಕ್ಕೂ ದರ್ಬಾರ್​​ ಕಾ ರಾಜ. ಇನ್​​ಸ್ಟಾಗ್ರಾಮ್​​ನಲ್ಲಿ 256 ಮಿಲಿಯನ್ ಫಾಲೋವರ್ಸ್​ ಹೊಂದಿದ್ದಾರೆ. ಅಂದಹಾಗೇ ಕೊಹ್ಲಿ ಇನ್​ಸ್ಟಾದಲ್ಲಿ ಒಂದು ಪೋಸ್ಟ್​​ ಹಾಕಿ ಸುಮ್ಮನೇ ಕೂತರೆ ಸಾಕು ಕೋಟಿ ಕೋಟಿ ಹಣ ಜೇಬಿಗಿಳಿಸಿಕೊಳ್ತಾರೆ. ವಿರಾಟ್ ತಾವು ಹಾಕುವ ಒಂದೇ ಒಂದು ಇನ್​ಸ್ಟಾಗ್ರಾಮ್​​​ಗೆ ಪೋಸ್ಟ್​​ಗೆ ಬರೋಬ್ಬರಿ 11.14 ಕೋಟಿ ಸಂಭಾವನೆ ಪಡೆಯುತ್ತಾರೆ.

ಇದು ನಿಮಗೆ ಕೇಳೋಕೆ ಅಚ್ಚರಿ ಅನ್ನಿಸಬಹುದು. ಆದ್ರೆ ನಿಜ! ಕೊಹ್ಲಿಯ ಇನ್​ಸ್ಟಾಗ್ರಾಮ್ ಪೋಸ್ಟ್ ಸಂಭಾವನೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇದೆ. ಕಳೆದ ವರ್ಷ ಒಂದು ಇನ್​ಸ್ಟಾ ಪೋಸ್ಟ್​ಗೆ 8.9 ಕೋಟಿ ಪಡೆಯುತ್ತಿದ್ದರು. 2023ರಲ್ಲಿ ಒಂದು ಇನ್​ಸ್ಟಾಗ್ರಾಮ್​ ಪೋಸ್ಟ್​ ಬೆಲೆ 11.14 ಕೋಟಿ ರೂಪಾಯಿ ಆಗಿದೆ. ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಏನಂದ್ರೆ 2022 ರಲ್ಲಿ ಇನ್​​ಸ್ಟಾಗ್ರಾಮ್​​ನಿಂದಲೇ ಕೊಹ್ಲಿ 300 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.

ರೊನಾಲ್ಡೊ-ಮೆಸ್ಸಿಗೆ ಟಕ್ಕರ್​​ ಕೊಡಲು ಸಜ್ಜಾದ ಕೊಹ್ಲಿ

ಕ್ರಿಕೆಟ್​ ಮಟ್ಟಿಗೆ ಕೊಹ್ಲಿನೇ ಇನ್​ಸ್ಟಾಗ್ರಾಂ​​ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟರ್​​. ವಿಶ್ವದ ಅಥ್ಲಿಟ್ಸ್​​​​ ವಿಚಾರಕ್ಕೆ ಬಂದ್ರೆ ಫುಟ್ಬಾಲ್​​​​ ದಿಗ್ಗಜರಾದ ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಲಿಯೋನೆಲ್​ ಮೆಸ್ಸಿ ಟಾಪ್​​​-2 ಸ್ಥಾನದಲ್ಲಿದ್ದಾರೆ.

ಟಾಪ್​​​​​-3 ಇನ್​ಸ್ಟಾಗ್ರಾಂ​​ ಹಣ ಗಳಿಕೆ ಕ್ರೀಡಾಪಟುಗಳು

  • ರೊನಾಲ್ಡೊ – 26.7 ಕೋಟಿ ರೂ
  • ಮೆಸ್ಸಿ – 21.5 ಕೋಟಿ ರೂ
  • ಕೊಹ್ಲಿ – 11.45 ಕೋಟಿ ರೂ

ಕೊಹ್ಲಿ ಬಿಟ್ರೆ ಧೋನಿಗೇನೆ ಹೆಚ್ಚು ಡಿಮ್ಯಾಂಡ್

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ರೂ ಹವಾ ಕಮ್ಮಿ ಆಗಿಲ್ಲ. 44.5 ಮಿಲಿಯನ್​​ ಹೊಂದಿರೋ ಫಾಲೋವರ್ಸ್​ ಹೊಂದಿರೋ ಮಾಹಿ ಒಂದು ಇನ್​ಸ್ಟಾಗ್ರಾಮ್​ ಪೋಸ್ಟ್​​​​​ನಿಂದ 1 ಕೋಟಿ ರೂಪಾಯಿ ಗಳಿಸುತ್ತಾರೆ. ಇನ್​ಸ್ಟಾದಲ್ಲಿ ಕೊಹ್ಲಿ ಬಿಟ್ರೆ ಧೋನಿಗೇನೆ ಹೆಚ್ಚು ಡಿಮ್ಯಾಂಡ್ ಇದೆ.

ರೋಹಿತ್​​ ಜೇಬಿಗೆ ಸೇರುತ್ತೆ 75 ಲಕ್ಷ ರೂಪಾಯಿ

ಟೀಮ್ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಇನ್​ಸ್ಟಾಗ್ರಾಮ್​​​ನಲ್ಲಿ ತಕ್ಕ ಮಟ್ಟಿಗೆ ಹವಾ ಹೊಂದಿದ್ದಾರೆ. ಹಿಟ್​ಮ್ಯಾನ್​​​ ಇನ್​ಸ್ಟಾಗ್ರಾಮ್​​ನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಸಾಕು 75 ಲಕ್ಷರ ರೂಪಾಯಿ ಅವರ ಖಜಾನೆ ಸೇರುತ್ತೆ. ಒಟ್ಟಿನಲ್ಲಿ ಕ್ರಿಕೆಟರ್ಸ್​ ಏನೇ ಮಾಡಿದ್ರೂ ದುಡ್ಡು ಗಳಿಸ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ. ನಾವೆಲ್ಲರೂ ಟೈಮ್​​ಪಾಸ್​​ಗೋಸ್ಕರ ಇನ್​​ಸ್ಟಾಗ್ರಾಮ್​​ ಬಳಸಿದ್ರೆ ಕ್ರಿಕೆಟರ್ಸ್​ ಇನ್​​​​ಸ್ಟಾದಲ್ಲಿ ಪೋಸ್ಟ್ ಹಾಕಿನೇ ಕೋಟಿ ಕೋಟಿ ರೂಪಾಯಿ ಜೇಬಿಗಿಳಿಸಿಕೊಳ್ತಾರೆ. ರಿಯಲಿ ಬ್ಯಾಟ್ ಹಿಡಿದು ಅಂಗಳದಲ್ಲಿ ಆರ್ಭಟಿಸುವ ಇವರೆಲ್ಲರೂ ಅದೃಷ್ಟವಂತರೇ ಬಿಡಿ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್ ಕೊಹ್ಲಿಯ ಒಂದು ಇನ್​ಸ್ಟಾಗ್ರಾಮ್ ಪೋಸ್ಟ್​​ಗೆ ಬರೋಬ್ಬರಿ​ 11.14 ಕೋಟಿ ರೂ. ಸಂಭಾವನೆ

https://newsfirstlive.com/wp-content/uploads/2023/07/VIRAT_KOHLI-5.jpg

Load More