newsfirstkannada.com

ಅಂತಿಥಾ ಕೊಹ್ಲಿ ನೀನಲ್ಲ.. ನಿನ್ನಂಥಾ ​ಕ್ರಿಕೆಟರ್​​ ಯಾರಿಲ್ಲ.. ಗ್ರೇಟೆಸ್ಟ್​​​​ ಅಥ್ಲಿಟ್ಸ್ ಲೀಸ್ಟ್​ನಲ್ಲಿ ವಿರಾಟನಿಗೆ 5ನೇ ಸ್ಥಾನ

Share :

10-11-2023

  ಕೊಹ್ಲಿ ಇನ್ಮುಂದೆ ಬರೀ ಗ್ರೇಟ್​ ಅಲ್ಲ, ಗ್ರೇಟೆಸ್ಟ್​ ಕ್ರಿಕೆಟರ್​​

  ದೇಶದ ಕೀರ್ತಿ ಬೆಳಗಿಸಿದ ಕಿಂಗ್ ಕೊಹ್ಲಿಗೆ ದೊಡ್ಡ ಸಲಾಂ..!

  ಖ್ಯಾತನಾಮ ಅಥ್ಲಿಟ್ಸ್​​​​ ಹಿಂದಿಕ್ಕಿದ ಸೆಂಚುರಿ ಸಾಮ್ರಾಟ..!

ವಿಶ್ವಕ್ರಿಕೆಟ್​ಗೆ ಒಬ್ಬನೇ ಕಿಂಗ್​​. ಅದು ವಿರಾಟ್ ಕೊಹ್ಲಿ ಅಂತ ಬಿಡಿಸಿ ಹೇಳಬೇಕಿಲ್ಲ. ಆನ್​​​​​​​​ ಫೀಲ್ಡ್​​​​ನ ರಣಕಲಿಗೆ ಈಗ ಇನ್ನೊಂದು ಪಟ್ಟ ಒಲಿದಿದೆ. ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿತನಕ ಯಾರಿಗೂ ಇದು ದಕ್ಕಿಲ್ಲ. ಅಂತಹದೊಂದು ಮಹತ್ತರ ಸಾಧನೆ, ಗೌರವಕ್ಕೆ ರನ್​ ಮಷೀನ್ ಭಾಜನರಾಗಿದ್ದಾರೆ.

ವಿರಾಟ್ ಕೊಹ್ಲಿ. ಈ ಹೆಸರಲ್ಲಿ ಅದೇನೋ ಒಂದು ಪವರ್ ಇದೆ. ಪ್ಯಾಡ್​ ಕಟ್ಟಿ ಕಣಕ್ಕಿಳಿದ್ರೆ ಸಾಕು ಸ್ಟೇಡಿಯಂನಲ್ಲಿ ಎಲೆಕ್ಟ್ರಿಕಲ್​​​ ಮಿಂಚಿನಂತೆ ಪ್ರವಹಿಸುತ್ತೆ. ಸಿಕ್ಸರ್​​​-ಬೌಂಡ್ರಿ ಸಿಡಿಸಿದ್ರಂತೂ ಮುಗಿದೇ ಹೋಯ್ತು. ಕೊಹ್ಲಿ, ಕೊಹ್ಲಿ ಅನ್ನೋ ಘೋಷಣೆಗೆ ಮೈದಾನದ ರೂಫ್ ಕಿತ್ತು ಹೋಗೋದೊಂದೆ ಬಾಕಿ ಇರುತ್ತೆ. ಆ ಮಟ್ಟಿಗೆ ವಿರಾಟರಾಧನೆ ನಡೆಯುತ್ತೆ. ಅದು ಹೋಮ್​​​​ ಆದರೂ ಸೈ, ಅವೇ ಆದರೂ ಸೈ, ಕೊಹ್ಲಿ ಜಪ ಮಾತ್ರ ಮಿಸ್ಸಾಗಲ್ಲ.

ವಿಶ್ವದಾದ್ಯಂತ ವಿರಾಟರಾಧನೆಗೆ ಕಾರಣ ಅವರ ಇನ್​​ಕ್ರೆಡಿಬಲ್ ಅಚೀವ್​​ಮೆಂಟ್​​. 15 ವರ್ಷದಲ್ಲಿ 26,310 ರನ್​​​​, 79 ಶತಗಳ ಸಿಡಿಸಿದ್ದಾರೆ. ಇದು ನಿಜಕ್ಕೂ ಅಸಾಮಾನ್ಯ ಸಾಧನೆಯೇ ಸೈ. ಹೀಗಾಗಿ ಕೊಹ್ಲಿ ಇಂದು ಲೆಜೆಂಡ್ರಿ, ವರ್ಲ್ಡ್ ಕ್ರಿಕೆಟ್​ನ ಗ್ರೇಟ್​​ ಬ್ಯಾಟ್​​​​​ಮನ್ ಅಂತ ಕರೆಸಿಕೊಳ್ತಿದ್ದಾರೆ. ಇಂತಹ ರನ್​ ರಾಕ್ಷಸನಿಗೆ ಈಗ ಮತ್ತೊಂದು ಹೊಸ ಪಟ್ಟ ದಕ್ಕಿದೆ.

ಆಲ್​​ಟೈಮ್​​​ ಗ್ರೇಟೆಸ್ಟ್​ ಅಥ್ಲಿಟ್ಸ್​​​ಗಳಲ್ಲಿ ಕೊಹ್ಲಿಗೆ 5ನೇ ಸ್ಥಾನ

ಕಿಂಗ್ ಕೊಹ್ಲಿ ವೃತ್ತಿಜೀವನದಲ್ಲಿ ಅದೆಷ್ಟೋ ಸಾಧನೆಗಳ ಶಿಖರವೇರಿದ್ದಾರೆ. ಅನೇಕ ಗೌರವ ಒಲಿದಿದೆ. ಇಂತಹ ಮಾಡ್ರನ್ ಕ್ರಿಕೆಟ್​ ದೊರೆಗೀಗ ಇನ್ನೊಂದು ಗೌರವ ಸಂದಿದೆ. ಅದು ಕ್ರಿಕೆಟ್​​ ಹಿಸ್ಟರಿಯಲ್ಲಿ ಇಲ್ಲಿತನಕ ಯಾರಿಗೂ ಸಂದಿರದ ಗೌರವ. ಸದ್ಯ ಅಂತಹದೊಂದು ವಿಶೇಷ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅದೇನಂದ್ರೆ ಗ್ರೇಟ್​​ ಕ್ರಿಕೆಟರ್ ಅನ್ನಿಸಿಕೊಂಡಿದ್ದ ಕೊಹ್ಲಿಗೆ ಗ್ರೇಟೆಸ್ಟ್​​​ ಪಟ್ಟ ಒಲಿದಿದೆ.

ಹೌದು, ಇದು ನಿಜಕ್ಕೂ ಇಡೀ ಭಾರತೀಯರೇ ಹೆಮ್ಮೆ ಪಡಬೇಕಾದ ಸಂಗತಿ. ಟಾಪ್​​​​​-10 ಆಲ್​ಟೈಮ್​ ಗ್ರೇಟೆಸ್ಟ್​​ ಅಥ್ಲಿಟಿಕ್ಸ್ ಲಿಸ್ಟ್ ಹೊರಬಿದ್ದಿದೆ. ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಕೊಹ್ಲಿ 5ನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ರನ್ ಮಾಸ್ಟರ್ ​​​ಪಾಪ್ಯುಲಾರಿಟಿ ಇನ್ನಷ್ಟು ಹೆಚ್ಚಾಗಿದ್ದಲ್ಲದೇ ದೇಶದ ಕೀರ್ತಿಯನ್ನು ಬೆಳಗಿಸಿದ್ದಾರೆ.

ಟಾಪ್​​​​-5 ಸಾರ್ವಕಾಲಿಕ ಗ್ರೇಟೆಸ್ಟ್​​​​ ಅಥ್ಲಿಟ್ಸ್​​​ ​​​​

1 ಲಿಯೋನೆಲ್ ಮೆಸ್ಸಿ
2 ಕ್ರಿಸ್ಟಿಯಾನೋ ರೊನಾಲ್ಡೊ
3 ಎಮ್​​​. ಅಲಿ
4 ಎಮ್​​​. ಜೋರ್ಡನ್​​
5 ವಿರಾಟ್ ಕೊಹ್ಲಿ

ಖ್ಯಾತ ಫುಟ್ಬಾಲ್​ ತಾರೆಗಳಾದ ಲಿಯೋನೆಲ್​ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೊ ಸಾರ್ವಕಾಲಿಕ ಅಥ್ಲಿಟಿಕ್ಸ್​​​​ ಲಿಸ್ಟ್​​ನಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಆ ಬಳಿಕ ಬಾಕ್ಸರ್​​ ಮನ್ಸೂರ್​ ಅಲಿ ಖಾನ್​​ ಪಟೌಡಿ ಇದ್ದಾರೆ. 4ನೇ ಸ್ಥಾನದಲ್ಲಿ ಖ್ಯಾತ ಬಾಸ್ಕೆಟ್​​​​​ಬಾಲ್​ ಪ್ಲೇಯರ್​ ಎಮ್​​​​​​​ ಜೋರ್ಡನ್​ ಇದ್ರೆ 5ನೇ ಸ್ಥಾನದಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ ಸ್ಥಾನ ಸಂಪಾದಿಸಿದ್ದಾರೆ.

ಖ್ಯಾತನಾಮ ಅಥ್ಲಿಟ್​ಗಳನ್ನ​​ ​​​ ಹಿಂದಿಕ್ಕಿದ ಸೆಂಚುರಿ ಸಾಮ್ರಾಟ..!

ಯಸ್​​, ವಿರಾಟ್ ಕೊಹ್ಲಿ ಆಲ್​​ಟೈಮ್​​​​​​​​​​​​​​​ 5ನೇ ಗ್ರೇಟೆಸ್ಟ್​​​​​​​​​​​​ ಅಥ್ಲಿಟ್ ಅನ್ನಿಸಿಕೊಳ್ಳುವ ಮೂಲಕ ಖ್ಯಾತನಾಮ ಅಥ್ಲಿಟ್ಸ್​​​​ಗಳನ್ನ ಹಿಂದಿಕ್ಕಿದ್ದಾರೆ. ಒಲಿಂಪಿಕ್​ ಪದಕ ವಿಜೇತ ಉಸೇನ್​​​ ಬೋಲ್ಟ್​​​, ಪ್ರಖ್ಯಾತ ಬಾಕ್ಸರ್​​​ ಮೈಕ್ ಟೈಸನ್​​​, ಎಲ್ ಜೇಮ್ಸ್​​​, 23 ಗ್ರ್ಯಾಂಡ್ ಸ್ಲಾಮ್​ ಒಡತಿ ಸೆರೆನಾ ವಿಲಿಯಮ್ಸ್​ ಹಾಗೂ ಅಮೆರಿದ ಈಜುಪಟು ಎಮ್​​ ಪಿಲಿಪ್ಸ್​​ನಂತ ಸ್ಟಾರ್​​ ಅಥ್ಲಿಟ್​​​ಗಳಿಗೆ ಕಿಂಗ್ ಕೊಹ್ಲಿ ಹೆಡ್ಡು ಹೊಡೆದಿದ್ದಾರೆ.

ಗ್ರೇಟೆಸ್ಟ್​​ ಅಥ್ಲಿಟ್ಸ್​​​​ ಲಿಸ್ಟ್​​​ನಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ

ಹೌದು, ಟಾಪ್​​​​-10 ಆಲ್​​​ಟೈಮ್ ಗ್ರೇಟೆಸ್ಟ್​​​​​ ಅಥ್ಲಿಟ್ಸ್​ ಲಿಸ್ಟ್​​ನಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಅಂದ್ರೆ ಅದು ವಿರಾಟ್ ಕೊಹ್ಲಿ. ಜತೆಗೆ ಒಬ್ಬನೇ ಏಷ್ಯನ್ ಕೂಡ ಅನ್ನೋದನ್ನ ಮರೆಯುವಂತಿಲ್ಲ. ಕೊಹ್ಲಿ ಬೇರೆ ಯಾವೊಬ್ಬ ಕ್ರಿಕೆಟರ್​​ ಇಲ್ಲಿ ಸ್ಥಾನ ಪಡೆದಿಲ್ಲ. ಗಾಡ್​ ಆಫ್​ ಕ್ರಿಕೆಟ್​​ ಸಚಿನ್​ ತೆಂಡುಲ್ಕರ್​​ಗೂ ಇಲ್ಲಿ ಅವಕಾಶವಿಲ್ಲ. 100 ಶತಕಗಳ ಒಡೆಯ ತೆಂಡುಲ್ಕರ್​​ ಅವರನ್ನೇ ಓವರ್​ಟೇಕ್ ಮಾಡಿ ಕೊಹ್ಲಿ ಸಾರ್ವಕಾಲಿಕ ಗ್ರೇಟೆಸ್ಟ್​ ಅಥ್ಲಿಟ್​ ಆಗಿ ಹೊರಹೊಮ್ಮಿದ್ದಾರೆ. ನಿಜಕ್ಕೂ ಕಿಂಗ್ ಕೊಹ್ಲಿಗೆ ಒಂದು ಬಿಗ್ ಸೆಲ್ಯೂಟ್​ ಹೊಡಿಯಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಂತಿಥಾ ಕೊಹ್ಲಿ ನೀನಲ್ಲ.. ನಿನ್ನಂಥಾ ​ಕ್ರಿಕೆಟರ್​​ ಯಾರಿಲ್ಲ.. ಗ್ರೇಟೆಸ್ಟ್​​​​ ಅಥ್ಲಿಟ್ಸ್ ಲೀಸ್ಟ್​ನಲ್ಲಿ ವಿರಾಟನಿಗೆ 5ನೇ ಸ್ಥಾನ

https://newsfirstlive.com/wp-content/uploads/2023/11/Kohli-3.jpg

Load More