newsfirstkannada.com

ವಿರಾಟ್ ಶ್ರೀಮಂತ​ ಆಟಗಾರ.. ಈಗ ಎಷ್ಟು ಕೋಟಿ ಒಡೆಯ ಗೊತ್ತಾ ಕಿಂಗ್​ ಕೊಹ್ಲಿ? ​

Share :

16-06-2023

    ಕೊಹ್ಲಿ ಯಾವ ಮೂಲದಿಂದ ಎಷ್ಟು ಆದಾಯ ಗಳಿಕೆ ಮಾಡ್ತಾರೆ?

    ಒಂದು ಇನ್​ಸ್ಟಾಗ್ರಾಮ್​​​​​​ ಪೋಸ್ಟ್​​ಗೆ 8.9 ಕೋಟಿ ರೂಪಾಯಿ..!

    ಮಾಡ್ರನ್ ಕ್ರಿಕೆಟ್ ದೊರೆ ಈಗ ಶ್ರೀಮಂತ ಕ್ರಿಕೆಟಿಗನಾಗಿದ್ದು ಹೇಗೆ?

ವಿರಾಟ್ ಕೊಹ್ಲಿ ಜಗಮೆಚ್ಚಿದ ಕ್ರಿಕೆಟಿಗ. ಕ್ರಿಕೆಟ್ ಅಂಗಳದ ಛಲದಂಕ. ದಶಕಗಳಿಂದ ಚೆಂಡುದಾಂಡಿನ ಲೋಕವನ್ನ ಆಳ್ತಿರೋ ಸುಲ್ತಾನ್​​​. ಈ ಮಾಡ್ರನ್​ ಕ್ರಿಕೆಟ್ ದೊರೆ ಈಗ ರನ್​​​​ ಗಳಿಕೆ ಮಾತ್ರವಲ್ಲ, ಆದಾಯ ಗಳಿಕೆಯಲ್ಲೂ ಕಿಂಗ್​​​. ಸೆಂಚುರಿ ಸರದಾರನ ಒಟ್ಟು ಆದಾಯ ಗಳಿಕೆ ಎಷ್ಟು?. ಜಾಹೀರಾತು, ಬ್ಯುಸಿ​ನೆಸ್​​​, ಎಂಡೋರ್ಸ್​ಮೆಂಟ್​​​​​ ಹಾಗೂ ಕ್ರಿಕೆಟ್​​ನಿಂದ ವಿರಾಟ್ ಗಳಿಸುವ ದುಡ್ಡೆಷ್ಟು?

ರನ್​​​ ಮಶೀನ್​ರ 15 ವರ್ಷಗಳ ಕ್ರಿಕೆಟ್ ಜೀವನ ವರ್ಣರಂಜಿತ. ಆಟಗಾರನಾಗಿ, ಕ್ಯಾಪ್ಟನ್ ಆಗಿ ಯಶಸ್ಸಿನ ಶಿಖರವೇರಿದ್ದಾರೆ. ಆನ್​ಫೀಲ್ಡ್​ ವಿರಾವೇಶಕ್ಕೆ ಉಡೀಸ್​​​​​​ ಆದ ದಾಖಲೆಗಳು ಲೆಕ್ಕಕ್ಕಿಲ್ಲ. 75 ಸೆಂಚುರಿಗಳ ಸಾಮ್ರಾಟ. ನಿಜಕ್ಕೂ ಕಿಂಗ್ ಕೊಹ್ಲಿಯ ಕ್ರಿಕೆಟ್​ ಚಾಪ್ಟರ್​​ ಒಂದು ಅದ್ಭುತ ಮತ್ತು ಅಸಾಧಾರಣವೇ ಸರಿ. ಅನ್​​ಫೀಲ್ಡ್​​ನ ಒಂಟಿಸಲಗ​​​ ಆಫ್​ ದಿ ಫೀಲ್ಡ್​​ನಲ್ಲೂ ಸೂಪರ್​ಸ್ಟಾರ್​​​. ಆದಾಯ ಗಳಿಕೆಯಲ್ಲಿ ಸಾವಿರ ಕೋಟಿ ಸಾಮ್ರಾಜ್ಯವನ್ನ ಕಟ್ಟಿದ್ದಾರೆ.

ವಿರಾಟ್ ಕೊಹ್ಲಿ 1,050 ಕೋಟಿ ಒಡೆಯ

ತನ್ನ ಮನೋಜ್ಞ ಬ್ಯಾಟಿಂಗ್​ನಿಂದಲೇ ಎಲ್ಲರನ್ನ ಮೋಡಿ ಮಾಡುವ ಕಿಂಗ್ ಕೊಹ್ಲಿ ಈಗ ಬರೀ ಟಾಪೆಸ್ಟ್​ ಕ್ರಿಕೆಟರ್ ಆಗಿ ಮಾತ್ರ ಉಳಿದಿಲ್ಲ. ಬದಲಿಗೆ ರಿಚೆಸ್ಟ್​ ಕ್ರಿಕೆಟರ್ ಕೂಡ. ಹೌದು, ಸೂಪರ್ ಸ್ಟಾರ್​​​​ ಒಟ್ಟು ಗಳಿಕೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ. ಅಂದಹಾಗೇ ಮಾಡ್ರನ್ ಕ್ರಿಕೆಟ್ ದೊರೆ ಈಗ ಬರೋಬ್ಬರಿ 1,050 ಕೋಟಿಗಳ ಒಡೆಯ.

ಕ್ರಿಕೆಟ್ ಆಟದಿಂದ ಕೊಹ್ಲಿ ಗಳಿಸುವ ದುಡ್ಡೆಷ್ಟು..?

ವಿರಾಟ್ ಕೊಹ್ಲಿ ವಿಶ್ವದ ರಿಚೆಸ್ಟ್​​ ಹಾಗೂ ಸ್ಫೋರ್ಟ್ಸ್ ಅಥ್ಲಿಟ್​ಗಳಲ್ಲಿ ಒಬ್ಬರು. ಇಂತಹ ಸಾವಿರ ಕೋಟಿಗಳ ಒಡೆಯ ಕ್ರಿಕೆಟ್​​​ ಮ್ಯಾಚ್​ವೊಂದರಿಂದ ಪಡೆಯುವ ಸಂಬಳವೆಸ್ಟು? ಯಾವ ಮಾದರಿ ಕ್ರಿಕೆಟ್​​ನಿಂದ ಎಷ್ಟು ಹಣ ಗಳಿಸ್ತಾರೆ? ಅನ್ನೋದನ್ನ ಕೇಳಿದ್ರೆ ಬೆರಗಾಗೋದು ಗ್ಯಾರಂಟಿ.

ಕ್ರಿಕೆಟ್​ನಿಂದ ಕೊಹ್ಲಿ ಆದಾಯ

  • ವಾರ್ಷಿಕ ಸಂಭಾವನೆ: 7 ಕೋಟಿ ರೂ.
  • ಟೆಸ್ಟ್​​​​​: 15 ಲಕ್ಷ ರೂಪಾಯಿ (ಪ್ರತಿ ಪಂದ್ಯಕ್ಕೆ)
  • ಏಕದಿನ: 6 ಲಕ್ಷ ರೂಪಾಯಿ (ಪ್ರತಿ ಪಂದ್ಯಕ್ಕೆ)
  • ಟಿ20: 3 ಲಕ್ಷ ರೂಪಾಯಿ (ಪ್ರತಿ ಪಂದ್ಯಕ್ಕೆ)
  • ಟಿ20 ಲೀಗ್​​​​​: ವಾರ್ಷಿಕ 15 ಕೋಟಿ ರೂಪಾಯಿ

ಎಂಡೋರ್ಸ್​ಮೆಂಟ್​​ನಿಂದ 1 ದಿನಕ್ಕೆ 8-10 ಕೋಟಿ ಗಳಿಕೆ

ಕ್ರಿಕೆಟ್ ಏನು ಅಲ್ಲ. ಬ್ರಾಂಡ್​ ಎಂಡೋರ್ಸ್​ಮೆಂಟ್​​​​​ಗಳಿಂದ ನೂರಾರು ಕೋಟಿ ರೂಪಾಯಿ ಕೊಹ್ಲಿ ಜೇಬಿಗಿಳಿಸಿಕೊಳ್ತಾರೆ. ಪ್ರತಿ ದಿನಕ್ಕೆ ಈ ಎಂಡೋರ್ಸ್​ಮೆಂಟ್​ಗಳಿಂದಲೇ 8 ರಿಂದ 10 ಕೋಟಿ ರೂಪಾಯಿ ಕೊಹ್ಲಿ ಕೈ ಸೇರುತ್ತೆ. ಅಂದ್ರೆ ಕ್ರಿಕೆಟ್​ನಲ್ಲಿ ಒಂದು ವರ್ಷಕ್ಕೆ ಪಡೆಯುವ ಸಂಬಳವನ್ನ ಇಲ್ಲಿ ಬರೀ ಒಂದು ದಿನದಲ್ಲಿ ಗಳಿಸ್ತಾರೆ.

ಟ್ವೀಟರ್​​​​ನಿಂದ 2.5 ಕೋಟಿ ರೂಪಾಯಿ ಜೇಬಿಗೆ

ನಾವು, ನೀವೆಲ್ಲರೂ ಸೋಷಿಯಲ್​ ಮೀಡಿಯಾಗಳನ್ನ ಮನರಂಜನೆಗಾಗಿ ಬಳಸ್ತೀವಿ. ಆದ್ರೆ ಕೊಹ್ಲಿ ಹಾಗಾಲ್ಲ. ಅವರು ಒಂದು ಇನ್​ಸ್ಟಾಗ್ರಾಮ್​ಗೆ ಪೋಸ್ಟ್​​ಗೆ ಬರೋಬ್ಬರಿ 8.9 ಕೋಟಿ ಹಣ ಗಳಿಸ್ತಾರೆ. ಇನ್ನು ಒಂದು ಟ್ವೀಟ್​ ಪೋಸ್ಟ್​ನಿಂದ ವಿರಾಟ್ ಗಳಿಸೋದು 2.5 ಕೋಟಿ ರೂಪಾಯಿ.

ಸ್ವಂತ ಸ್ಟಾರ್ಟ್​ಅಪ್​​ ಬ್ರಾಂಡ್ಸ್​​ನಿಂದಲೂ ಕಮಾಲ್​​..!

ಇನ್ನು ಕೊಹ್ಲಿ ಓರ್ವ ಕಿಂಗ್ ಆಫ್ ಕ್ರಿಕೆಟ್ ಮಾತ್ರವಲ್ಲ. ಅವರೊಬ್ಬ ಬಿಸಿನೆಸ್​ಮೆನ್ ಕೂಡ. ತಮ್ಮದೇ ಸ್ವಂತ ಸ್ಟಾರ್ಟ್​ಅಪ್​​ ಬ್ರಾಂಡ್ಸ್​​ನಿಂದಲೂ ಕೋಟಿ ಕೋಟಿ ಹಣ ಹರಿದು ಬರುತ್ತಾರೆ. ಒನ್​​​ 8, ವ್ರಾಂಗ್​​ ಹಾಗೂ ನುವೆಯಾ ನಂತಹ ಸ್ಟಾರ್ಟ್​ಅಪ್​​ಗಳಿಗೆ ಬಂಡವಾಳ ಹೂಡಿದ್ದಾರೆ. ಅಲ್ಲದೇ ಫುಟ್ಬಾಲ್​ ಕ್ಲಬ್​​, ಟೆನಿಸ್​​ ಟೀಮ್​ ಮತ್ತು ಪ್ರೋ ರೆಸ್ಲಿಂಗ್​​ ಲೀಗ್​​​​​​​ನಂತ ಸ್ಪೋರ್ಟ್ಸ್ ತಂಡಗಳ ಸಹ ಮಾಲೀಕರಾಗಿದ್ದಾರೆ.

ಆಸ್ತಿ ಮೌಲ್ಯ 110 ಕೋಟಿ, 31 ಕೋಟಿ ಬೆಲೆ ಬಾಳುವ ಕಾರು..!

1050 ಕೋಟಿಗಳ ಒಡೆಯನ ಆಸ್ತಿಮೌಲ್ಯ ಬರೋಬ್ಬರಿ 110 ಕೋಟಿ. ಮುಂಬೈನಲ್ಲಿ 2 ಐಷಾರಾಮಿ ಬಂಗಲೆಯನ್ನ ಹೊಂದಿದ್ದಾರೆ. ಜೊತೆಗೆ 31 ಕೋಟಿ ರೂಪಾ ಬೆಲೆ ಬಾಳುವ ಆಡಿ, ರೇಂಜ್ ರೋವರ್​​​​ ಹಾಗೂ ಫಾರ್ಚುನರ್​​​ ಕಾರುಗಳನ್ನ ಹೊಂದಿದ್ದಾರೆ.

ಕಿಂಗ್ ಕೊಹ್ಲಿ ಅದಾಯ ಗಳಿಕೆಯಲ್ಲಿ ಕ್ರಿಕೆಟ್ ದೇವರು ಸಚಿನ್​​ ತೆಂಡೂಲ್ಕರ್ ಸನಿಹದಲ್ಲಿದ್ದಾರೆ. ಸಚಿನ್​​ 1,350 ಹಾಗೂ ಎಂಎಸ್ ಧೋನಿ 1,040 ಕೋಟಿಗಳ ಒಡೆಯರಾಗಿದ್ದು ಮೊದಲೆರಡು ಸ್ಥಾನದಲ್ಲಿದ್ದಾರೆ. ಕೊಹ್ಲಿ ದರ್ಬಾರ್ ಹೀಗೆ ಮುಂದುವರಿದ್ರೆ ವಿರಾಟ್​​ ಶೀಘ್ರದಲ್ಲೇ ಭಾರತದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್ ಶ್ರೀಮಂತ​ ಆಟಗಾರ.. ಈಗ ಎಷ್ಟು ಕೋಟಿ ಒಡೆಯ ಗೊತ್ತಾ ಕಿಂಗ್​ ಕೊಹ್ಲಿ? ​

https://newsfirstlive.com/wp-content/uploads/2023/06/VIRAT_KOHLI_MONEY.jpg

Load More