newsfirstkannada.com

‘ಕ್ರಿಕೆಟ್​ ದೇವರ’ ನೋಡಿ ಕೊಹ್ಲಿ ಈ ಬ್ಯಾಟಿಂಗ್​ ಸ್ಟೈಲ್​ ಕಲಿಯಬೇಕು.. ಯಾಕೆ ಗೊತ್ತಾ..?

Share :

15-06-2023

    ಸಚಿನ್​ರನ್ನ ಫಾಲೋ ಮಾಡ್ತಾರಾ ವಿರಾಟ್​ ಕೊಹ್ಲಿ..?

    ಕವರ್​ ಡ್ರೈವ್ ಮಾಡುವಲ್ಲಿ ಎಡವುತ್ತಿರುವ ರನ್ ಮಷಿನ್

    ಸಿಡ್ನಿ ಟೆಸ್ಟ್​ನಲ್ಲಿ ಸಚಿನ್​ರನ್ನು ನೋಡಿ ಕೊಹ್ಲಿ ಕಲಿಯಬೇಕು

ಕಿಂಗ್ ಕೊಹ್ಲಿಯ ಬಲವೇ ಈಗ ವಿಕ್ನೇಸ್ ಆಗಿ ಕಾಡುತ್ತಿದೆ. ಆ ವಿಕ್ನೇಸ್​ ಅನ್ನೇ ಎನ್​ಕ್ಯಾಶ್​ ಮಾಡಿಕೊಳ್ಳುತ್ತಿರುವ ಎದುರಾಳಿಗಳು ಲಾಭವನ್ನ ಪಡ್ತಿದ್ದಾರೆ. ಆದ್ರೀಗ ಇದರಿಂದ ಕೊಹ್ಲಿ ಹೊರಬರಬೇಕಾದ ಅನಿವಾರ್ಯತೆಯೂ ಇದ್ದೇ ಇದೆ. ಇದಕ್ಕಾಗಿ ಕೊಹ್ಲಿ ಕ್ರಿಕೆಟ್ ದೇವರ ಪಾಲಿಸಿ ಮೊರೆ ಹೋಗಬೇಕಾದ ಅನಿವಾರ್ಯತೆ ಇದ್ದೇ ಇದೆ. ಅದೇನು..?

ವಿರಾಟ್​ ಕೊಹ್ಲಿ, ವಿಶ್ವ ಕ್ರಿಕೆಟ್​ನ ರನ್ ಮೆಷಿನ್​. ಈತನ ಬೋರ್ಗೆರತದ ಬ್ಯಾಟಿಂಗ್​​ ಕಣ್ತುಂಬಿಕೊಳ್ಳೋದೆ ಕಣ್ಣಿಗೆ ಹಬ್ಬ. ವಿರಾಟ್​ನ ಬ್ಯಾಟಿಂಗ್ ವೈಭವ ನೋಡಲೆಂದೇ ಸ್ಟೇಡಿಯಂ ಧಾವಿಸೋ ಅಭಿಮಾನಿಗಳಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯ ಬ್ಯಾಟ್​​ನಿಂದ​ ಸಿಡಿಯೋ ಕವರ್​ ಡ್ರೈವ್ ಶಾಟ್ ಅಂತೂ ನೆಕ್ಸ್ಟ್​ ಲೆವೆಲ್.

ಕವರ್​ ಡ್ರೈವ್ ಶಾಟ್ಸ್​, ಇದು ವಿರಾಟ್​ ಕೊಹ್ಲಿಯ ಫೇವರಿಟ್ ಶಾಟ್​ ಮಾತ್ರವಲ್ಲ. ವಿರಾಟ್​ ಕೊಹ್ಲಿಯ ಮೇನ್ ಸ್ಟ್ರೆಂಥ್​ ಕೂಡ ಆಗಿದೆ. ಕವರ್ ಡ್ರೈವ್​ ಮೂಲಕ ವೃತ್ತಿ ಜೀವನದ ಅರ್ಧದಷ್ಟು ರನ್​ ಕೊಳ್ಳೆ ಹೊಡೆದಿರೋ ವಿರಾಟ್​, ವೀರಾವೇಶಕ್ಕೆ ಇದೀಗ ಇದೇ ಫೇವರಿಟ್ ಶಾಟ್.. ವಿಕ್ನೇಸ್​ ಆಗಿ ಬದಲಾಗಿದೆ.

ವಿರಾಟ್​ ಕೊಹ್ಲಿಗೆ ಮುಳುವಾಗ್ತಿದೆ ಕವರ್​​ ಡ್ರೈವ್​..!

ಆನ್​ಫೀಲ್ಡ್​ನಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸೋ ವಿರಾಟ್, ಎಂಥಹ ಘಟಾನುಘಟಿ ಬೌಲರ್​ಗಳನ್ನೇ ಆಗಲಿ ಚಿಂದಿ ಉಡಾಯಿಸ್ತಾರೆ. ಆದ್ರೀಗ ಇದೇ ಕವರ್​ ಡ್ರೈವ್ ವಿರಾಟ್​ ಪಾಲಿಗೆ ಮುಳುವಾಗ್ತಿದೆ. ಇದಕ್ಕೆ ತಾಜಾ ಉದಾಹರಣೆ WTC ಫೈನಲ್​​ನ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ವಿಕೆಟ್ ಒಪ್ಪಿಸಿದ ರೀತಿ.

ಸ್ಟಂಪ್​ ಮೇಲಿನ ಚೆಂಡು ಕೆಣಕಿ ಕವರ್ ಶಾಟ್ಸ್​ನಲ್ಲಿ ವಿಕೆಟ್ ಒಪ್ಪಿಸಿದ್ದು. ಇದು ಜಸ್ಟ್​ WTC ಫೈನಲ್​​ನಲ್ಲಿ ಮಾತ್ರವೇ ಅಲ್ಲ. ಟೆಸ್ಟ್​ ಫಾರ್ಮೆಟ್​ ಬಹುಪಾಲು ಇನ್ನಿಂಗ್ಸ್​ ಇದೇ ರೀತಿ ಆಗಿತ್ತು. ಇದೀಗ ಕಿಂಗ್ ಕೊಹ್ಲಿ ಎಚ್ಚೆತ್ತುಕೊಳ್ಳಬೇಕಾದ ಅಗತ್ಯತೆ ಬಂದೊಂದಗಿದೆ.

ಸಚಿನ್​ರ ಫೇವರಿಟ್ ಸಿಡ್ನಿ ಇನ್ನಿಂಗ್ಸ್​ ನೋಡಿ ಕೊಹ್ಲಿ ಕಲಿಯಬೇಕು..!

ಸದ್ಯ ಇಕ್ಕಟ್ಟಿಗೆ ಸಿಲುಕಿರುವ ವಿರಾಟ್ ಕೊಹ್ಲಿ​, ನಿಜಕ್ಕೂ ಸಚಿನ್ ತೆಂಡುಲ್ಕರ್​ರ ಒಂದೇ ಒಂದು ಇನ್ನಿಂಗ್ಸ್​ನ ಬ್ಯಾಟಿಂಗ್ ನೋಡಿ ಕಲಿಯಬೇಕಿದೆ. ಆ ಒಂದು ಇನ್ನಿಂಗ್ಸೇ 2004ರ ಆಸೀಸ್​ ಎದುರಿನ ಸಿಡ್ನಿ ಟೆಸ್ಟ್​ ಆಗಿದೆ.

2004ರ ಆಸ್ಟ್ರೇಲಿಯಾ ಟೂರ್​ನ 4ನೇ ಟೆಸ್ಟ್​ ನಿಜಕ್ಕೂ ಸಚಿನ್ ಪಾಲಿಗೆ ಎಪಿಕ್ ಇನ್ನಿಂಗ್ಸ್​ ಅಂತಾನೇ ಖ್ಯಾತಿ ಪಡೆದಿದೆ. ಇದಕ್ಕೆ ಕಾರಣ ಸಚಿನ್ ತೆಂಡುಲ್ಕರ್ ಆಡಿದ್ದ 613 ನಿಮಿಷಗಳ ಬಿಗ್ ಇನ್ನಿಂಗ್ಸ್​ನಲ್ಲಿ ಒಂದೇ ಒಂದು ಕವರ್ ಡ್ರೈವ್ ಶಾಟ್ ಬಾರಿಸಿರಲಿಲ್ಲ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, 436 ಎಸೆತಗಳನ್ನ ಎದುರಿಸಿದ್ದ ಸಚಿನ್ ಅಜೇಯ 241 ರನ್​ಗಳ ಬೃಹತ್ ಇನ್ನಿಂಗ್ಸ್​ನಲ್ಲಿ 33 ಬೌಂಡರಿಗಳಿದ್ದವು. ಈ ಬೃಹತ್ ಇನ್ನಿಂಗ್ಸ್​ನಲ್ಲಿ ಒಂದೇ ಒಂದು ಸಿಂಗಲ್ ಕವರ್ ಡ್ರೈವ್ ಇರಲಿಲ್ಲ. ಇದು ನಿಜಕ್ಕೂ ಕ್ರಿಕೆಟ್ ಲೋಕದ ಅದ್ಭುತಗಳಲ್ಲಿ ಒಂದು.

ದೃಢಸಂಕಲ್ಪ ಮಾಡಿ ಗೆದ್ದಿದ್ದ ಕ್ರಿಕೆಟ್ ದೇವರು

2004ರ ಟೆಸ್ಟ್​ ಸರಣಿಯ ಆರಂಭಿಕ 3 ಪಂದ್ಯಗಳಲ್ಲಿ ಸಚಿನ್​, ನಿಜಕ್ಕೂ ಫೇಲ್ಯೂರ್ ಆಗಿದ್ದರು. ಮೂವಿಂಗ್ ಕಂಡೀಷನ್ಸ್​ನಲ್ಲಿ ಔಟ್​ ಸೈಡ್​ ದಿ ಆಫ್ ಸ್ಟಂಪ್​​​​​ ಬಾಲ್​​ಗೆ ಕವರ್ ಡ್ರೈವ್​ ಮೂಲಕ ಕೆಣಕಿ, ಕೆಣಕಿ ಪದೇ ಪದೇ ವಿಕೆಟ್ ಒಪ್ಪಿಸುತ್ತಿದ್ದರು. ಆದ್ರೆ, ಅಂತಿಮ ಟೆಸ್ಟ್​ ವೇಳೆ ಧೃಡ ನಿರ್ಧಾರ ಕೈಗೊಂಡಿದ್ದ ಸಚಿನ್ ಸಿಡ್ನಿ ಟೆಸ್ಟ್​ನಲ್ಲಿ ಒಂದೇ ಒಂದು ಕವರ್ ಡ್ರೈವ್ ಬಾರಿಸದಿರಲು ನಿರ್ಧರಿಸಿದ್ದರು. ಅದರಂತೆ ಆನ್​ಫೀಲ್ಡ್​ನಲ್ಲಿ ಕವರ್ ಡ್ರೈವ್​ನಿಂದ ಅಂತರ ಕಾಯ್ದಕೊಂಡ ಸಚಿನ್ ಬಿಗ್ ಇನ್ನಿಂಗ್ಸ್​ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.

ಕ್ರಿಕೆಟ್ ದೇವರನ್ನ ಫಾಲೋ ಮಾಡಬೇಕು ವಿರಾಟ್​..!

ನಿಜಕ್ಕೂ ಕ್ರಿಕೆಟ್ ಲೋಕದ ಸಾಮ್ರಾಟ ವಿರಾಟ್, ಗಾಡ್​ ಆಫ್ ಕ್ರಿಕೆಟ್ ಸಚಿನ್​ ತೆಂಡುಲ್ಕರ್​ರನ್ನ ಫಾಲೋ ಮಾಡಬೇಕಿದೆ. ಯಾಕಂದ್ರೆ, ಈಗಾಗಲೇ ಕಿಂಗ್ ಕೊಹ್ಲಿಯ ಸ್ಟ್ರೆಂಥ್​ ಆ್ಯಂಡ್ ವಿಕ್ನೇಸ್​ ಅನ್ನ ಅರಿತಿರೋ ಟೀಮ್ಸ್​, ಅದನ್ನೇ ಟಾರ್ಗೆಟ್​ ಮಾಡುತ್ತಿದ್ದಾರೆ. ಇದಕ್ಕೆ ಕಿಂಗ್ ಕೊಹ್ಲಿ ಸುಲಭದ ತುತ್ತಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಿರಾಟ್​, ಸಚಿನ್​​​​ರ ಸಿಡ್ನಿ ಇನ್ನಿಂಗ್ಸ್​ ನೋಡಿ ಕಲಿಯಬೇಕಾದ ಅನಿವಾರ್ಯತೆ ಇದ್ದೇ ಇದೆ.

ಅದೇನೇ ಆಗಲಿ, ಕಿಂಗ್ ಕೊಹ್ಲಿ ಆದಷ್ಟು ಬೇಗ ಇದರಿಂದ ಎಚ್ಚೆತ್ತುಕೊಳ್ಳಲಿ, ಎಂದಿನಂತೆ ವೀರಾವೇಶ ತೋರಿಸಲಿ ಅನ್ನೋದೆ ಕೋಟ್ಯಾಂತರ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಕ್ರಿಕೆಟ್​ ದೇವರ’ ನೋಡಿ ಕೊಹ್ಲಿ ಈ ಬ್ಯಾಟಿಂಗ್​ ಸ್ಟೈಲ್​ ಕಲಿಯಬೇಕು.. ಯಾಕೆ ಗೊತ್ತಾ..?

https://newsfirstlive.com/wp-content/uploads/2023/06/VIRAT_KOHLI_TEST.jpg

Load More